ಬಿಎಸ್ ವೈ ಪೂರ್ಣಾವಧಿ ಸಿಎಂ ಕೊಟ್ರೇಶಯ್ಯ ಕಲ್ಯಾಣಮಠ ಭವಿಷ್ಯ

ಹೆಚ್ ಎಂ ಪಿ ಕುಮಾರ್.ದಾವಣಗೆರೆ 9740365719
ಶಿವಮೊಗ್ಗ ( ಸಾಗರ ): ಸರ್ಕಾರ ರಚನೆಯಾದ ದಿನದಿಂದ ನಾನಾ ಸಂಕಷ್ಟ ಎದುರಿಸುತ್ತಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಸಾಗರದ ಸಿ. ಕೊಟ್ರೇಶಯ್ಯ ಕಲ್ಯಾಣಮಠ ಭವಿಷ್ಯ ನುಡಿದಿದ್ದಾರೆ.
ಸಿಎಂ ಬಿ.ಎಸ್. ಯಡಿಯೂರಪ್ಪ ಇವರಿಗೆ ರಾಹುದಶಾ-ಶುಕ್ರಭುಕ್ತಿ ನಡೆಯುತ್ತಿದ್ದು, ಇವರ ಸರ್ಕಾರ ಪೂರ್ಣಾವಧಿ ನಡೆಯಲಿದೆ. ಹಾಗೇ ಬಿಎಸ್ ವೈ ಅಧಿಕಾರ ಪೂರ್ಣಗೊಳಿಸಲಿದ್ದಾರೆ.
ಸಿಎಂ ಜಾತಕದ ಪೂರ್ಣಪಾಠ ಇಂತಿದೆ; ದಿನಾಂಕ:27/28, ಫೆಬ್ರವರಿ 1943 ಶನಿವಾರ/ಭಾನುವಾರ ರಾತ್ರಿ 3.00 ಘಂಟೆಗೆ ಜನನವಾಗಿದ್ದು ಇವರದು ಧನಸ್ಸು ಲಗ್ನ, ಜೈಷ್ಠಾ ನಕ್ಷತ್ರ, ವೃಶ್ಚಿಕ ರಾಶಿಯಾಗಿದೆ.
ಇವರಿಗೆ 7.9.2006ರಿಂದ ಮಂಗಳ ದಶಾ ಉಚ್ಚ ದೆಸೆಯಿದ್ದು ಇವರಿಗೆ ರಾಜ್ಯದ ಉಪಮುಖ್ಯಮಂತ್ರಿಗಳಾಗಿ ಮತ್ತೆ ಚುನಾವಣೆ ನಡೆದು ರಾಜ್ಯದ ಮುಖ್ಯಮಂತ್ರಿಗಳಾಗಿದ್ದು ಕಲ್ಯಾಣಮಠ ಭವಿಷ್ಯ ನುಡಿದಂತೆ ನಡೆದಿದೆ.

7.9.2009ರಿಂದ ರಾಹು ದಶಾ ಪ್ರಾರಂಭವಾಗಿದೆ. ರಾಹು ಲಗ್ನಾತ್ ಭಾಗ್ಯ ಸ್ಥಾನದಲ್ಲಿ ಸಿಂಹ ರಾಶಿಯಲ್ಲಿ ಸಿಂಹಾಸನ ಯೋಗದಲ್ಲಿ ಮತ್ತು ರಾಹು ತುಂಗ ಯೋಗದಲ್ಲಿ ಇರುವುದರಿಂದ ಮತ್ತು ಕೇಂದ್ರ ಸ್ಥಾನದಲ್ಲಿ ಗುರು-ಮಂಗಳ ಯೋಗವಿದ್ದು ರಾಷ್ಟ್ರ ರಾಜಕಾರಣದಲ್ಲಿ ಅಧಿಕಾರ ಮಾಡುವ ಮೂಲಕ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಗಳಾಗಿದ್ದಾರೆ.
ಇವರ ಕುಂಡಲಿಯಲ್ಲಿ ವಾಕ್ ಸ್ಥಾನದಲ್ಲಿ ಬುಧ ಗ್ರಹ, ಮಕರ ರಾಶಿಯಲ್ಲಿ ಮಿತ್ರಕ್ಷೇತ್ರವಾಗಿದ್ದರಿಂದ ವಾಕ್ಚಾತುರ್ಯ, ಧೈರ್ಯ, ಸಾಹಸ, ಎದೆಗಾರಿಕೆ, ಗಾಂಭೀರ್ಯತೆ, ದಕ್ಷತೆ, ಹೋರಾಟದ ಮಧ್ಯೆ ಜಯ ಸಾಧಿಸಿಕೊಂಡು ಬಂದಿದ್ದಾರೆ. ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾಗಿ ಜನಮಾನಸದಲ್ಲಿ ನೆಲೆ ನಿಂತಿದ್ದಾರೆ.
