ಬಯಲು ಶೌಚಾಲಯವಾದ ಕಾಮತ್ ಹೋಟೆಲ್ ಕಟ್ಟಡ

ದಾವಣಗೆರೆ.ಜು.೧೮; ಹಳೇ ಪಿ.ಬಿ.ರಸ್ತೆಯ ಕೇಂದ್ರ ಬಿಂದು, ಮಹಾತ್ಮಗಾಂಧಿ ವೃತ್ತದಲ್ಲಿ ಅರ್ಧ ಶತಮಾನಗಳಿಂದ ನಾಡಿನಾದ್ಯಂತ ಜನಜನಿತ ಖ್ಯಾತ ಕಾಮತ್ ಹೊಟೆಲ್ ಕಟ್ಟಡ ಇಂದು ಬಯಲು ಶೌಚಾಲಯವಾಗಿ ದುರ್ನಾತದ ತಾಣವಾಗಿದೆ. ದಾವಣಗೆರೆಯ ಹೆಸರಾಂತ ಮನೆತನಗಳಲ್ಲಿ ಒಂದಾದ ನೀಲಗುಂದ ಮನೆತನಕ್ಕೆ ಸೇರಿದ ಈ ಕಟ್ಟಡ ರೋಗರುಜಿನಗಳ ಹೆಬ್ಬಾಗಿಲಾಗಿದೆ.
ತೆರೆದ ಕಟ್ಟಡವಾದ ಕಾರಣ ಸಾರ್ವಜನಿಕರಿಗೆ ಮಲ, ಮೂತ್ರ ವಿಸರ್ಜನೆಗೆ ಮುಕ್ತವಾದ ಅವಕಾಶ ಇದ್ದು ಇದರಿಂದಾಗಿ ಮುಂದೆ ಡೆಂಗ್ಯೂ ಜ್ವರ, ಮಲೇರಿಯಾ, ಚಿಕನ್‌ಗುನ್ಯಾ ಈ ಎಲ್ಲಾ ರೋಗಗಳ ಪ್ರವೇಶಕ್ಕೆ ಈ ಸ್ಥಳ ಪೂರಕವಾಗಿದೆ. ಕರೋನಾ ಮೂರನೇ ಅಲೆ ಇಲ್ಲಿಂದಲೇ ಪ್ರಾರಂಭವಾದರೂ ಆಶ್ಚರ್ಯ ಪಡಬೇಕಿಲ್ಲ. ಅಲ್ಲಿ ಓಡಾಡುವ ಜನತೆ ಮಾಸ್ಕ್ ಧರಿಸಿದರೂ ಮೂಗು ಮುಚ್ಚಿ ವಾಕರಿಕೆ ಮಾಡುವಂತಹ ವಾತಾವರಣ ಸೃಷ್ಠಿ ಆಗಿದೆ.
ಮಹಾನಗರ ಪಾಲಿಕೆ ತತ್‌ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಸ್ವಚ್ಛತೆ ಮಾಡಿಸಿ ಅದರ ಶುಲ್ಕ ದಂಡ ಸಹಿತ ಈ ಜಮೀನಿನ ಮಾಲೀಕರಿಗೆ ವಸೂಲಿಗೆ ಸುತ್ತೋಲೆ ಕಳಿಸಿ, ಜಾಗೃತಿ ವಹಿಸಬೇಕಾಗಿ ಸಾರ್ವಜನಿಕರ ಹಿತಾಸಕ್ತಿಯಿಂದ ಸಾಮಾಜಿಕ ಕಾಳಜಿಯಿಂದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.