Explosive: ಐಜಿಪಿ ವಿಶೇಷ ತಂಡದಿಂದ ಮತ್ತೊಂದು ಸ್ಪೋಟಕ ಪ್ರಕರಣ ಬಯಲು

ಹಾವೇರಿ: ಬ್ಯಾಡಗಿ ತಾಲ್ಲೂಕಿನ ಛತ್ರ ಗ್ರಾಮದ ಬಳಿಯಿರುವ ಹಳಲಗೇರಿ ಕಣಿವೆಯಲ್ಲಿ ಅನಧಿಕೃತವಾಗಿ ಕಲ್ಲಿನ ಕ್ವಾರಿಗಳನ್ನು ಸ್ಪೋಟಿಸಲು ಸ್ಪೋಟಕ ಬಳಸುತ್ತಿದ್ದ ನಾಲ್ವರು ಆರೋಪಿಗಳನ್ನು ಬ್ಯಾಡಗಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 1 ಹಿಟಾಚಿ, 2 ಕಂಪ್ರಾಸರ್, 55 ಜಿಲೆಟಿನ್ ಜೆಲ್, 19 ಎಲೆಕ್ಟ್ರಾನಿಕ್ ಡಿಟೋನೆಟರ್ ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಲ್ಲಿನ ಕ್ವಾರಿ ಬ್ಲಾಸ್ಟ್ ಮಾಡಲು ಸ್ಫೋಟಕ ವಸ್ತುಗಳನ್ನು ಬಳಸುತ್ತಿರುವ ಖಚಿತ ಮಾಹಿತಿ ಮೇರೆಗೆ ಐಜಿಪಿ ವಿಶೇಷ ತಂಡವು ದಾಳಿ ನಡೆಸಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.