ಬಿ ಎಸ್ ಯಡಿಯೂರಪ್ಪ ಕಾರ್ಯಗಳು
ಇವರು ಮಾಡಿದಂತಹ ಧರ್ಮಕಾರ್ಯ ಮತ್ತು ಬಡಜನರ ಉದ್ಧಾರಕ್ಕಾಗಿ ತಂದಿರುವಂತಹ ಭಾಗ್ಯಲಕ್ಷ್ಮಿ ಯೋಜನೆ, ಹೈಸ್ಕೂಲ್ ಮಕ್ಕಳಿಗೆ ಸೈಕಲ್ ವಿತರಣೆ, ನಿರಂತರ ಭಾಗ್ಯಜ್ಯೋತಿ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ಬಿಪಿಎಲ್ ಕಾರ್ಡ್ದಾರರಿಗೆ ಅಡುಗೆ ಅನಿಲದ ಮೂರು ಸಿಲಿಂಡರ್ ಉಚಿತ ಯೋಜನೆ, ಮನಸ್ವಿನಿ ಯೋಜನೆ, ಗೋಹತ್ಯಾ ನಿಷೇಧ. ಕೆರೆಗಳಿಗೆ ನೀರು ತುಂಬುವ ಯೋಜನೆ, ಕೌಶಲ್ಯಾಭಿವೃದ್ಧಿ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರದಿಂದ ರೈತರಿಗೆ ನಾಲ್ಕು ಸಾವಿರ ಬ್ಯಾಂಕ್ ಖಾತೆಗೆ ನೇರ ಸಹಾಯಧನ, ಅಸಂಘಟಿತ ಕಾರ್ಮಿಕರಿಗೆ ಲಾಕ್ಡೌನ್ ಕಾಲದಲ್ಲಿ ವಿಶೇಷವಾಗಿರುವಂತಹ ಅನುದಾನ ಕೊಡುಗೆ ಹಾಗೂ ಅತೀ ಬಡವರಿಗೆ ಗಂಗಾ ಕಲ್ಯಾಣ ಯೋಜನೆ, ನಿಗಮಗಳ ಸ್ಥಾಪನೆ, ಶಾಶ್ವತ ನೀರಾವರಿ ಯೋಜನೆ, ಮೆಟ್ರೋ ಕಾಮಗಾರಿ, ಮೊಟ್ಟಮೊದಲ ಬಾರಿಗೆ ಮಹಿಳೆಯರಿಗೆ 45 ಸಾವಿರ ಕೋಟಿ ಅನುದಾನ ಮೀಸಲು, ಕೃಷಿಗೆ ಪ್ರತ್ಯೇಕ ಬಜೆಟ್ ಮಂಡನೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಗೆ ಒತ್ತು, ಐಟಿ-ಬಿಟಿ ಸೆಂಟರ್ಗಳಿಗೆ ವಿಶೇಷ ಆದ್ಯತೆ, ಹೊಸ ಜಿಲ್ಲೆಗಳ ರಚನೆ, ಮಠ-ಮಂದಿರಗಳ ನಿರ್ಮಾಣಕ್ಕಾಗಿ ವಿಶೇಷ ಅನುದಾನ ಬಿಡುಗಡೆ, ಸಾಹಿತ್ಯ ಸಮ್ಮೇಳನಗಳಿಗೆ ಮೊಟ್ಟಮೊದತಿಗೆ ಅನುದಾನ ಬಿಡುಗಡೆ ಮಾಡಿದ ಮುಖ್ಯಮಂತ್ರಿ, ಅರ್ಚಕರುಗಳಿಗೆ ಹಿತ ಕಾಪಾಡುವಲ್ಲಿ ಆರ್ಥಿಕ ಅನುದಾನ ಹಾಗೂ ತವರು ಜಿಲ್ಲೆಗೆ ವಿಮಾನ ನಿಲ್ದಾಣ, ರೈಲ್ವೆ ಯೋಜನೆಗಳು, ವೈಸ್ ಪಾರ್ಕ್, ಫುಡ್ ಪಾಕ್, ಟೆಕ್ಸ್ಟೈಲ್ಸ್ ಪಾರ್ಕ್, ಡಿಆರ್ಡಿಓ ಘಟಕ ಸ್ಥಾಪನೆ, ಸ್ಮಾರ್ಟ್ ಸಿಟಿ, ಎಂಪಿಎಂ ಮತ್ತು ವಿಐಎಸ್ಎಲ್ ಅಭಿವೃದ್ಧಿಗೆ ಚಾಲನೆ, ಗಾರ್ಮೆಂಟ್ಗಳ ಸ್ಥಾಪನೆ-ಹೀಗೆ ಇನ್ನೂ ಅನೇಕ ಮಹತ್ತರವಾಗಿರುವಂತಹ ಯೋಜನೆಗಳನ್ನು ರಾಜ್ಯದ ಜನರಿಗೆ ತಲುಪಿಸುವಂತೆ ಮಾಡಿದ್ದು, ಶ್ರೀಕ್ಷೇತ್ರ ಕಲ್ಯಾಣಮಠದ ಚೌಡೇಶ್ವರಿ ಸಂಪೂರ್ಣ ಅನುಗ್ರಹ, ಆಶೀರ್ವಾದ ಇರುವುದರಿಂದ ಕರ್ನಾಟಕ ರಾಜ್ಯದಲ್ಲಿ ನಾಲ್ಕನೇ ಬಾರಿಗೂ ಮುಖ್ಯಮಂತ್ರಿಗಳಾಗಿದ್ದಾರೆ.

