ದಾವಣಗೆರೆ ಪಾಲಿಕೆಯ ಮಳಿಗೆ ಹರಾಜಿನಲ್ಲಿ ರಾಜಕೀಯ ಹೈಡ್ರಾಮಾ.!
ದಾವಣಗೆರೆ : ಮಹಾನಗರ ಪಾಲಿಕೆಯಲ್ಲಿ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೈಡ್ರಾಮ ನಡೆದಿದೆ. 12 ವರ್ಷಕ್ಕೊಮ್ಮೆ ನಡೆಯುವ ಈ ಹರಾಜು ಪ್ರಕ್ರಿಯೆಯಲ್ಲಿ ಭಾಗ ವಹಿಸಲು ಡಿಡಿ ತಂದಿದ್ದವರು ಹಾಗೂ ಈ ಮೊದಲು ಬಾಡಿಗೆ ಪಡೆದವರ ನಡುವೆ ವಾಗ್ವಾದ ಸಂಭವಿಸಿದ ಘಟನೆಯೂ ನಡೆದಿದೆ.
ಈ ವೇಳೆ ಸ್ಥಳದಲ್ಲಿ ನೆರೆದಿದ್ದ. ಹಿಂದೂ ಜಾಗರಣಾ ವೇದಿಕೆಯ ಸಹ ಸಂಚಾಲಕ ಸತೀಶ್ ಮಾತನಾಡಿ, ಮಹಾನಗರ ಪಾಲಿಕೆಗೆ ಬಾಡಿಗೆ ಪಾವತಿಸದ ಮಳಿಗೆಯವರಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ ಹಾಗೂ ಸಾರ್ವಜನಿಕರ ಆಸ್ತಿಗೆ ಹಾನಿಯಾಗಬಾರದು ಎಂದಿದ್ದಾರೆ.
ಹೊಸಬರಿಗೆ ಮಳಿಗೆ ನೀಡಬೇಡಿ
ಮೂಲ ಬಾಡಿಗೆದಾರರು ಸುಮಾರು ಮೂವತ್ತರಿಂದ ನಲವತ್ತು ವರ್ಷದಿಂದ ಇದ್ದೇವೆ. ನಮ್ಮನ್ನು ಬಿಟ್ಟು ಹೊಸಬರಿಗೆ ಮಳಿಗೆ ನೀಡಬಾರದು ಕೆಲವರು ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಮನವಿ ಮಾಡಿದರು. ಅದಕ್ಕೆ ಕೆಲ ಪಾಲಿಕೆ ಸದಸ್ಯರು ಕೂಡ ಬೆಂಬಲ ನೀಡಿದರು.ಆಗ ಹೊಸದಾಗಿ ಡಿಡಿ ತಂದವರು ಈ ಕೂಡಲೇ ಹರಾಜು ಪ್ರಕ್ರಿಯೆ ನಡೆಸಬೇಕು ಹರಾಜಿನ ಮೊತ್ತಕ್ಕಿಂತ ಐದು ಪರ್ಸೆಂಟ್ ಹೆಚ್ಚು ಪಾವತಿಸುವ ಮೂಲ ಬಾಡಿಗೆದಾರರಿಗೆ ಮಳಿಗೆ ನೀಡಬೇಕು.ಆದರೆ ಪಾಲಿಕೆ ಆದಾಯಕ್ಕೆ ನಷ್ಟ ಮಾಡಬಾರದು ಎಂದರು.
12 ವರ್ಷಕ್ಕೊಮ್ಮೆ ಹರಾಜು ಪ್ರಕ್ರಿಯೆ ನಡೆಯಬೇಕು
ಮಹಾನಗರ ಪಾಲಿಕೆಯ ಮಳಿಗೆಯ ಹರಾಜು ಪ್ರಕ್ರಿಯೆ 12 ವರ್ಷಕ್ಕೊಮ್ಮೆ ನಡೆಯಬೇಕು ಎಂದಿದೆ. ಆದರೆ ದಾವಣಗೆರೆಯಲ್ಲಿ ಹರಾಜು ಪ್ರಕ್ರಿಯೆ ಕನಸಿನ ಮಾತಾಗಿದೆ ಸುಮಾರು ಮೂವತ್ತು ವರ್ಷದಿಂದ ಇದ್ದವರೇ ಮುಂದುವರೆಯುತ್ತಿದ್ದಾರೆ. ಇದು ಅಂಗೈ ಹುಣ್ಣಿಗೆ ಕನ್ನಡಿ ಹಿಡಿದಂತೆ ಎಂದು ಸತೀಶ್ ಪುಜಾರಿ ಆರೋಪಿಸಿದರು.
