ಬಡವರ ಪಾಲಿಗೆ ಆರೋಗ್ಯ, ಕಾರ್ಯಕರ್ತರ ಪಾಲಿನ ಶಕ್ತಿ – ಡಾ. ಪ್ರಭಾ ಮಲ್ಲಿಕಾರ್ಜುನ್ – ಹರೀಶ್ ಬಸಾಪುರ.
ದಾವಣಗೆರೆ: ಪ್ರತಿದಿನ ಹತ್ತಾರು ಜನ ಮನೆ ಬಾಗಿಲಿಗೆ ಸಹಾಯ ಕೇಳಿ ಬರುವುದು… ಪ್ರತಿಯೊಬ್ಬರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ ಅವುಗಳಿಗೆ ತಮ್ಮಿಂದಾಗುವ ಸಹಾಯ ಮಾಡಿ, ಸರ್ಕಾರದಿಂದಾಗುವ ಸಹಾಯಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ತಮ್ಮ ಬಳಿ ಬಂದ ಪ್ರತಿಯೊಬ್ಬರ ಮೊಗದಲ್ಲಿ ನಗುತರಿಸುವ ಕಾಯಕದ ರುವಾರಿಯೇ ಎಸ್.ಎಸ್. ಕೇರ್ ಟ್ರಸ್ಟ್ ನ ಲೈಫ್ ಟ್ರಸ್ಟಿ ಯಾಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ್.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ತಮ್ಮ ಟ್ರಸ್ಟ್ ಮೂಲಕ ಉಚಿತ ಆರೋಗ್ಯ ಶಿಬಿರಗಳನ್ನು ಜನರ ಮನೆ ಬಾಗಿಲಲ್ಲಿ ತರುವ ಯೋಜನೆ ರೂಪಿಸಿ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡುವ ಕಾರ್ಯ ನಡೆಸುತ್ತಿದ್ದಾರೆ.
ಆರೋಗ್ಯ ಸಮಸ್ಯೆ ಹಾಗೂ ತಮ್ಮ ಆಸ್ಪತ್ರೆಗೆ ಬಿಲ್ ರಿಯಾಯಿತಿ ಬಯಸಿ ಬರುವ ಪ್ರತಿಯೊಬ್ಬರ ಬಳಿ ಅವರು ಕೇಳುವ ಮೊದಲ ಪ್ರಶ್ನೆಯೇ ರೋಗಿ ಗುಣಮುಖರಾಗಿದ್ದಾರೆಯೇ??? ನಂತರ ಬಿಪಿಎಲ್ ಕಾರ್ಡ್ ಇದೆಯೇ????.
ರೋಗಿ ಗುಣಮುಖರಾಗಿದ್ದಾರೆಯೇ ಎಂದು ಕೇಳುವ ಮೂಲಕ ರೋಗಿಯ ಆರೋಗ್ಯದ ಕಾಳಜಿ ತೋರುವ ಡಾ. ಪ್ರಭಾ ಮಲ್ಲಿಕಾರ್ಜುನ್ ನಂತರವೇ ಆಸ್ಪತ್ರೆಯ ಬಿಲ್ ವಿಷಯಕ್ಕೆ ಬರುತ್ತಾರೆ ಇದು ಅವರ ಮಾನವೀಯ ಗುಣ.
ತಮ್ಮ ಟ್ರಸ್ಟಿನ ಯೋಜನೆಗಳು ಸದಾ ಬಡವರಿಗೆ ತಲುಪಬೇಕು ಎಂಬ ಮಹಾಭಿಲಾಷೆ ಹೊಂದಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ತಮ್ಮ ಬಳಿ ಬರುವ ಮುಖಂಡರಿಗೆ, ಕಾರ್ಯಕರ್ತರಿಗೆ, ಜನಸಾಮಾನ್ಯರಿಗೆ ಬಿಪಿಎಲ್ ಕಾರ್ಡ್ ಇದೆಯೇ??? ಎಂದು ಕೇಳುವ ಮೂಲಕ, ಆರ್ಥಿಕವಾಗಿ ಅನುಕೂಲವಾಗಿರುವವರು, ನಮ್ಮ ಟ್ರಸ್ಟಿನ ಸಹಾಯ ಬಯಸದಿರಿ ಎಂದು ಪ್ರೀತಿಯಿಂದಲೇ ಹೇಳುವುದು ವಿಶೇಷ. ಅವರು ಪಕ್ಷಾತೀತವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಟ್ರಸ್ಟಿನ ಮೂಲಕ ಸಹಾಯ ಮಾಡುವ ಗುಣ ಕೋಟಿಗೊಬ್ಬರಿಗೆ ಎಂದರೇ ಉತ್ಪ್ರೇಕ್ಷೆಯಾಗದು.
