Matka Audio: ಪೊಲೀಸ್ ದಾಳಿಗೆ ಬೆಚ್ಚಿಬಿದ್ದು ಆಡಿಯೋ ರಿಲೀಸ್ ಮಾಡಿದ ಮಟ್ಕಾ ಕಿಂಗ್ ಪಿನ್.!

Matka – part – 2 Impact
ಹಾವೇರಿ: ಮಟ್ಕಾ (ಓಸಿ) ದಂಧೆಯ ಮೇಲೆ ‘ಗರುಡಾ ವಾಯ್ಸ್’ ಹಾಗೂ ಎಸ್ ಪಿ ಹನುಮಂತರಾಯ ಸಾರಿರುವ ಸಮರಕ್ಕೆ ಮಟ್ಕಾ ಕಿಂಗ್ ಪಿನ್ ಬೆಚ್ಚಿಬಿದ್ದನಾ.!
ಮಟ್ಕಾ ದಂಧೆಯಿಂದ ಹಲವು ಕುಟುಂಬಗಳು ಬೀದಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ದಂಧೆಯನ್ನು ಸದೆಬಡಿಯಲೆಂದೆ ಪಣ ತೊಟ್ಟಿರುವ ಗರುಡಾವಾಯ್ಸ್ ತನಿಖಾ ತಂಡ ರಹಸ್ಯ ಕಾರ್ಯಾಚರಣೆ ನಡೆಸಿ ಹಾವೇರಿ ಜಿಲ್ಲೆಯ ವ್ಯಾಪ್ತಿಯ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕುಮಾರಪಟ್ಟಣಂ ಹಾಗೂ ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ಮಟ್ಕಾದಂಧೆ ರಾಜಾರೋಷವಾಗಿ ನಡೆಯುತ್ತಿದ್ದರ ಬಗ್ಗೆ ಮತ್ತು ಹಲವೆಡೆ ನಡೆಯುತ್ತಿರುವ ಮಟ್ಕ ಅಡ್ಡೆಗಳ ವರದಿ ಮಾಡಿತ್ತು.
ಇದಕ್ಕೆ ಖುದ್ದು ಜಿಲ್ಲಾ ಎಸ್ಪಿ ಹನುಮಂತರಾಯ ಅವರೇ ಪೊಲೀಸ್ ತಂಡದೊಂದಿದೆ ದಾಳಿ ನಡೆಸಿ, ಮಟ್ಕ ಜೂಜುಕೋರರನ್ನು ಬಂಧಿಸಿದ್ದರು. ಜತೆಗೆ ಗರುಡಾವಾಯ್ಸ್ ಕಳಕಳಿಗೆ ಶ್ಲಾಘನೆ ವ್ಯಕ್ತಪಡಿಸಿದ್ದರು.
ಆದರೆ, ಈಗ ಇಂತಹದ್ದೇ ಒಂದು ಪ್ರಕರಣ ಮತ್ತೆ ಮಟ್ಕಾ ಹಾವೇರಿ ಜಿಲ್ಲೆ ತಾಲ್ಲೂಕಿನ ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 46 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮಟ್ಕಾ ದಂಧೆಗೆ ಬ್ರೇಕ್ ಹಾಕೋರೆ ಇಲ್ಲದಂತಾಗಿದೆ. ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 60 ಜನ ಮಟ್ಕಾ ಏಜೆಂಟ್ ರಿಂದ ಪ್ರತಿ ದಿನ 8 ರಿಂದ 9 ಲಕ್ಷ ಹಣದ ವ್ಯವಹಾರ ನಡೆಯುತ್ತಿದೆ ಎಂಬ ಭಯಾನಕ ವಿಚಾರ ಬಯಲಿಗೆ ಬಂದಿರುವ ಬಗ್ಗೆ ಗರುಡಾವಾಯ್ಸ್ ಜು.19 ರಂದು ವರದಿ ಮಾಡಿತ್ತು ಇದರ ಬೆನ್ನಲ್ಲೇ ಪೊಲೀಸರು ಮಟ್ಕಾ ಬರೆಯುವವರ ಮೇಲೆ ಕೇಸ್ ಮಾಡುತ್ತಿದ್ದಾರೆ.
ಗೋವಾದ ಮಟ್ಕಾ ಕಿಂಗ್ ಪಿನ್ ನಸ್ರೂ ಆಡಿಯೋ ವೈರಲ್:
ಈ ವರದಿಗೆ ಹಾಾಗೂ ಎಸ್ ಪಿ ಹನುಮಂತರಾಯ ತಂಡ ನಿರಂತರವಾಗಿ ಮಟ್ಕಾ ದಂಧೆಕೋರರ ಬೆನ್ನು ಬಿದ್ದ ಹಿನ್ನೆಲೆಯಲ್ಲಿ ಬೆಚ್ಚಿಬಿದ್ದಿರುವ ಮಟ್ಕ ಕಿಂಗ್ ಪಿನ್ ನಸ್ರೂ ( ನಸರುಲ್ಲಾ ) ವಾಟ್ಸ್ ಅಪ್ ಮೂಲಕ ಏಜೆಂಟರಿಗೆ ಆಡೀಯೋದಲ್ಲಿ ಸಂದೇಶ ರವಾನಿಸಿದ್ದು, ಹೊರಗಡೆ ಈಗ ಸಾಕಷ್ಟು ಸಮಸ್ಯೆಯಿದೆ. ಪೊಲೀಸರ ಕಣ್ಗಾವಲಿದೆ ಇಂತಹ ಹೊತ್ತಲ್ಲಿ ಮನೆಯಲ್ಲಿ ಕುಳಿತೆ ಈ ದಂಧೆ ಮಾಡಿ, ಹೊರಗೆ ಆಫಿಸ್ ಮಾಡಿಕೊಂಡು, ರೂಂ ಮಾಡಿಕೊಂಡು ಬರೆದ್ರೆ ಲೈನ್ ಹಚ್ಚಿ ಜನರನ್ನು ಗುಂಪುಗೂಡಿಸಿಕೊಂಡು ಬರೆದರೆ ಸಮಸ್ಯೆ ಮಾಡಿಕೊಂಡರೆ, ಯಾರಾಾದರೂ ಹಿಡಿದುಕೊಂಡು ಹೋದರೆ ಅದಕ್ಕೆ ನಾನು ಜವಾಬ್ದಾರನಲ್ಲ. ಒಂದೆರೆಡು ಸಾವಿರ ಕಡಿಮೆಯಾದರೂ ಪರವಾಗಿಲ್ಲ ಮನೆಯಲ್ಲೇ ಬರೆಯಿರಿ ಅದಕ್ಕೆ ನಾನು ಜವಾಬ್ದಾರಿ ಎಂದು ವಾಟ್ಸ್ ಆಪ್ ಮೂಲಕ ತನ್ನ ಕಂಪನಿಯ ಹುಡುಗರಿಂದ ಏಜೆಂಟರಿಗೆ ಆಡಿಯೋ ಸಂದೇಶವನ್ನ ನಸ್ರೂ ರವಾನಿಸಿದ್ದಾನೆ..