Bsy safe:ಯಡಿಯೂರಪ್ಪ ಸೇಫ್.! ಕೆಲ ವಾರದವರೆಗೆ ರಾಜಿನಾಮೆ ಪಡೆಯದಿರಲು ಹೈ ಕಮಾಂಡ್ ನಿರ್ದಾರ.!

Big Exclusive
ಬೆಂಗಳೂರು: ಇನ್ನೇನು ರಾಜ್ಯದಲ್ಲಿ ಸಿಎಂ ರಾಜೀನಾಮೆ ಫಿಕ್ಸ್ ಎಂದುಕೊಳ್ಳುತ್ತಿರುವಾಗಲೇ ಪಕ್ಷದ ಹೈಕಮಾಂಡ್ ನಿರ್ಧಾರವನ್ನು ಬದಲಿಸಿದೆ!
ರಾಜ್ಯದಲ್ಲಿ ವರುಣಾರ್ಭಟದಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿರುವುದರಿಂದ ನಾಯಕತ್ವ ಬದಲಾವಣೆ ವಿಚಾರವನ್ನು ಪಕ್ಷದ ವರಿಷ್ಠರು ಮುಂದೂಡಿದ್ದಾರೆ. ಸಿಎಂ ಗೆ ಮತ್ತೊಂದು ವಾರ ಅಥವಾ ಎರಡು ವಾರಗಳ ಕಾಲ ನಾಯಕತ್ವ ತೊರೆಯದಂತೆ ಸೂಚನೆ ನೀಡುವ ಲಕ್ಷಣಗಳಿವೆ ಎಂಬ ಮಾಹಿತಿ ದೊರಕಿದೆ.!
ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಪಟ್ಟ ವಹಿಸಿಕೊಂಡ ಶುರುವಾತಿನಲ್ಲಿಯೇ ಉಂಟಾಗಿದ್ದ ಅತಿವೃಷ್ಠಿಯಿಂದಾದ ತೊಂದರೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಅದರಂತೆ ಈಗಲೂ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿರುವುದರಿಂದ ಈ ಸನ್ನಿವೇಶವನ್ನು ನಿಭಾಯಿಸಲು ವರಿಷ್ಠರು ಸೂಚಿಸಿದ್ದಾರೆ ಎನ್ನಲಾಗಿದೆ.!
ಈಗಾಗಲೇ ಸಿಎಂ ಬಿಎಸ್ ವೈ ನಾಯಕತ್ವವೇ ಮುಂದುವರೆಯಬೇಕು ಎಂದು ರಾಜ್ಯದ ವಿವಿಧ ಮಠಾಧೀಶರು ಆಗ್ರಹಿಸಿದ್ದು, ಯಡಿಯೂರಪ್ಪ ಕೆಳಗಿದರೆ ಬಿಜೆಪಿ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಜತೆಗೆ ಅವರನ್ನೇ ಇನ್ನೆರಡು ವರ್ಷ ಮುಂದುವರೆಸಲು ಇಂದೂ ಕೂಡ 500 ಕ್ಕೂ ಹೆಚ್ಚು ಮಠಾಧೀಶರು ಸಮಾವೇಶ ನಡೆಸಿದರು. ಯಡಿಯೂರಪ್ಪ ಅವರ ಅಭಿಮಾನಿಗಳು ಸಹ ಅವರನ್ನೇ ಮುಂದುವರೆಸುವಂತೆ ವರಿಷ್ಠರಿಗೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಬಿಜೆಪಿಯ ಉನ್ನತ ಮೂಲಗಳ ಮಾಹಿತಿ ಪ್ರಕಾರ ಹೈಕಮಾಂಡ್ ಒಂದೆರೆಡು ವಾರಗಳ ಕಾಲ ರಾಜೀನಾಮೆ ಪಡೆಯದೆ ಬಿಎಸ್ ಯಡಿಯೂರಪ್ಪ ಮುಂದುವರೆಯಲಿ ಎಂಬ ಅಭಿಪ್ರಾಯ ಪಟ್ಟಿದೆ. ಇನ್ನು ಮುಂದಿನ ಸಿಎಂ ಉತ್ತರಾಧಿಕಾರಿಯ ಬಗ್ಗೆ ನಿರ್ಧಾರವನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ. ಅವಲೋಕನೆ ನಡೆಸಿ ಉತ್ತರಾಧಿಕಾರಿ ಆಯ್ಕೆ ಮಾಡುವವರೆಗೆ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಅವಕಾಶ ಕೊಡಲಾಗಿದೆ.
ಇದನ್ನೆಲ್ಲಾ ಗಮನಿಸಿದರೆ ಬಿಜೆಪಿಯ ಹೈಕಮಾಂಡ್ ನಾಯಕತ್ವ ಬದಲಾವಣೆಯಿಂದ ಪಕ್ಷಕ್ಕೆ ಆಗುವ ಡ್ಯಾಮೇಜ್ ಬಗ್ಗೆ ಚಿಂತನೆ ನಡೆಸಿಯೇ ಸಿಎಂ ಬದಲಾವಣೆ ಕುರಿತು ಮತ್ತಷ್ಟು ಸಮಾಲೋಚನೆ ನಡೆಸಲು ಸಮಯ ತೆಗೆದುಕೊಂಡಿದೆಯೋ ಅಥವಾ ಉತ್ತರಾಧಿಕಾರಿ ಇನ್ನೂ ಅಂತಿಮಗೊಂಡಿಲ್ಲವೋ ಎಂದು ಕಾದು ನೋಡಬೇಕಿದೆ.