ಒಂದು ಉತ್ತಮ ಸಮಾಜ ನಿರ್ಮಾಣ, ಪ್ರತಿಯೊಂದು ಕುಟುಂಬದಿಂದಲೇ ಪ್ರಾರಂಭವಾಗತ್ತದೆ ಹಾಗೂ ಉತ್ತಮ ಕುಟುಂಬ ನಿರ್ಮಾಣವಾಗಲು ಆ ಮನೆಗಳಲ್ಲಿ ಆರೋಗ್ಯವಂತ ಮಹಿಳೆಯರಿರಬೇಕು, ಮಹಿಳೆ ಆರೋಗ್ಯವಾಗಿದ್ದಾಗ ಮಾತ್ರ ಆರೋಗ್ಯವಂತ ಕುಟುಂಬ ಹಾಗೂ ಉತ್ತಮ ಸಮಾಜ ನಿರ್ಮಾಣ ಎಂಬ ಕಲ್ಪನೆ ಡಾ.ಪ್ರಭಾ ಮಲ್ಲಿಕಾರ್ಜುನ್ ರವರದ್ದು.
ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಹಾಗೂ ಅವರು ಆರ್ಥಿಕವಾಗಿ ಸಬಲರಾಗಬೇಕು ಎಂದು ಚಿಂತಿಸುವ ಡಾ ಪ್ರಭಾ ಮಲ್ಲಿಕಾರ್ಜುನ್ ಅದಕ್ಕಾಗಿ ಟ್ರಸ್ಟ್ ಮೂಲಕ ಮಹಿಳೆಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಕ್ಯಾನ್ಸರ್ ಸ್ಕ್ರೀನಿಂಗ್ ಸೇರಿದಂತೆ ಇನ್ನಿತರ ಆರೋಗ್ಯ ತಪಾಸಣೆ ಮಾಡಿಸುವ ಮೂಲಕ ಮಹಿಳೆಯರು ಆರೋಗ್ಯದ ಬಗ್ಗೆ ಜಾಗೃತರಾಗಿರಲು ಪ್ರೇರೇಪಿಸುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ನೀಡಿದ ಭರವಸೆಯಂತೆ ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಾಗಲಿ, ಕುಟುಂಬದ ಕಷ್ಟ ಸುಖಗಳ ಸಮಾರಂಭಗಳ ವಿಷಯದಲ್ಲೇ ಆಗಲಿ ಸದಾ ಸ್ಪಂದಿಸುವ ಇವರು, ನುಡಿದಂತೆ ನಡೆಯುವ ಹಾಗೂ ನೀಡಿದ ಭರವಸೆಯನ್ನು ಚಾಚು ತಪ್ಪದೇ ಈಡೇರಿಸುವ ಮನೋಭಾವದ ಸಮಾಜ ಸೇವಕಿ ಎಂದರೆ ತಪ್ಪಾಗಲಾರದು.
ಕ್ಷೇತ್ರದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಗ್ಯಾರೆಂಟಿ ಯೋಜನೆಗಳು ತಲುಪಬೇಕು ಅದನ್ನು ತಲುಪಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ನಿರ್ವಹಿಸಬೇಕು ಎನ್ನುವ ಡಾ. ಪ್ರಭಾ ಮಲ್ಲಿಕಾರ್ಜುನ್, ಚುನಾವಣೆಗಳಲ್ಲಿ ನಮ್ಮ ಗೆಲುವಿನಲ್ಲಿ ಕಾರ್ಯಕರ್ತರ ಪಾತ್ರವು ಬಹಳ ಮುಖ್ಯವಾದದ್ದು ಅದನ್ನು ಎಂದೂ ಮರೆಯಬಾರದು, ಪ್ರತಿಯೊಬ್ಬ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಸೂಕ್ತ ಗೌರವ ನೀಡುವ ಕಾರ್ಯ ಮಾಡಬೇಕು ಎನ್ನುವ ಅವರ ಆಲೋಚನೆಯಿಂದ ಸಾವಿರಾರು ಕಾರ್ಯಕರ್ತರಿಗೆ ಶಕ್ತಿ ಬಂದಂತಾಗಿದೆ.