ಇವರಿಗೆ 26.3.2021ರಿಂದ 26.3.2024ರವರೆಗೆ ರಾಹುದಶಾ-ಶುಕ್ರಭುಕ್ತಿ, ಲಗ್ನಾತ್ ಕೇಂದ್ರ ಸ್ಥಾನದಲ್ಲಿ ಮಾಲವ್ಯ ಮಹಾಯೋಗದಲ್ಲಿ ಮತ್ತು ಸಿಂಹಾಸನ ಯೋಗದಲ್ಲಿರುವುದರಿಂದ ಪ್ರಬಲವಾಗಿರುವಂಥ ಅದೃಷ್ಟ ಬಂದಿರುವುದರಿಂದ ಎಷ್ಟೇ ಪ್ರಬಲ ವಿರೋಧವಿದ್ದರೂ ಸರ್ಕಾರದ ಎಲ್ಲಾ ಮಂತ್ರಿಗಳು ಮತ್ತು ಶಾಸಕರು, ವಿರೋಧಪಕ್ಷದ ನಾಯಕರಲ್ಲಿ ಸಲಹೆ- ಸೂಚನೆಗಳನ್ನು ಪಡೆದು ಸಮನ್ವಯತೆಯಿಂದ ಮತ್ತು ಭಾರತ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಇವರ ಮಾರ್ಗದರ್ಶನದಲ್ಲಿ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇವರ ಸಲಹೆಗಳನ್ನು ಪಡೆದು ಸಂಪೂರ್ಣ ಅವಧಿಗೆ ಸರ್ಕಾರ ನಡೆಸುವಂತಹ ಪ್ರಬಲ ಯೋಗವಿದೆ.
ತಾತ್ಕಾಲಿಕವಾಗಿ 20.11.2020ರಿಂದ 3ನೇ ಶನಿ, 5.4.2021ರಿಂದ 4ನೇ ಗುರು ಪ್ರಬಲವಾಗಿದ್ದು 2021-22ರಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಸಂಪೂರ್ಣ ಅವಧಿಗೆ ಸರ್ಕಾರವನ್ನು ನಡೆಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಕೊಟ್ರೇಶಯ್ಯ ಕಲ್ಯಾಣಮಠ ಇವರು ನುಡಿದಂತಹ ಭವಿಷ್ಯಗಳು
1997ರಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪತನ, 1998ರಲ್ಲಿ ಕೇಂದ್ರದಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ, 1998ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭವಿಷ್ಯ, 98-99ರಲ್ಲ ಅಡ್ವಾಣಿಗೆ ಅಧಿಕಾರ ಯೋಗ ಮತ್ತು ಮಾರಕ, 1998ರಲ್ಲಿ ಆಯನೂರು ಮಂಜುನಾಥ್ಗೆ ಶಿವಮೊಗ್ಗ ಕ್ಷೇತ್ರದಿಂದ ಎಂ.ಪಿ. ಗೆಲುವು ಖಚಿತ, 1999ರಲ್ಲಿ ಸೊರಬದ ಕುಮಾರ ಬಂಗಾರಪ್ಪನವರ ಗೆಲುವು ಖಚಿತ, 99ರಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರವರ ಭವಿಷ್ಯ, 7.10.2004ರಲ್ಲಿ (ಸಂಯುಕ್ತ ಕರ್ನಾಟಕ, ದಾವಣಗೆರೆ ವಿಭಾಗ), ಯಡಿಯೂರಪ್ಪ ಮುಖ್ಯಮಂತ್ರಿ ಯೋಗ, 2006ರಲ್ಲಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಪ್ರಬಲ ಮುಖ್ಯಮಂತ್ರಿ ಯೋಗ ಖಚಿತ, 2006ರಲ್ಲಿ ಬಿ.ಎಸ್.ಯಡಿಯೂರಪ್ಪನವರಿಗೆ ಪ್ರಬಲ ಮುಖ್ಯಮಂತ್ರಿ ಯೋಗ, 2006ರಲ್ಲಿ ಬರೆದಂತೆ ಡಿ.