ರಾಜಕೀಯ ಪ್ರಭಾವದ ಕಾರಣ ರಾಜಕೀಯ ಗೊಂದಲ
ಮಹಾನಗರ ಪಾಲಿಕೆಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಬೈಲಾದಂತೆ ನಡೆಯಬೇಕಾಗಿತ್ತು.ಆದರೆ ಕೆಲವೊಂದು ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಅಲ್ಲದೇ ರಾಜಕೀಯ ಕೈಗೊಂಬೆಯಾಗಿರುವುದರಿಂದ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಗೊಂದಲಗಳಾಗುತ್ತಿದೆ. ಅರ್ಹರಿಗೆ ತಲುಪಬೇಕಾದ ಅನುಕೂಲತೆ ಶ್ರೀಮಂತ ವರ್ಗದ ಪಾಲಾಗುತ್ತಿದೆ ಇದಕ್ಕೆ ಕಡಿವಾಣ ಹಾಕಲೇ ಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು.
ಹೆಚ್ಚಿನ ದರಕ್ಕೆ ಪಾಲಿಕೆ ಮಳಿಗೆ ಬಾಡಿಗೆ ನೀಡಲಾಗಿದೆ
ಪ್ರಸ್ತುತ ಪ್ರಮುಖ ರಸ್ತೆಗಳಲ್ಲಿರುವ ಮಳಿಗೆಗಳಿಗೆ ಜಿಎಸ್ ಟಿ ಸೇರಿಸಿ 2400 ರೂ ನಿಂದ 2500 ರೂ ದರವಿದೆ.ಆದರೆ ಸಾರ್ವಜನಿಕ ಸ್ವತ್ತನ್ನು ಬಿಟ್ಟು ಸ್ವಯಂ ಆಸ್ತಿಯುಳ್ಳವರು ಹತ್ತರಿಂದ ಹದಿನೈದು ಸಾವಿರ ರೂ.ಗೆ ಬಾಡಿಗೆ ನೀಡುತ್ತಿದ್ದಾರೆ.ಇದೇ ಮಳಿಗೆಯನ್ನು ಮೂಲ ವಾರಸುದಾರರು ಎಂಟು ಸಾವಿರದಿಂದ ಹತ್ತು ಸಾವಿರ ರೂಗೆ ಬಾಡಿಗೆ ಕೊಟ್ಟ ಉದಾಹರಣೆಗಳಿವೆ . ಮೂಲ ವಾರಸುದಾರರು ಅವರೇ ಹೆಚ್ಚಿನ ಬಾಡಿಗೆಗೆ ಮಳಿಗೆ ನೀಡಿದ್ದಾರೆ ಎಂದು ಸತೀಶ್ ಆರೋಪಿಸಿದರು.
ಹೆಚ್ಚಿನ ದರಕ್ಕೆ ಹರಾಜು ನೀಡಿದರೆ ತಿಂಗಳಿಗೆ ಎರಡು ಕೋಟಿ ಆದಾಯ
ಮಹಾನಗರ ಪಾಲಿಕೆಯಲ್ಲಿ ಒಟ್ಟು 313 ಮಳಿಗೆಗಳಿವೆ ಅದರಲ್ಲಿ 273 ಮಳಿಗೆಯ ಹರಾಜು ಪ್ರಕ್ರಿಯೆ ನಡೆಯುತ್ತದೆ. ಪ್ರತಿ ತಿಂಗಳು ನಾಲ್ಕರಿಂದ ಐದು ಲಕ್ಷದವರೆಗೆ ಬಾಡಿಗೆ ಹಣ ಬರುತ್ತದೆ.ಆದರೆ ಸರಿಯಾಗಿ ಹರಾಜು ಪ್ರಕ್ರಿಯೆ ನಡೆದರೆ ಪ್ರತಿ ತಿಂಗಳು 2 ಕೋಟಿ ಆದಾಯ ಮಹಾನಗರ ಪಾಲಿಕೆ ಆದಾಯ ಬರುತ್ತದೆ.
ವೋಟಿಗಾಗಿ ರಾಜಕೀಯ ನಾಯಕರ ಎಂಟ್ರಿ
ಈ ನಡುವೆ ರಾಜಕೀಯ ಮುಖಂಡರು,ಚುನಾಯಿತ ಪ್ರತಿನಿಧಿಗಳು ವೋಟು ಕೈತಪ್ಪುವ ಭೀತಿಯಲ್ಲಿದ್ದಾರೆ. ಕೆಲಸ ಮಾಡಿ ಜನರ ಮನಸ್ಸು ಗೆಲ್ಲಬೇಕೆ ವಿನಹ ಇಂತಹ ಸಣ್ಣ ಕೆಲಸಕ್ಕಿಳಿದು ಜನರಿಂದ ದೂರವಾಗಬಾರದು ಎಂಬುದು ಸತೀಶ್ ಪೂಜಾರಿ ಅಭಿಪ್ರಾಯ.
