ಎಸ್ ಪಿ ರಿಷ್ಯಂತ್ ರಿಂದ ಆಟೋ ಚಾಲಕರಿಗೆ ಖಡಕ್ ವಾರ್ನಿಂಗ್: ಯಾಕೆ.? ಸುದ್ದಿ👇ಓದಿ, ಶೇರ್ ಮಾಡಿ

ದಾವಣಗೆರೆ: ಆಟೋ ಚಾಲಕರು ಆ.15 ರೊಳಗಾಗಿ ಮೀಟರ್‌ಗಳನ್ನು ಕಡ್ಡಾಯವಾಗಿ ಅವಳಡಿಸಿಕೊಳ್ಳದಿದ್ದರೆ ಪರವಾನಿಗೆ ರದ್ದುಗೊಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆಟೋ ಚಾಲಕರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಆಟೊ ಚಾಲಕರು ಸಾರ್ವಜಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಮೀಟರ್ ಅಳವಡಿಕೆ ಖಡ್ಡಾಯ ಮಾಡಲಾಗಿದೆ ಎಂದು ತಿಳಿಸಿದರು.

ಇಂತಿಷ್ಟು ಕಿಮೀ ಗೆ ಇಷ್ಟು ದರ ತೆಗೆದುಕೊಳ್ಳಬೇಕೆಂದು ಆರ್‌ಟಿಓ ಇಲಾಖೆಯಿಂದ ಸೂಚನೆ ನೀಡಲಾಗಿದೆಯಾದರೂ ಆಟೋ ಚಾಲಕರು ಸಾರ್ವಜನಿಕರಿಂದ ಹೆಚ್ಚಾಗಿ ಹಣ ಪೀಕುತ್ತಿದ್ದಾರೆ. ಇನ್ನು ರಾತ್ರಿ ವೇಳೆ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಹಾಗಾಗಿ, ಇನ್ನುಮುಂದೆ ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಆರ್‌ಟಿಒ ಮತ್ತು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಶೀಘ್ರವೇ ಸಭೆ ಕರೆದು ಎಲ್ಲಾ ಆಟೋ ಮಾಲೀಕರಿಗೆ ಸೂಚನೆ ನೀಡಲಾಗುವುದು ಎಂದರು.

ಆರ್‌ಟಿಓ ದಿಂದ ಆಟೋಗಳನ್ನು ನೋಂದಣಿ ಮಾಡಿಸುವಾಗ ಮೀಟರ್ ಅಳವಡಿಕೆ ಕಡ್ಡಾಯ ಎಂಬ ನಿಯಮವಿದೆ. ಹಾಗಿದ್ದರೂ ಸಹ ಆಟೋ ಚಾಲಕರು ನಿಯಮ ಪಾಲನೆ ಮಾಡುತ್ತಿಲ್ಲ. ಈಗ ಆ.15ರ ವರೆಗೆ ಸಮಯ ನೀಡಲಾಗುವುದು. ಹಾಗೊಂದು ವೇಳೆ ಮೀಟರ್ ಅಳವಡಿಸಿಕೊಳ್ಳದಿದ್ದಲ್ಲಿ ಅಂತಹವರ ಪರವಾನಿಗೆ ರದ್ಧು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

error: Content is protected !!