CM Cover: ಸಿಎಂ ಮನೆಯಲ್ಲಿ ಮಠಾಧೀಶರುಗಳಿಗೆ ನೀಡಿದ ಕವರ್ ನಲ್ಲಿ ಏನಿದೆ.? ಭಾರಿ ಚರ್ಚೆಗೆ ಗ್ರಾಸವಾದ ವೈಟ್ ಸೀಲ್ಡ್ ಕವರ್.!

ಬೆಂಗಳೂರು: ರಾಜ್ಯದ ಸಿಎಂ ಬಿ ಎಸ್ ಯಡಿಯೂರಪ್ಪ ಬದಲಾವಣೆಗೆ ಹೈಕಮಾಂಡ್ ನಿಂದ ಸೂಚನೆ ಹಿನ್ನೆಲೆಯಲ್ಲಿ ವೀರಶೈವ ಮಠಾಧೀಶರಿಂದ ಬಿ ಎಸ್ ವೈ ಬದಲಾವಣೆ ಮಾಡಬಾರದು ಎಂದು ಒತ್ತಡ ಹೆಚ್ಚಾಗುತ್ತಿದೆ. ಬುಧವಾರದಂದು ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ರನ್ನ ಭೇಟಿ ಮಾಡಿದ್ದ ರಾಜ್ಯದ ವಿವಿಧ ಮಠದ ಸ್ವಾಮೀಜಿಗಳು, ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡಬಾರದು ಎಂದು ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ.
ರಾಜ್ಯದಿಂದ ವಿವಿಧ ಮಠಾದೀಶರು ಇಂದು ಸಿಎಂ ನಿವಾಸದಲ್ಲಿ ಸಭೆಯಲ್ಲಿ ಭಾಗಿಯಾಗಿದ್ದರು. ಸಿಎಂ ಸ್ವಾಮೀಜಿಗಳ ಜೊತೆ ಚರ್ಚಾ ವೇಳೆ ನಡೆದಿರುವ ಅಚ್ಚರಿಯ ಪ್ರಸಂಗವೊಂದು ಇದೀಗ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮಂಗಳವಾರಕ್ಕಿಂತಾ ಇಂದು ಬುಧವಾರ ಹಿಚ್ಚಿನ ಸಂಖ್ಯೆಯಲ್ಲಿ ಹಲವು ಮಠಾಧೀಶರು ಬಿ ಎಸ್ ಯಡಿಯೂರಪ್ಪ ರನ್ನ ಭೇಟಿ ಮಾಡಿ ನಿಮ್ಮ ಜೊತೆ ನಾವಿದ್ದೆವೆ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಿಎಂ ಬಿ ಎಸ್ ವೈ ಮನೆಯಲ್ಲಿ ನೀಡಿದ ಕವರ್ ಚರ್ಚೆ..!
ಈ ವೇಳೆಯಲ್ಲಿ ಬಿ ಎಸ್ ವೈ ಪುತ್ರ ಬಿ.ವೈ.ವಿಜಯೇಂದ್ರ ಅವರ ಆಪ್ತ ಹಾಗೂ ಕೆ ಆರ್ ಡಿ ಸಿ ಎಲ್ ಅಧ್ಯಕ್ಷ ರುದ್ರೇಶ್, ಸಿಎಂ ಸ್ವಾಮೀಜಿಗಳ ಜೊತೆಯಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಮನೆಯಲ್ಲಿ ನೆರೆದಿದ್ದ ಎಲ್ಲ ಸ್ವಾಮೀಜಿಗಳಿಗೆ ಒಂದೊಂದು ಸೀಲ್ಡ್ ಕವರ್ ನೀಡಿದ್ದಾರೆ. ಇದೀಗ ಈ ಕವರ್ ಸಂಗತಿ ಎಲ್ಲರಿಗೂ ಕುತೂಹಲಕ್ಕೆ ಕಾರಣವಾಗಿದೆ. ಆ ಕವರ್ನಲ್ಲಿ ಏನಿತ್ತು.? ಎಂಬ ಚರ್ಚೆ ಸಾರ್ವಜನಿಕ ಕ್ಷೇತ್ರದಲ್ಲಿ ಆರಂಭವಾಗಿದೆ.! ಈ ಹಿಂದೆಯೂ ಸ್ವಾಮೀಜಿಗಳಿಗೆ ಕವರ್ ನೀಡಿದ್ದ ಸಂದರ್ಭದಲ್ಲಿ ಯಾವುದೇ ರೀತಿಯ ಚರ್ಚೆಗಳು ನಡೆದಿದ್ದಿಲ್ಲ, ಆದ್ರೆ ಈ ಭಾರಿ ಕವರ್ ಹಂಚಿರುವ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ.
ಬಿಜೆಪಿ ಮುಖಂಡ ರುದ್ರೇಶ್ ಅವರು ಸ್ವಾಮೀಜಿಗಳಿಗೆ ಕವರ್ ಹಂಚಿಕೆ ಮಾಡುತ್ತಿರುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸ್ವಾಮೀಜಿಗಳಿಗೆ ಜೋಳಿಗೆಯಲ್ಲಿ ಗೌರವ ಸಮರ್ಪಣೆ ವಾಡಿಕೆಯಂತೆ ನಡೆದುಕೊಂಡು ಬಂದಿದ್ದರೂ ಸಿಎಂ ಬದಲಾವಣೆಯ ಚರ್ಚಾ ಸಮಯದಲ್ಲಿ ವೀರಶೈವ ಮಠಾಧೀಶರು ಒಕ್ಕೊರಲಿನಿಂದ ಬೆಂಬಲ ನೀಡಿರುವ ವಿಷಯ ಕೂಡ ಭಾರಿ ಚರ್ಚೆಯಲ್ಲಿರುವಾಗ ಕವರ್ ವಿಷಯ ಕೂಡ ಅನೇಕ ರಿತೀಯ ಮಾತುಗಳು ಕೇಳಿ ಭರುತ್ತಿವೆ. ಇದಕ್ಕೆ ಉತ್ತರ ಸಿಎಂ ನೀಡ್ತಾರಾ ಅಥವಾ ಸ್ವಾಮೀಜಿಗಳು ನೀಡ್ತಾರಾ ಅಂತಾ ಕಾದು ನೋಡಬೇಕಾಗಿದೆ.