ಹೊಸದುರ್ಗದ ಕನಕದಾಸರ ಏಕಶಿಲಾ ವಿಗ್ರಹಕ್ಕೆ ತಕ್ಷಣಕ್ಕೆ 5 ಕೋಟಿ ಬಿಡುಗಡೆಗೆ ಆದೇಶಿಸಿದ ಬಿ ಎಸ್ ವೈ

ದಾವಣಗೆರೆ: ಭಾರತದಲ್ಲೇ ಅತೀ ಎತ್ತರವಾದ ಕನಕದಾಸರ ಏಕಶಿಲಾ ವಿಗ್ರಹಕ್ಕೆ 10 ಕೋಟಿ ರೂಪಾಯಿ ಅನುದಾನ ನೀಡುವಂತೆ ಹೊಸದುರ್ಗ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು ಕನಕಧಾಮದಲ್ಲಿ ಭಾರತದ ಅತೀ ಎತ್ತರವಾದ ಕನಕ ಮೂರ್ತಿಯು ಪ್ರತಿಷ್ಠಾಪನೆಗೊಳ್ಳುತ್ತಿದ್ದು, ಹಣಕಾಸಿನ ಕೊರತೆಯಿಂದ ಕಾರ್ಯವು ಸ್ಥಗಿತಗೊಂಡಿದೆ. ಇದೊಂದು ಪ್ರವಾಸಿ ಕೇಂದ್ರವಾಗಿ ಸಮುದಾಯಕ್ಕೆ ಅರ್ಪಣೆ ಆಗಬೇಕಾಗಿದೆ. ಆದ್ದರಿಂದ ಹಣ ಮಂಜೂರು ಮಾಡುವಂತೆ ಸ್ವಾಮೀಜಿ ಕೇಳಿಕೊಂಡಿದ್ದಾರೆ.
ಕಳೆದ ಏಪ್ರಿಲ್ ನಲ್ಲಿ ಕಾಗಿನೆಲೆ ಕನಕಗುರು ಪೀಠದಿಂದ ಬೆಳ್ಳೊಡಿಯಲ್ಲಿ ನಡೆದ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ 5 ಕೋಟಿಯನ್ನು ಘೋಷಣೆ ಮಾಡಿದ್ದು ತಕ್ಷಣವೇ ಬಿಡುಗಡೆ ಮಾಡುವ ಭರವಸೆಯನ್ನು ನೀಡಲಾಗಿತ್ತು. ಅದಕ್ಕಾಗಿ ವಿಶೇಷ ಅನುದಾನ ನೀಡಿ ಈ ಮಹಾಕಾರ್ಯಕ್ಕೆ ಸಹಕರಿಸಬೇಕೆಂದು ಅವರು ಕೋರಿದರು.