ಸಚಿವ ಸುರೇಶ್ ಕುಮಾರ್ ಈಕೆಯ ಮನೆಗೆ ಬೇಟಿ ಕೊಡ್ತಾರೆ ಅಂದ್ರೆ ಸುಮ್ನೆನಾ.? ಶ್ವೇತಾಳ ಸಾಧನೆ ಏನು.?

ತುಮಕೂರು: ಕಣ್ಣ ಮುಂದೆ ಗುರಿವೊಂದಿದ್ದರೆ ಎಂತಹ ಅಡ್ಡಿ ಆತಂಕಗಳು ಬಂದರೂ ಅವನ್ನು ಎದುರಿಸಿ ಸಾಧನೆ ಮಾಡಬಹುದೆಂಬ ಮಾತಿಗೆ ಕೊಳ್ಳೇಗಾಲ ತಾಲ್ಲೂಕಿನ ಹೊಲಮಾಲಂಗಿ ಸರ್ಕಾರಿ ಪ್ರೌಢ ಶಾಲೆಯ ಶ್ವೇತ ಎನ್ನುವ
ಬಾಲಕಿ ಸಾಕ್ಷಿಯಾಗಿ ನಿಂತಿದ್ದಾಳೆ.
ಹೌದು! ಹೊಲಮಾಲಂಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿ ಅಭ್ಯಾಸ ಮಾಡುತ್ತಿದ್ದ ಶ್ವೇತಾ ಒಂದು ತಿಂಗಳ ಹಿಂದಷ್ಟೇ ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆ ಒಳಗಾಗಿ ಕೂರಲು ಆಗದ ಸ್ಥಿತಿಯಿದ್ದಳು. ಆದರೆ, ಸರ್ಕಾರ ಎಸ್ ಎಸ್ ಎಲ್ ಸಿ ಪರೀಕ್ಷೆ ಆಯೋಜನೆ ಮಾಡಿಯೇ ಸಿದ್ದ. ಪರೀಕ್ಷೆ ಬರೆದರಷ್ಟೇ ಮಕ್ಕಳು ಪಾಸ್ ಇಲ್ಲವಾದರೆ ಅನುತ್ತೀರ್ಣಗೊಳಿಸುವುದಾಗಿ ಘೋಷಿಸಿತು.
ಆದರೆ, ಈ ಬಾಲಕಿಗೆ ಕೂರಲು ಆಗದ ಸ್ಥಿತಿ ಇಂತಹ ಹೊತ್ತಲ್ಲಿ, ಮುಂದಿನ ಸಾಧನೆಗೆ ಮೆಟ್ಟಿಲಾಗುವ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವುದೇ ಮುಖ್ಯ ಎಂದು ದೃಢ ಮನಸ್ಸು ಮಾಡಿದಳು.
ಒಂದು ಕಡೆ ಕೊರೋನಾತಂಕ ಮತ್ತೊಂದೆಡೆ ದೈಹಿಕವಾಗಿ ಬಲಹೀನ ಸ್ಥಿತಿ ಇಂತಹ ಹೊತ್ತನ್ನೂ ಸವಾಲಾಗಿ ಸ್ವೀಕರಿಸಿದ ಬಾಲಕಿ ಶ್ವೇತಾ ಪರೀಕ್ಷೆ ಬರೆದಿದ್ದಾಳೆ.
ಶಾಲೆಯ ಮುಖ್ಯ ಶಿಕ್ಷಕ ಮಹಾದೇವ್ ಕುಮಾರ್ ಅವರ ಸೂಚನೆಯ ಮೇರೆಗೆ ಗಣಿತ ಶಿಕ್ಷಕ ಸುನೀಲ್ ಗ್ಲಾಡ್ಸನ್ ತನ್ನ ಕಾರಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಾಲಕಿಯನ್ನು ಕರೆದುಕೊಂಡು ಹೋಗಿ ಪರೀಕ್ಷೆ ಬರೆಯುವಂತೆ ವ್ಯವಸ್ಥೆ ಮಾಡಿದ್ದರು.
ಇದಕ್ಕೆ ಹೇಳೋದು ದೃಢ ಮನಸ್ಸು,ಸಾಧಿಸುವ ಛಲವೊಂದಿದ್ದರೆ ಯಾವುದು ಅಸಾಧ್ಯವಲ್ಲ. ತನ್ನಿಂತಾನೆ ಅದಕ್ಕೆ ಅವಶ್ಯಕವಾಗಿಬೇಕಾದ ಅನುಕೂಲಗಳು ಆಗುತ್ತವೆ.