ಕೆ. ಶಿವಕುಮಾರ್ ಅವರಿಗೆ ಮುಂದೊಂದು ದಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿ-ಮುಖ್ಯಮಂತ್ರಿ ಯೋಗ, 2007ರಲ್ಲಿ ಉತ್ತರಪ್ರದೇಶದ ಮುಲಾಯಂ ಸಿಂಗ್ ಸರ್ಕಾರ ಪತನ, 2008ರಲ್ಲಿ ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಖಚಿತ, 2009ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ಗೆಲುವು ಖಚಿತ, 2009ರಲ್ಲಿ ಜಗದೀಶ ಶೆಟ್ಟರ್ಗೆ ಮುಖ್ಯಮಂತ್ರಿ ಯೋಗ ಖಚಿತ. 2011ರಲ್ಲಿ ಕೆ.ಎಸ್.ಈಶ್ವರಪ್ಪ ಹಾಗೂ ಆರ್.ಅಶೋಕ್ ಇವರಿಗೆ ಉಪಮುಖ್ಯಮಂತ್ರಿ ಖಚಿತ. 2013ರಲ್ಲಿ ಸಾಗರದ ಎಂಎಲ್ಎ ಕಾಗೋಡು ತಿಮ್ಮಪ್ಪನವರಿಗೆ ಗೆಲುವು ಖಚಿತ. 2013ರಲ್ಲಿ ದಾವಣಗೆರೆ ಕ್ಷೇತ್ರದ ಶ್ಯಾಮನೂರು ಶಿವಶಂಕರಪ್ಪನವರಿಗೆ ಗೆಲುವು ಮತ್ತು ಮಂತ್ರಿ ಯೋಗ, 2013ರಲ್ಲ ಹಡಗಲ ಕ್ಷೇತ್ರದ ಪಿ.ಟಿ. ಪರಮೇಶ್ವರ ನಾಯ್ಕ ಇವರಿಗೆ ಗೆಲುವು ಮತ್ತು ಮಂತ್ರಿಯೋಗ ಖಚಿತ. 2013ರಲ್ಲಿ ಕಡೂರು ಕ್ಷೇತ್ರದ ವೈ.ಎಸ್.ವಿ. ದತ್ತ ಗೆಲುವು ಖಚಿತ. 2013ರಲ್ಲಿ ಸಿದ್ಧರಾಮಯ್ಯನವರ ಸರ್ಕಾರ ಪೂರ್ಣಾವಧಿಗೆ, 2014ರಲ್ಲಿ ಕೆಎಲ್ಇ ಸಂಸ್ಥೆಯ ಅಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಇವರಿಗೆ ಎಂಎಲ್ಸಿ ಯೋಗ ಖಚಿತ. 2014ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಬಿ.ಎಸ್. ಯಡಿಯೂರಪ್ಪ ಗೆಲುವು ಖಚಿತ. 2014ರಲ್ಲ ನರೇಂದ್ರ ಮೋದಿಯವರಿಗೆ ಭಾರತದ ಪ್ರಧಾನಿ ಯೋಗ ಖಚಿತ. 2014ರಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ಸಿಂಗ್ ಇವರಿಗೆ ಪ್ರಬಲ ಮಂತ್ರಿ ಯೋಗ, 2014ರಲ್ಲಿ ಉಪಚುನಾವಣೆಯಲ್ಲಿ ಬಿಜೆಪಿ ಶಿಕಾರಿಪುರ ಕ್ಷೇತ್ರದಿಂದ ಬಿ.ವೈ. ರಾಘವೇಂದ್ರ ಗೆಲುವು ಖಚಿತ. 2014ರಲ್ಲಿ ಉಪಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಎನ್.ವೈ. ಗೋಪಾಲಕೃಷ್ಣ ಗೆಲುವು ಖಚಿತ. 2014ರಲ್ಲಿ ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಬಿಜೆಪಿ ಅಧಿಕಾರಕ್ಕೆ, 2015ರಲ್ಲಿ ಆರ್. ಪ್ರಸನ್ನಕುಮಾರ್ ಶಿವಮೊಗ್ಗ ಕ್ಷೇತ್ರದಿಂದ ಎಂಎಲ್ಸಿ ಯೋಗ ಖಚಿತ. 2016ರಲ್ಲ ಕಾಗೋಡು ತಿಮ್ಮಪ್ಪನವರಿಗೆ ಪ್ರಬಲ ಮಂತ್ರಿ ಯೋಗ ಖಚಿತ. 2018ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಬಿ.