ಅಮಾನತ್ತಾದ ಅಬಕಾರಿ ಅಧಿಕಾರಿಗಳ ವರ್ಗಾವಣೆ ಮಾಡದಿದ್ದರೆ ಉಗ್ರ ಹೋರಾಟ
ದಾವಣಗೆರೆ: ಕಳೆದ ಸೆಪ್ಟೆಂಬರ್ 13ರಂದು ದಾವಣಗೆರೆ ಲೋಕಾಯುಕ್ತ ಪೋಲೀಸರಿಂದ ದಾಳಿಗೆ ಒಳಗಾಗಿ ಬಂಧಿತರಾಗಿ, ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತದೇ ಸ್ಥಾನಕ್ಕೆ ಬಂದು ಅಧಿಕಾರ ಚಲಾವಣೆ ಮಾಡುತ್ತಿರುವ ಐವರು ಅಬಕಾರಿ ಇಲಾಖೆಯ ಅಧಿಕಾರಿಗಳು ಇನ್ನು 10 ದಿನದೊಳಗೆ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡದಿದ್ದರೆ ದಾವಣಗೆರೆಯ ಉಪ ಅಬಕಾರಿ ಇಲಾಖೆಯ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಮಾಡುವುದಲ್ಲದೇ ನ್ಯಾಯಕ್ಕಾಗಿ ಹೈಕೋರ್ಟಿನ ಮೊರೆ ಹೋಗಲಾಗುವುದು ಎಂದು ಸನ್ನದುದಾರ ಡಿ.ಜಿ.ರಘುನಾಥ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನಗೆ ಮದ್ಯದ ಅಂಗಿಡಿಗೆ ಪರವಾನಗಿ ನೀಡಲು ದಾವಣಗೆರೆ ಅಬಕಾರಿ ಉಪ ಆಯುಕ್ತರು ಮತ್ತು ಅವರ ಅಧೀನದಲ್ಲಿ ಬರುವ ಇತರೆ ಅಧಿಕಾರಿಗಳು 60 ಲಕ್ಷ ಕೇಳಿದ್ದರು.
ಈ ವೇಳೆ ನಾನು ಲೋಕಾಯುಕ್ತಕ್ಕೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತರ ನಿರ್ದೇಶನದಂತೆ ಮುಂಗಡ ಹಣ 3ಲಕ್ಷ ರೂ.ಗಳನ್ನು ನೀಡುವ ವೇಳೆ ಅಶೋಕ್, ಸ್ವಪ್ನ, ಜೆ.ಕೆ.ಶೀಲಾ, ಶೈಲಶ್ರೀ ಇವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಆದರೆ, ಇದೀಗ ಅವರು ಜಾಮೀನು ಪಡೆದು ಮತ್ತೆ ಅದೇ ಹುದ್ದೆಗೆ ಬಂದು ಅಧಿಕಾರ ಚಲಾವಣೆ ಮಾಡುತ್ತಿದ್ದು, ಪ್ರಕರಣದ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇರುತ್ತದೆ. ಕಾರಣ ಅವರನ್ನು ಬೇರೆಡೆಗೆ ನಾನ್ ಎಕ್ಸಿಕ್ಯುಟಿವ್ ಹುದ್ದೆಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು.
ಇದಲ್ಲದೇ ಸರ್ಕಾರ ಲೋಕಾಯುಕ್ತ ದಾಳಿಯಾಗಿ ಅಧಿಕಾರಿಗಳು ಅಮಾನತು ಆದೆ ದಿನವಾದ 15-10-2023 ರಿಂದ 7-11-2023 ರವರೆಗೆ ದಾವಣಗೆರೆ ಅಬಕಾರಿ ಉಪ ಆಯುಕ್ತರ ಹುದ್ದೆಗೆ ಯಾರನ್ನೂ ನೇಮಕ ಮಾಡದೇ ಇನ್ಚಾರ್ಜ್ನ್ನು ಯಾರಿಗೂ ಕೊಡದೆ ಕಛೇರಿಯನ್ನು ಸ್ಥಬ್ದಗೊಂಡಿರುತ್ತದೆ. ಇದು ಹಲವಾರು ಅನುಮಾನಗಳು ಎದ್ದು ಕಾಣುತ್ತವೆ ಎಂದು ಹೇಳಿದರು.
ಸರ್ಕಾರದ ಅಧಿಸೂಚನೆಯಂತೆ ಯಾವುದೇ ಅಧಿಕಾರಿಗಳು, ಸಿಬ್ಬಂದಿ ಲೋಕಾಯುಕ್ತರ ದಾಳಿಗೆ ಒಳಾಗಾಗಿ ಪ್ರಾಥಮಿಕ ತನಿಖೆಯ ನಂತರ ಅರೋಪಗಳು ಮೇಲ್ನೋಟಕ್ಕೆ ಸಾಬೀತಾಗಿ ಆರೋಪಿತರಾಗಿ ಅಮಾನತಿನಲ್ಲಿ ಇಟ್ಟ ನಂತರ ಅವರನ್ನು ಪುನರ್ ಸ್ಥಾಪಿಸಿವ ಮುನ್ನ ಲೋಕಾಯುಕ್ತ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಬೇಕೆಂದು ಆದೇಶವಿದೆ.. ಅಂತಹ ಅಧಿಕಾರಿಗಳು, ನೌಕರರನ್ನು ಈ ಹಿಂದೆ ಸೇವೆ ಸಲ್ಲಿಸಿದ ಹುದ್ದೆಗೆ ನೇಮಿಸತಕ್ಕದ್ದಲ್ಲ. ಅವರನ್ನು ಬೇರೆ ಯಾವುದಾದರೂ ನಾನ್ ಎಕ್ಸಿಕ್ಯುಟಿವ್ ಹುದ್ದೆಗೆ ನೇಮಿಸಬೇಕೆಂದು ಹೇಳಿದೆ. ಅದರಂತೆ ಅವರನ್ನು ಬೇರೆಡೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.
ಆರೋಪಿಗಳ ಪ್ರಭಾವದಿಂದಾಗಿ ಸರ್ಕಾರದ des ನೀತಿ ನಿಯಮಗಳನ್ನು ಗಾಳಿಗೆ ತೂರಿ ಅವರ ಹುದ್ದೆಗಳಿಗೆ ಬೇರೆಯವರನ್ನು ನೇಮಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕೆಂದು ಮನವಿ ಮಾಡಿದರು.