Kuppam Gang: ಬಾತಿ ಗುಡ್ಡದ ಬಿಡಾರದ ಬಿಲದಲ್ಲಿ ಏನಿತ್ತು.? ಎಸ್ ಪಿ, ಡಿ ಸಿ ಆರ್ ಬಿ ಪೊಲೀಸರಿಗೆ 22 ಲಕ್ಷ ಸಿಕ್ಕದ್ದು ಯಾಕೆ.?

IMG-20210719-WA0052

ದಾವಣಗೆರೆ: ಅಟೆನ್ಷನ್‌ ಡೈವರ್ಟ್‌ ಮಾಡಿ ಹಣ ದೋಚುತ್ತಿದ್ದ ಕುಖ್ಯಾತ ಒಜಿ ಕುಪ್ಪಂ ಗ್ಯಾಂಗ್‌ನ 11 ಕಳ್ಳರನ್ನು ಬಂಧಿಸಿರುವ ಪೊಲೀಸರು, 22 ಲಕ್ಷ ನಗದು, 4 ಬೈಕ್‌ ವಶ ಕ್ಕೆ ಪಡೆದಿದ್ದಾರೆ.

ನಾಗರಾಜ್‌, ಚಿನ್ನು, ಗೋಗುಲ ತುಳಸೀಧರ್‌, ಕೆ. ವೆಂಕಟೇಶ್‌, ಜಿ. ಸ್ಯಾಮಸನ್‌, ವಿನೋದ್‌, ಸತೀಶ್‌, ಮೋಹನ್‌ರಾವ್‌, ಕೆ. ಸುಬ್ರಮಣಿ, ಪಿ. ಸುಬ್ರಮಣಿ ಹಾಗೂ ಪಿ. ವೆಂಕಟೇಶಲು, ಬಂಧಿತ ಆರೋಪಿಗಳು.

ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಗರಿ ತಾಲೂಕಿನ ಒ.ಜಿ. ಕುಪ್ಪಂ ಗ್ರಾಮದವರಾದ ಇವರು, ದಾವಣಗೆರೆ ತಾಲೂಕಿನ ಬಾತಿ ಗುಡ್ಡದಲ್ಲಿ ಬಿಡಾರ ಹೂಡಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ದಾವಣಗೆರೆ ಎಸ್ಪಿ ಸಿ.ಬಿ. ರಿಷ್ಯಂತ್‌ ಮಾಹಿತಿ ನೀಡಿದರು.

ದಾವಣಗೆರೆ ಜಿಲ್ಲೆ 13 ಪ್ರಕರಣಗಳಲ್ಲಿ ಭಾಗಿಯಾಗಿರುವ ಈ ಗ್ಯಾಂಗ್ ಒಟ್ಟಾರೆ 26 ಪ್ರಕರಣಗಳಲ್ಲಿ ಜನರ ಗಮನ ಬೇರೆಡೆ ಸೆಳೆದು ಹಣ ದೋಚಿದೆ. ಆರು ವಿಧದಲ್ಲಿ ಜನರ ಬೆರೆಡೆ ಸೆಳೆದು ಈ ಕೃತ್ಯ ಎಸಗುತ್ತಿತ್ತು ಎಂದು ಎಸ್ಪಿ ತಿಳಿಸಿದರು.

ಬಂಧಿತರಿಂದ 22 ಲಕ್ಷ ನಗದು, 4 ಬೈಕ್‌, 4 ಮೊಬೈಲ್‌, 20 ಬಾಲ್‌ ಬೇರಿಂಗ್‌, 2 ಬೇರಿಂಗ್‌ ಬಾಲ್ಸ್‌ ಪಂಪಿಂಗ್‌ ಮಷಿನ್‌, 2 ತುರಿಕೆ ಪುಡಿ ಪ್ಯಾಕೆಟ್‌, ಕ್ಯಾಟರ್‌ ಬಿಲ್‌ ವಶಕ್ಕೆ ಪಡೆಯಲಾಗಿದೆ ಎಂದರು.

ಪತ್ತೆ ಕಾರ್ಯದಲ್ಲಿ ಡಿಸಿಆರ್‌ಬಿ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಬಸವರಾಜ್ ಬಿ.ಎಸ್ ಹಾಗೂ ಸಿಬ್ಬಂದಿಯವರಾದ ಎಂ.ಆಂಜಿನಪ್ಪ, ಎಎಸ್‌ಐ ಕೆ.ಸಿ.ಮಜೀದ್, ಆಂಜನೇಯ, ರಾಘವೇಂದ್ರ, ಮಾರುತಿ, ರಮೇಶ ನಾಯ್ಕ, ಬಸವರಾಜ, ನಟರಾಜ್, ಸುರೇಶ್, ಮಲ್ಲಿಕಾರ್ಜುನ, ಬಾಲರಾಜು, ರಾಘವೇಂದ್ರ, ಶಾಂತರಾಜು, ಉಮೇಶ್ ಬಿಸನಾಳ, ನಿಂಗರಾಜ, ಪ್ರಶಾಂತ ಕುಮಾರ ಇವರುಗಳು ಭಾಗವಹಿಸಿದ್ದರು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!