CM Resign.? ಬಿ ಎಸ್ ವೈ ಗೆ ಜುಲೈ 26 ವರದಾನವಾಗುತ್ತಾ.? ಹೈ ಕಮಾಂಡ್ ಸಂದೇಶ ರಾಜಕೀಯ ದೃವೀಕರಣವಾಗುತ್ತಾ.?

ಬೆಂಗಳೂರು: ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ಬಿ.ಎಸ್. ಯಡಿಯೂರಪ್ಪ ಮೌನಮುರಿದಿದ್ದು, ಕೇಂದ್ರದ ವರಿಷ್ಠರ ನಿರ್ಧಾರಕ್ಕೆ ತಾವು ಬದ್ಧ ಇರುವುದಾಗಿ ನೀಡಿರುವ ಅವರ ಹೇಳಿಕೆ ಪರೋಕ್ಷವಾಗಿ ತಾವು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಸುಳಿವನ್ನು ಬಿಟ್ಟುಕೊಟ್ಟಿದೆ.
ನಿನ್ನೆಯಷ್ಟೆ ಅವರು ಟ್ವಿಟರ್ ನಲ್ಲಿ ರಾಜಕೀಯ ಬದಲಾವಣೆಯಾದರೆ ಅಭಿಮಾನ ಕಾನೂನು ಮಿತಿ ಮೀರಬಾರದು ಎಂದು ಪ್ರತಿಭಟನೆ ಸಭೆ ನಡೆಸದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದರು.
ಅದರಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜುಲೈ 25 ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಲಿದ್ದು, ಹೈಕಮಾಂಡ್‌ನಿಂದ ಸಂದೇಶ ಬರಲಿದೆ. ಜುಲೈ 26 ಕ್ಕೆ ಹೈಕಮಾಂಡ್ ಹೇಳಿದಂತೆ ಕೇಳುವೆ. ನನ್ನ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ವಿಶೇಷ ಪ್ರೀತಿ ಇಟ್ಟು 75 ವರ್ಷ ಆದರೂ ನನ್ನನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಈಗ ಅವರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.
ವರಿಷ್ಠರು ಮತ್ತೊಮ್ಮೆ ಪಕ್ಷ ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ನನ್ನ ಹೆಗಲಿಗೆ ವಹಿಸಿದ್ದಾರೆ. ಮಠಾಧೀಶರು ಹಿಂದಿನಿಂದಲೂ ನನ್ನ ಬೆಂಬಲಕ್ಕೆ ನಿಂತು. ಸಹಕಾರ ನೀಡಿದ್ದಾರೆ. ಅವರೆಲ್ಲರ ಬೆಂಬಲಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದರು.
ಹೈಕಮಾಂಡ್ ಏನೇ ನಿರ್ಧಾರ ಕೈಗೊಂಡರೂ ಅದಕ್ಕೆ ಅಭಿಮಾನಿಗಳು ಯಾವುದೇ ಪ್ರತಿರೋಧ ತೋರುವುದು ಬೇಡ. ಅವರ ತೀರ್ಮಾನಕ್ಕೆ ನಾನಜ ಬದ್ಧನಿದ್ದೇನೆ. ಎಂಬ ಸಂದೇಶವನ್ನು ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ನೀಡಿದರು.