ಅಮರ್ ಜವಾನ್ ಪಾರ್ಕ್ ಹೆಸರಲ್ಲಿ ದುಡಾದಿಂದ ಜನರಿಗೆ ಮೋಸ.! ಪ್ರವೀಣ್ ಕುಮಾರ್

ದಾವಣಗೆರೆ: ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಇತ್ತೀಚೆಗೆ ಅಮರ್ ಜವಾನ್ ಎಂಬ ಹೆಸರನ್ನಿಟ್ಟು ನೂತನ ಪಾರ್ಕ್ ಉದ್ಘಾಟನೆ ಮಾಡಿರುವುದು ನಿಜಕ್ಕೂ ಸ್ವಾಗತ. ಆದರೆ, ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳದೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪಾರ್ಕ್ ಉದ್ಘಾಟನೆ ಮಾಡಿರುವುದು ನಿಜಕ್ಕೂ ಬೇಸರ ತರುವಂತಾಗಿದೆ.
ಕೇವಲ ಕಾಂಪೌಂಡ್ ಒಂದು ಗೇಟ್ ಹಾಕಲಾಗಿದೆ ಇದಕ್ಕೆ 50 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಲಾಗಿದೆ. ಉದ್ಘಾಟನೆ ಬಳಿಕ ಗೇಟ್ ಗೆ ಬೀಗ ಹಾಕಿದ್ದು, ದೂಡಾ ಅಮರ್ ಜವಾನ್ ಹೆಸರಲ್ಲಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದೆಯಾ ಎಂಬ ಅನುಮಾನ ಕಾಡುತ್ತಿದೆ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಆರೋಪಿಸಿದ್ದಾರೆ.
ದೂಡಾ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ ಅವರ ದೇಶ ಪ್ರೇಮವನ್ನ ಒಪ್ಪೋಣ ಆದರೆ ಪಾರ್ಕ್ ಒಳಗಡೆ ಯಾವುದೇ ಸೌಲಭ್ಯ, ಸೌಕರ್ಯ ವ್ಯವಸ್ಥೆ ಮಾಡ ದೇ ಯಾವ ಉದ್ದೇಶಕ್ಕಾಗಿ ಉದ್ಯಾನವನ ಉದ್ಘಾಟನೆ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಾಂಪೌಂಡ್ ಕಟ್ಟಿಸಿರುವುದು ಕೇವಲ ಪ್ರಚಾರಕ್ಕೆ ಎಂದು ಅಧ್ಯಕ್ಷರ ವಿರುದ್ಧ ಆರೋಪ ಮಾಡಿದ್ದಾರೆ. ಕೂಡಲೇ ಈ ಉದ್ಯಾನವನ್ನ ಸಂಪೂರ್ಣವಾಗಿ ಸೌಲಭ್ಯ ಕಲ್ಪಿಸಿ ಸಾರ್ವಜನಿಕರ ಅನುಕೂಲಕ್ಕೆ ಅವಕಾಶ ಕಲ್ಪಿಸಬೇಕೆಂದು ಪ್ರವೀಣ್ ಕುಮಾರ್ ಒತ್ತಾಯಿಸಿದ್ದಾರೆ.