ಕಡು ಬಡವರು ಬಿಡ್ ಮಾಡಲು ಬಂದಿದ್ದರು
ಜಯದೇವ ವೃತ್ತದಲ್ಲಿ ಹಾಗೂ ಲೇಬರ್ ಕಾಲೋನಿ 27 ಮಳಿಗೆ ಕೆಟಿಜೆ ನಗರದ 30 ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಯಬೇಕಿತ್ತು.ಕಡುಬಡವರು ಸಾಲ ಮಾಡಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಡಿಡಿ ಸಹ ತೆಗೆಸಿಕೊಂಡು ಬಂದಿದ್ದರು.ಆದರೆ ಕೆಲವೊಂದು ಚುನಾಯಿತ ಪ್ರತಿನಿಧಿಗಳು ಮತ್ತು ಆಯುಕ್ತರ ಅಸಹಾಯಕತೆಯಿಂದ ಹರಾಜು ಪ್ರಕ್ರಿಯೆ ಸ್ಥಗಿತಗೊಂಡಿದೆ.
ಸರಿಯಾದ ಸಮಯಕ್ಕೆ ಹರಾಜು ನಡೆಯದೇ ಇದ್ದರೇ ಹೋರಾಟ
ಮುಂದಿನ ದಿನಗಳಲ್ಲಿ ಸರಿಯಾದ ಸಮಯಕ್ಕೆ ಹರಾಜು ಪ್ರಕ್ರಿಯೆ ನಡೆಸದಿದ್ದರೆ ಜನಪ್ರತಿನಿಧಿಗಳಿಗೆ ಕೇಳುವುದಿಲ್ಲ. ಏಕೆಂದರೆ ಜನಗಳ ಸಮಸ್ಯೆ ಆಲಿಸಬೇಕಾದದ್ದು ಅಧಿಕಾರಿಗಳು ಆದ್ದರಿಂದ ಪೌರಾಯುಕ್ತರ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸುತ್ತೇವೆ.
ಮೊದಲಿನಿಂದ ಇದ್ದಾರೆ ಹಿಂದಿನಿಂದಲೂ ಬಾಡಿಗೆ ನೀಡುತ್ತಿದ್ದಾರೆ ಎನ್ನುವುದಕ್ಕಿಂತ ಮಹಾನಗರ ಪಾಲಿಕೆಗೆ ಆದಾಯ ಹೆಚ್ವುವತ್ತ ಗಮನಹರಿಸಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು .
ವಿಶೇಷ ಚೇತನರಿಗೆ ಮಳಿಗೆ ನೀಡಿ
ಎಸ್ಸಿ ಎಸ್ಟಿ ಮತ್ತು ಅಂಗವಿಕಲರಿಗೆ ಮೀಸಲಾತಿ ಯ ಮಳಿಗೆಗಳು ಅವರಿಗೆ ತಲುಪಬೇಕು. ಜೊತೆಗೆ ಸರ್ಕಾರಿ ಆಸ್ತಿ ಯಾಗಿರುವುದರಿಂದ ಸಾರ್ವಜನಿಕರು ಅವರವರ ಶಕ್ತಿಗೆ ಅನುಸಾರ ಹರಾಜು ಮಾಡುವ ಪ್ರಕ್ರಿಯೆಯಾಗಿದೆ. ಜೊತೆಗೆ ಉಳ್ಳವರಿಗೆ ನೀಡುವ ಬದಲು ಎಲ್ಲರಿಗೂ ನೀಡಬೇಕೆಂಬುದು ನಮ್ಮ ಉದ್ದೇಶ. ಆದ್ದರಿಂದ ತಡೆಹಿಡಿದಿರುವ ಹರಾಜು ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಬೇಕು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಯುಕ್ತರಿಗೆ ಒತ್ತಾಯಿಸಿದ್ದೇವೆ.
ಆಯುಕ್ತರಾದ ರೇಣುಕಾ ಅವರು ಜಿಲ್ಲಾಧಿಕಾರಿ ಗಳೊಂದಿಗೆ ಚರ್ಚೆ ಮಾಡಿ ಶೀಘ್ರವಾಗಿ ಪ್ರಕ್ರಿಯೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಇನ್ನುಮಹಾನಗರ ಪಾಲಿಕೆಯ ಮಳಿಗೆ ಪಡೆದ ಅನೇಕರು ಸಬ್ ಲೀಸ್ ಕೊಟ್ಟಿದ್ದಾರೆ.ಕೆಲವರು ಕ್ರಯಕ್ಕೂ ಮಾರಿದ್ದಾರೆ ಅವುಗಳನ್ನು ಪತ್ತೆ ಹಚ್ಚುವ ಕೆಲಸವನ್ನು ಪಾಲಿಕೆ ಮಾಡಬೇಕು. ಆದರೆ ಅಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿ ತನಿಖೆ ನಡೆಸಿಲ್ಲ ಇದು ದುರಂತ ಎಂದು ಸತೀಶ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ಏನಾದರೂ ಆಗಲಿ ಸಾರ್ವಜನಿಕರ ಆಸ್ತಿ ಕೇವಲ ಹಿಂದಿನಿಂದ ಇದ್ದವರಿಗೆ ಸಿಗಬೇಕು ಎಂಬ ಅಭಿಪ್ರಾಯ ಮಾತ್ರ ತಪ್ಪು ಎಂಬುದು ಪ್ರಜ್ಞಾವಂತರ ಅಭಿಪ್ರಾಯ