ತಮ್ಮ ಟ್ರಸ್ಟಿನ ಉಚಿತ ಯೋಜನೆಗಳು ಹಾಗೂ ತಮ್ಮ ಆಸ್ಪತ್ರೆಯ ರಿಯಾಯಿತಿಗಳು ಕೇವಲ ಬಿಪಿಎಲ್ ಕಾರ್ಡ್ದಾರರಿಗೆ ಮೀಸಲು ಎನ್ನುವ ದಿಟ್ಟ ನಿರ್ಧಾರ ತೆಗೆದುಕೊಂಡಿರುವ ಡಾ. ಪ್ರಭಾ ಮಲ್ಲಿಕಾರ್ಜುನ್, ಆರ್ಥಿಕವಾಗಿ ಸದೃಢರಾಗಿರುವ ಪಕ್ಷದ ಮುಖಂಡರು ಇಂತಹ ಯೋಜನೆಗಳ ಸೌಲಭ್ಯ ಬಯಸಿ ಬಂದಾಗ ಗೌರವದಿಂದಲೇ ತಿರಸ್ಕರಿಸಿ ನಿಮಗೆ ಈ ವೆಚ್ಚವನ್ನು ಬರಿಸುವ ಶಕ್ತಿ ಇದೆ, ನಿಮ್ಮ ಬದಲು ಇನ್ನೂ ನಾಲ್ಕಾರು ಜನ ಬಿಪಿಎಲ್ ಕಾರ್ಡ್ದಾರರನ್ನು ಕಳುಹಿಸಿ ಅವರಿಗೆ ಉಚಿತ ಚಿಕಿತ್ಸೆ ನೀಡೋಣ ಎನ್ನುವ ಇವರು…. ಕಾರ್ಯಕರ್ತರ ವಿಷಯಕ್ಕೆ ಬಂದಾಗ ಕಾರಣಾಂತರಗಳಿಂದ ಬಿಪಿಎಲ್ ಕಾರ್ಡ್ ಇಲ್ಲ ಆದರೂ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಿಲ್ಲ ಎಂದಾಗ ತಮ್ಮ ಟ್ರಸ್ಟಿನ ಬಿಪಿಎಲ್ ಕಾರ್ಡ್ ಯೋಜನೆಯ ನಿಯಮ ಮೀರಿ ಕಾರ್ಯಕರ್ತರಿಗೆ ಉಚಿತ ಸೇವೆ ನೀಡುವುದು, ಕಾರ್ಯಕರ್ತರ ಬಗ್ಗೆ ಅವರಗಿರುವ ಕಾಳಜಿ ಹಾಗೂ ಅಭಿಮಾನ ತೋರಿಸುತ್ತದೆ.
ಸದಾ ಮಹಿಳೆಯರ ಹಾಗೂ ಬಡವರ ಆರೋಗ್ಯದ ಕಾಳಜಿ, ಸಾರ್ವಜನಿಕರ ಕಷ್ಟ ಸುಖಗಳಿಗೆ ಸ್ಪಂದಿಸುವ ಮಾನವೀಯ ಗುಣ, ನಾಟಕಿಯವಿಲ್ಲದ ನಿಷ್ಕಲ್ಮಶ ಮನಸ್ಸಿನ ಡಾ. ಪ್ರಭಾ ಮಲ್ಲಿಕಾರ್ಜುನ್ ರವರಿಗೆ ಆ ದೇವರು ನೂರಾರು ವರ್ಷ ಆಯುರಾರೋಗ್ಯ ಐಶ್ವರ್ಯ ಕರುಣಿಸಲಿ ಹಾಗೂ ಬಡವರ ಪರವಾದ ಅವರ ಯೋಜನೆಗಳಿಗೆ ಇನ್ನು ಹೆಚ್ಚಿನ ಶಕ್ತಿ ದೊರೆಯಲ್ಲಿ ಇಂದು ಬಯಸುತ್ತಾ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಕೋರುವ.
ಕೆ.ಎಲ್.ಹರೀಶ್ ಬಸಾಪುರ.