ಗೋಕರ್ಣ ಮಠಾಧೀಶರಿಗೆ ಎಲ್.ವಿ.ಟಿ. ಆಡಳಿತ ಮಂಡಳಿಯಿದ ಶ್ರದ್ಧಾಂಜಲಿ

ದಾವಣಗೆರೆ, ಜು.೨೧; ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಗುರುಗಳಾದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠಾಧೀಶರಾದ ಶ್ರೀ ವಿದ್ಯಾಧಿರಾಜತೀರ್ಥ ಮಹಾಸ್ವಾಮೀಜಿಯವರು ಸ್ವರ್ಗಸ್ಥರಾಗಿದ್ದು ನಾಡಿನ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಸಮುದಾಯಕ್ಕೆ ಅತೀವ ದುಃಖ ತಂದಿದೆ.
ಧಾರ್ಮಿಕ, ಶೈಕ್ಷಣಿಕ ಸಮಾಜಿಕ ಕಾಳಜಿಯ ಗುರುವರ್ಯರ ಅಸ್ತಂಗತಕ್ಕೆ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಚೇಂಪಿ ಶ್ರೀಲಕ್ಷ್ಮಿ ವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಸ್.ದಿನಕರ ಭಗವಂತ ಶೆಣೈ, ಪ್ರಧಾನ ಕಾರ್ಯದರ್ಶಿ ಕೋಟ ಶ್ರೀಕಾಂತ್ ಶೆಣೈ, ಖಜಾಂಚಿ ಟಿ.ಗಣಪತಿ ನಾಯಕ್ ಸೇರಿದಂತೆ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳ ಸರ್ವ ಸದಸ್ಯರ ಪರವಾಗಿ ಭಕ್ತಿಪೂರ್ವಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.