ದಾವಣಗೆರೆ ಕ್ರಿಕೆಟ್ ಅಕಾಡೆಮಿ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ 23ನೇ ವರ್ಷದ ಕ್ರಿಕೆಟ್ ತರಬೇತಿ ಶಿಬಿರ.

coacing

ದಾವಣಗೆರೆ ಕ್ರಿಕೆಟ್ ಅಕಾಡೆಮಿಯ 23ನೇ ವರ್ಷದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವು ಏಪ್ರಿಲ್ 2 ರಂದು ಬೆಳಗ್ಗೆ 6:30ಗೆ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ.
ದಾವಣಗೆರೆ ಕ್ರಿಕೆಟ್ ಅಕಾಡೆಮಿ ಹಾಗೂ ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರಾದ ಶ್ರೀ ದಿನೇಶ್ ಕೆ ಶೆಟ್ಟಿಯವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ, ಶಿಬಿರದಲ್ಲಿ 6 ರಿಂದ 18 ವರ್ಷದ ಆಸಕ್ತ ಕ್ರೀಡಾಪಟುಗಳಿಗೆ ಬಿಸಿಸಿಐ ಹಾಗೂ ಕೆ ಎಸ್ ಸಿ ಎ ಇಂದ ಮಾನ್ಯತೆ ಪಡೆದ ಕೋಚ್ ಗಳಿಂದ ತರಬೇತಿ ನೀಡಲಾಗುವುದು. ಬೇಸಿಕ್ ಇಂದ ಅಡ್ವಾನ್ಸ್ ವರೆಗೂ ಶಿಬಿರದಲ್ಲಿ ತರಬೇತಿ ನೀಡಲಾಗುವುದು.


ಜೊತೆಗೆ ಫಿಟ್ನೆಸ್ ಹಾಗೂ ವ್ಯಕ್ತಿತ್ವ ವಿಕಸನಾದ ಬಗ್ಗೆಯೂ ತರಬೇತಿ ನೀಡಲಾಗುವುದು. ಬೇರೆ ಬೇರೆ ತಂಡಗಳೊಂದಿಗೆ ಮ್ಯಾಚ್ಗಳನ್ನು ಆಯೋಜಿಸಲಾಗಿದೆ. ಏಪ್ರಿಲ್ 2 ರಿಂದ ಮೇ 30ರವರೆಗೆ ನಡೆಯುವ ಈ ಕ್ರಿಕೆಟ್ ತರಬೇತಿ ಶಿಬಿರದಲ್ಲಿ ಹೆಸರಾಂತ ಕ್ರಿಕೆಟ್ ಕೋಚ್ಗಳು ವಿಶೇಷ ತರಬೇತಿಯನ್ನು ನೀಡಲಿದ್ದಾರೆ.


ಏಪ್ರಿಲ್ 2 ರಿಂದ ಮೇ 30ರವರೆಗೆ ನಡೆಯುವ ಈ ಕ್ರಿಕೆಟ್ ತರಬೇತಿ ಶಿಬಿರದ ಉಸ್ತುವಾರಿಯನ್ನು ಬಿಸಿಸಿಐ ಲೆವೆಲ್ ಎ ಕೋಚ್ ಅದ ಶ್ರೀ ಗೋಪಾಲಕೃಷ್ಣ ಅವರು ಕೆಎಸ್‌ಸಿಎ ಲೆವೆಲ್ ಓ ಕೋಚ್ ಅದ ಶ್ರೀ ತಿಮ್ಮೇಶ್ ಅವರು ನಿರ್ವಹಿಸಲಿದ್ದಾರೆ ಶಿಬಿರದಲ್ಲಿ ಪ್ರತಿಯೊಬ್ಬ ಶಿಬಿರಾರ್ಥಿಗೂ ವಿಶೇಷ ಗಮನ ನೀಡಿ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಗೋಪಾಲಕೃಷ್ಣ 78996 10318, ಗುರು ಅಂಬರ್ಕರ್ 99645 99160 ತಿಮೇಶ್ 98804 4060 ಅವರನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

error: Content is protected !!