ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ಮಹಾಲಿಂಗಪ್ಪ ಲೋಕಾಯುಕ್ತ ಬಲೆಗೆ

ಶಿವಮೊಗ್ಗ: ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ೫ ಸಾವಿರ ರೂ. ಲಂಚ ಪಡೆಯುವಾಗ ಮಂಗಳವಾರ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಜಿ. ಮಹಲಿಂಗಪ್ಪ ಸಿಕ್ಕಿಬಿದ್ದ ಅಧಿಕಾರಿ. ನಗರದ ಗೋಪಿಶೆಟ್ಟಿಕೊಪ್ಪದ ಇರ್ಷಾದ್ ಎನ್ನುವವರ ಕಾರು ಸುಟ್ಟು ಹೋದ ಬಗ್ಗೆ ಫೈರ್ ರಿಪೋರ್ಟ್ ಕೇಳಲು ಹೋದಾಗ ಮಹಾಲಿಂಗಪ್ಪ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಕೆಎ ೩೨ ಡಿ ೮೫೪೭ ಎನ್ನುವ ಕಾರು ಇರ್ಷಾದ್ ಅವರದಾಗಿದ್ದು ೨೦೨೩ರ ಸೆ. ೨೫ರಂದು ಮಂಡಗದ್ದೆ ಬಳಿ ಆಕ್ಸಸ್ಮಿಕ ಬೆಂಕಿ ಹೊತ್ತಿಕೊಂಡು ಸುಟ್ಟುಹೋಗಿತ್ತು. ಕಾರಿಗೆ ಯುನೈಟೆಟ್ ಇಂಡಿಯಾ ಇನ್ಸುರೆನ್ಸ್ ಕಂಪನಿಯ ವಿಮೆ ಇದ್ದುದರಿಂದ ಅದನ್ನು ಪಡೆಯಲು ಇರ್ಷಾದ್ ಚಲನ್ ಕಟ್ಟಿ ಫೈರ್ ರಿಪೋರ್ಟ್ಗೆಂದು ಹೋದಾಗ ಮಹಾಲಿಂಗಪ್ಪ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ.
ಈ ಬಗ್ಗೆ ಇರ್ಷಾದ್ ಲೋಕಾಯುಕ್ತ ಡಿಎಸ್ಪಿ ಉಮೇಶ್ ನಾಯ್ಕ್ ಅವರಿಗೆ ದೂರು ನೀಡಿದ್ದರು. ಇಂದು ಮಧ್ಯಾಹ್ನ ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಅವರನ್ನು ಹಿಡಿಯಲಾಗಿದೆ. ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ. ಎಸ್ ಪಿ ವಾಸುದೇವರಾವ್ ತನಿಖೆಯ ಮಾರ್ಗದರ್ಶನ ನೀಡುತ್ತಿದ್ದಾರೆ.