ಎಸ್.ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಭದ್ರಾವತಿ ಕ್ಷೇತ್ರದಿಂದ ಬಿ.ಕೆ. ಸಂಗಮೇಶ್, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಅಶೋಕ್ ನಾಯ್ಕ, ಸಾಗರ ಕ್ಷೇತ್ರದಿಂದ ಹರತಾಳು ಹಾಲಪ್ಪ, ಸೊರಬ ಕ್ಷೇತ್ರದಿಂದ ಕುಮಾರ ಬಂಗಾರಪ್ಪ, ಹೂವಿನ ಹಡಗಲಿ ಕ್ಷೇತ್ರದಿಂದ ಪಿ.ಟಿ.ಪರಮೇಶ್ವರ ನಾಯ್ ಗೆಲುವು ಖಚಿತ, 2019ರ ಲೋಕಸಭಾ ಚುನಾವಣೆಯಲ್ಲಿ ಭವ್ಯ ಭಾರತದ ಯುಗಪುರುಷ ನರೇಂದ್ರ ಮೋದಿಯವರಿಗೆ ಪ್ರಬಲ ಪ್ರಧಾನಿ ಯೋಗ, 2025ರಲ್ಲಿ ಭವ್ಯ ಭಾರತ ಯುಗಪುರುಷ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ಖಚಿತ ಹೀಗೆ ಇನ್ನೂ ಅನೇಕ ಭವಿಷ್ಯವಾಣಿಯು ಕರಾರುವಾಕ್ಕಾಗಿ ರಾಜ್ಯದ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

25 ವರ್ಷಗಳಿಂದ ಸಾಗರ ಮಹಾನಗರದಲ್ಲಿ ಜ್ಯೋತಿಷ್ಯ ಕಾರ್ಯಾಲಯವನ್ನು ಪ್ರಾರಂಭಿಸಿ ಜನಸಾಮಾನ್ಯರಿಂದ ದೇಶದ ಪ್ರಧಾನಿವರೆಗೆ ಬರೆದಂಥ ಎಲ್ಲಾ ಭವಿಷ್ಯಗಳು ಸತ್ಯವಾಗಿದೆ.
ಹೆಚ್ಚಿನ ಮಾಹಿತಿಗೆ ಫೇಸ್ಬುಕ್: C.kotreshaiah Kalyanamath
ಸಂಪರ್ಕ ವಿಳಾಸ: ಭಾರತೀಯ ಜ್ಯೋತಿಷ್ಯ ಮತ್ತು ವೈದಿಕ ಸಂಶೋಧನಾ ಅಧ್ಯಯನ ಕೇಂದ್ರ, ಸಾಗರ ಜ್ಯೋತಿಷ್ಯಜ್ಞಾನ ಕಲಾನಿಧಿ, ಪಂಚಾಂಗ ಕರ್ತೃ, ವೈದಿಕ ಪ್ರಯೋಗ ಭಾಸ್ಕರ, ಜ್ಯೋತಿಷ್ಯಸಿಂಧು, ಜ್ಯೋತಿಷ್ಯ ಕೇಸರಿ, ಜ್ಯೋತಿಷ್ಯ ಆಚಾರ್ಯ ಸಿ. ಕೊಟ್ರೇಶಯ್ಯ ಕಲ್ಯಾಣಮಠ, ಜ್ಯೋತಿಷ್ಯ: ಡಿಪ್ಲೋಮಾ, ವೀರಶೈವಾಗಮ ಪ್ರವೀಣ ‘ರಶ್ಮಿ ನಿಲಯ’, ಅರಳೀಕಟ್ಟೆ ಮತ್ತು ಚಿಲುಮೆಕಟ್ಟೆ ಭೂತೇಶ್ವರ ಸರ್ಕಲ್, ಸೊರಬ ರಸ್ತೆ, ಹಳೇ ಸಿದ್ದೇಶ್ವರ ಶಾಲೆ ಹಿಂಭಾಗ,
ಸಾಗರ-577 401, ಶಿವಮೊಗ್ಗ ಜಿಲ್ಲೆ.
ಮೊ: 9448782619

 
                         
                       
                       
                       
                       
                      