Acb Trap: 1 ಲಕ್ಷ ಲಂಚ ಸ್ವೀಕಾರ.! ಪಿ ಆರ್ ಇ ಡಿ, ಎಇಇ, ಸೇರಿದಂತೆ ಮೂವರು ಎಸಿಬಿ ಬಲೆಗೆ

ದಾವಣಗೆರೆ: ಕಾಂಟ್ರ್ಯಾಕ್ಟರ್ ಕಡೆಯಿಂದ ಲಂಚದ ಹಣ ಸ್ವೀಕರಿಸುತ್ತಿರುವ ವೇಳೆ ಜಗಳೂರು ತಾಲ್ಲೂಕು ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಕುಮಾರ್, ಪ್ರಥಮ ದರ್ಜೆ ಸಹಾಯಕ ಮಂಜುರಾಜ್ ಹಾಗೂ ಗುತ್ತಿಗೆದಾರ ಅರವಿಂದ್ ಪಾಟೀಲ್ ಈ ಮೂವರು ಇಂದು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಗುತ್ತಿಗೆದಾರ ವೈ.ಪಿ. ಸಿದ್ದನಗೌಡ ಅವರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ 3,44,792 ರೂ., ಗಳ ಚೆಕ್ ನೀಡಲು ಶಿವಕುಮಾರ್ ಮತ್ತು ಮಂಜಾನಾಯ್ಕ್ 1.08 ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆ ಹಣವನ್ನು ಸ್ವೀಕರಿಸಿ ಚೆಕ್ ನೀಡಲು ಮತ್ತೋರ್ವ ಗುತ್ತಿಗೆದಾರ ಅರವಿಂದ್ ಪಾಟೀಲ್ ಗೆ ತಿಳಿಸಿದ್ದರು. ಅದರಂತೆ ಅರವಿಂದ ಪಾಟೀಲ್ ಹಣ ಪಡೆಯುವ ವೇಳೆ ಇವರೆಲ್ಲರೂ ಸಿಕ್ಕಿಬಿದ್ದಿದ್ದಾರೆ.
ಎಸಿಬಿ ಪೂರ್ವ ವಲಯ ಪೊಲೀಸ್ ಅಧೀಕ್ಷಕ ಜಯಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಂ. ಪ್ರವೀಣ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ರವೀಂದ್ರ ಎಂ ಕುರುಬಗಟ್ಟಿ ಹಾಗೂ ಸಿಬ್ಬಂದಿಯವರಾದ ಆಂಜನೇಯ, ಉಮೇಶ್, ಬಲೇಶಪ್ಪ ಕಲ್ಲೇಶಪ್ಪ, ಮೋಹನ್‌ಕುಮಾರ್, ಧನರಾಜ್, ವಿನಾಯಕ ಹಾಗೂ ನೂರುಲ್ಲಾ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.