ಮಳೆಯಿಂದ ತೊಂದರೆಯಾದ ಗ್ರಾಮಗಳಿಗೆ ಶಾಸಕರ ಭೇಟಿ, ಕೆರೆಗಳಿಗೆ ಬಾಗಿನ ಆರ್ಪಿಸಿದ ಎಸ್ ವಿ ಆರ್

ದಾವಣಗೆರೆ: ಜಗಳೂರಿನ ಜನಪ್ರಿಯ ಶಾಸಕರಾದ ಎಸ್ ವಿ ರಾಮಚಂದ್ರಪ್ಪ ರವರು ಇಂದು ಜಗಳೂರು ವಿಧಾನ ಸಭಾ ಕ್ಷೇತ್ರದ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾಗೂ ಚಟ್ನಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುರೇಮಾಗನಹಳ್ಳಿ , ಚಟ್ನಿಹಳ್ಳಿ, ನರೇಬೋಮ್ಮನಹಳ್ಳಿ, ರಾಮಘಟ್ಟ , ಉಚ್ಚಂಗಿದುರ್ಗ, ಬೇವಿನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ
ಮನೆ ಬಿದ್ದವರಿಗೆ ತಮ್ಮ ಸ್ವಂತದಿಂದ ಹತ್ತು ಸಾವಿರ ( 10.000 ) ಸಾವಿರ ರೂಪಾಯಿ ನೀಡಿ ಮಾತನಾಡಿ ನಾನು ಈ ಹಣವನ್ನು ವೆಕ್ತಿಕವಾಗಿ ಕೊಡುತ್ತಿದ್ದೆನೆ ಇನ್ನೂ ನಿಮಗೆ ಸರ್ಕಾರದಿಂದ ಪರಿಹಾರ ಬರುತ್ತೆ ಎಂದು ಪಕ್ಕದಲೆ ಇದ್ದ ತಹಸಿಲ್ದಾರರಿಗೆ ಹೇಳಿ ಹಾನಿಗೋಳಗದ ಬಡವರಿಗೆ ಪ್ರತಿಯೊಬ್ಬರಿಗೂ ಪರಿಹಾರ ಕೊಡಿಸುವಂತೆ ಸೂಚಿಸಿದರು
ಕುರೇಮಾಗನಹಳ್ಳಿ, ಚಟ್ನಿಹಳ್ಳಿ, ಕೆರೆಗಳಿಗೆ ಹಾಗೂ ಉಚ್ಚಂಗಿದುರ್ಗದ ಬೀರನಕಟ್ಟೆ ಗೆ ಬಾಗಿನ ಆರ್ಪಿಸಿದರು.
ಈ ಸಂದರ್ಭಲ್ಲಿ ತಹಸಿಲ್ದಾರರಾದ ನಂದೀಶ್, ಇಂಜಿನಿಯರ್ ಮಂಜುನಾಥ, ಉಪತಹಸಿಲ್ದಾರರಾದ ಪಾತೀಮ್, ಪಿ ಎಸ್ ಐ ಕಿರಣ್ ಕುಮಾರ್, ಪಿಡಿಓ ಸಂಗಪ್ಪ, ಉಮೇಶ, ಗ್ರಾಮ ಪಂಚಾಯ್ತಿ ಅದ್ಯಕ್ಷರಾದ ಮಮಾತ, ಅಜ್ಜಯ್ಯ, ಉಪದ್ಯಕ್ಷರಾದ ಕಾಳಮ್ಮ, ಮುಖಂಡರಾದ ಬೇವಿನಹಳ್ಳಿ ಕೆಂಚನಗೌಡ್ರು, ಚಟ್ನಿಹಳ್ಳಿ ರಾಜಪ್ಪ , ಸೋಕ್ಕೆ ನಾಗರಾಜ, ಉಚ್ಚಂಗಿದುರ್ಗ ರವಿಗೌಡ್ರು, ಎಸ್, ಹನುಮಂತಪ್ಪ, ಹುಚ್ಚಪ್ಳ ಜಯ್ಯಣ್ಣ, ಭರಮಣ್ಣ, ಕಮ್ಮತ್ತಹಳ್ಳಿ ಸಿದ್ಧಣ್ಣ , ಕರಡಿದುರ್ಗ ಚೌಡಪ್ಪ, ಸೇರಿದಂತೆ ಉಚ್ಚಂಗಿದುರ್ಗ ಗ್ರಾಮ ಪಂಚಾಯ್ತಿ ಮುಖಂಡರು, ಹಾಗೂ ಚಟ್ನಿಹಳ್ಳಿ ಪಂಚಾಯ್ತಿ ಮುಖಂಡರು 07 ಪಂಚಾಯ್ತಿ ವ್ಯಾಪ್ತಿಯ ಮುಖಂಡರುಗಳು ಉಪಸ್ಥಿತರಿದ್ದರು