Explosive: ಭಾರಿ ಅನಾಹುತ ತಪ್ಪಿಸಿದ ಪೂರ್ವ ವಲಯ ಐಜಿಪಿ ತಂಡ, ಭಾರಿ ಪ್ರಮಾಣದ ಸ್ಪೋಟಕ, 2 ಬೊಲೆರೊ ವಾಹನ ವಶ

illigal explosive transport veihcle jilleyin detonator seized

ದಾವಣಗೆರೆ: ಆಲೂರು ಗ್ರಾಮದ ಬಳಿ ಇರುವ ಕಲ್ಲುಕ್ವಾರಿ ಗಳಿಗೆ ಸ್ಪೋಟಕ ವಸ್ತುಗಳನ್ನು ರವಾನೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ಪೂರ್ವ ವಲಯ ಐಜಿಪಿ ರವಿ ಎಸ್ ಇವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾವಣಗೆರೆ ಕೇಂದ್ರ ಕಚೇರಿಯ ಡಿ ವೈ ಎಸ್ ಪಿ ತಿರುಮಲೇಶ್, ಸಿಪಿಐ ಶಂಕರ್ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಸ್ಪೋಟಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ವಾಹನಗಳನ್ನು ತಪಾಸಣೆ ಮಾಡಲಾಗಿದೆ. ಸ್ಪೋಟಕ ವಸ್ತು ಸಾಗಾಟ ಹಾಗೂ ಮಾರಾಟದ ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದುದರಿಂದ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಪ್ರಕರಣವನ್ನ ದಾವಣಗೆರೆ ಗ್ರಾಮಾಂತರ ಪೊಲೀಸ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ.

 

ವಿಶ್ವನಾಥ, ಸೋಮಲಿಂಗಯ್ಯ, ನವೀನ್ ಕುಮಾರ್ ಬಂಧಿತರು. ಆರೋಪಿಗಳಿಂದ ₹ 29,700 ಬೆಲೆಬಾಳುವ 2970 ಜಿಲೆಟಿನ್ ಟ್ಯೂಬ್‌ಗಳು ಹಾಗೂ 790 ಎಲೆಕ್ಟ್ರಾನಿಕ್ ಡಿಟೋನೆಟರ್ ₹ 7,600 ಮೌಲ್ಯದ ಸ್ಪೋಟಕಗಳಿದ್ದು, ಇವುಗಳನ್ನು ಸಾಗಿಸಲು ಪರವಾನಿಗೆ ಇಲ್ಲದ ವಾಹನವನ್ನು ಹಾಗೂ ಸದರಿ ವಾಹನದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಪ್ರಾಣಕ್ಕೆ ಕುತ್ತು ತರುವ ರೀತಿಯಲ್ಲಿ ಸರಿಯಾದ ಪರವಾನಿಗೆ ಇಲ್ಲದೆ ವಾಹನ ಸಾಗಾಟ ಬಂಧಿತ ಆರೋಪಿಗಳು ಬಳಸಿದ್ದರು. 6 ಲಕ್ಷ ಮೌಲ್ಯದ ಎರಡು ಬೊಲೇರೋ ವಾಹನವನ್ನು ಪೊಲೀಸರ ಜಪ್ತು ಮಾಡಿಕೊಂಡಿದ್ದಾರೆ.

ತಾಲ್ಲೂಕಿನ ಆಲೂರು ಗ್ರಾಮದ ಬೇತೂರು ಬಸವರಾಜಪ್ಪ ಅವರ ಕಲ್ಲುಕ್ವಾರಿ ಬಳಿ ರಸ್ತೆಯಲ್ಲಿ‌ ಈ ಆರೋಪಿಗಳು ಬಾಗಲಕೋಟೆಗೆ ಸ್ಪೋಟಕಗಳನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಅದರಲ್ಲಿ ಸ್ಪೋಟಕಗಳು ಇರುವುದು ಪತ್ತೆಯಾಗಿದೆ.

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!