ಹಳೇಬಾತಿ ಆಂಜನೇಯ ರಥೋತ್ಸವದ ಪ್ರಯುಕ್ತ ದ್ವಿತೀಯ ಬಾರಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ದಾವಣಗೆರೆ: ದಿನಾಂಕ 18- 4-2024 ರಂದು ಹಳೇಬಾತಿಯಲ್ಲಿ ರಕ್ತದಾನ ಶಿಬಿರವನ್ನು ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹ ಹಳೇಬಾತಿ ಇವರಿಂದ “ಶ್ರೀ ಆಂಜನೇಯ ರಥೋತ್ಸವದ” ಪ್ರಯುಕ್ತ ದ್ವಿತೀಯ ಬಾರಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಶಿಬಿರದಲ್ಲಿ 18ಕ್ಕೂ ಹೆಚ್ಚು ಸಂಖ್ಯೆಯ ಭಕ್ತರು ರಕ್ತದಾನ ಮಾಡುವ ಮೂಲಕ ಈ ಶಿಬಿರವನ್ನು ಯಶಸ್ವಿಯಾಗಿ ನೇರವೇರಿತು, ಈ ಸಂದರ್ಭದಲ್ಲಿ ಆಂಜನೇಯ, ಶಿವಕುಮಾರ್ ಬಿ ಕೆ, ಶಂಕರಮೂರ್ತಿ, ಸಿದ್ದೇಶ್ ಸುರೇಶ್, ಸಚ್ಚಿ ನಟರಾಜು,ನಾಗರಾಜ್ ನವೀನ್,
ಹರೀಶ್ ಹಾಗೂ ಎಲ್ಲಾ ಹಳೇಬಾತಿಯ ರಕ್ತದಾನಿಗಳು ಈ ಸಂದರ್ಭದಲ್ಲಿ ರಕ್ತದಾನ ಮಾಡಲಿದ್ದಾರೆ…