ಜಿಂಕೆ ಸಾಕಾಣಿಕೆ ವಿಚಾರದಲ್ಲಿ ನನ್ನ ಪ್ರತಿಷ್ಠೆ ಡ್ಯಾಮೇಜ್ ಮಾಡಲು ಯತ್ನಿಸಿ ಬಿಜೆಪಿಯವರು ಡ್ಯಾಮೇಜ್ ಆದರು – ಎಸ್ ಎಸ್ ಮಲ್ಲಿಕಾರ್ಜುನ

ದಾವಣಗೆರೆ: ಜಿಂಕೆ ಸಾಕಿದ್ದಾರೆ ಅದು ಮಾಡಿದ್ದಾರೆ, ಇದು ಮಾಡಿದ್ದಾರೆ ಎಂದು ನನ್ನ ಪ್ರತಿಷ್ಠೆ ಡ್ಯಾಮೇಜ್ ಮಾಡಲು ಬಿಜೆಪಿಯು ಅಪಪ್ರಚಾರ ಮಾಡಿತು ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ದೂರಿದರು.
ನಗರದ ಜಿಲ್ಲಾ ವಕೀಲರ ಸಂಘದ ಭವನದಲ್ಲಿ ವಕೀಲ ಸಂಘದವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುವ ಸಭೆÀಯಲ್ಲಿ ಮಾತನಾಡಿದರು.
ನಿಜವಾದ ರಾಜಕಾರಣಿ ಎಂದರೇ ಬುದ್ದಿವಂತರಾದ ವಕೀಲರು, ಸಿಎಂ ಸಿದ್ದರಾಮಯ್ಯ ಅವರು ಸಹ ವಕೀಲರಾಗಿ ಹೋರಾಟದ ಮೂಲಕ ಸಿಎಂ ಆದವರು ಎಂದರು.
ಬಿಜೆಪಿಯವರು ನನ್ನನ್ನು ಟಾರ್ಗೆಟ್ ಮಾಡಿದರು ಏನು ಮಾಡಲಿಕ್ಕಾಗದೆ ಜಿಂಕೆ ಸಾಕಿದ್ದಾರೆ, ಪ್ರಾಣಿ ಸಾಕಿದ್ದಾರೆ ಸಣ್ಣತನ ತೋರಿದರು ಅದಕ್ಕೆಲ್ಲ ಕೋರ್ಟ್ ಉತ್ತರ ಕೊಟ್ಟಿದೆ ನಾವೇನ್ ಸಾಕಿದ್ದೇವೆ ಅದಕ್ಕೆಲ್ಲ ದಾಖಲೆ ಇವೆ. ಸುಖಾಸುಮ್ಮನೆ ಬಿಜೆಪಿಯವರು ಆರೋಪ ಮಾಡುವುದು ಸರಿಯಲ್ಲ ಎಂದರು.
ಕೋವಿಡ್ ಲಸಿಕೆ ವಿತರಣೆಯಲ್ಲಿಯು ಭ್ರμÁ್ಠಚಾರ ಮಾಡಿದರು ಇದಕ್ಕೆ ಚಿಕ್ಕಬಳ್ಳಾಪುರದ ಮಾಜಿ ಸಚಿವ ಸುಧಾಕರ್ ಸುಳ್ಳು ಬಿಲ್ ಸಾಕ್ಷಿ. ನಮ್ಮ ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ ಲಸಿಕಾರಣದಲ್ಲಿಯು ಬಡ ರೋಗಿಗಳು, ಕಷ್ಟದಲ್ಲಿರುವವರನ್ನು ನೋಡದೆ ರಾಜಕೀಯ ಮಾಡಿದರು. ಇದೇಲ್ಲವು ಬಿಟ್ಡು ಜಿಲ್ಲೆಯ ಅಭಿವೃದ್ಧಿ ಕಡೆ ಗಮನ ಹರಿಸಿ ಎಂದು ಬಿಜೆಪಿಗರಿಗೆ ಕಿವಿಮಾತು ಹೇಳಿದರು.
ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಬಡವರಿಗೆ ಬದುಕಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿ ಶ್ರೀಮಂತರು ಇನ್ನಷ್ಟು ಶ್ರೀಮಂತಾಗುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ಮಿತಿ ಮೀರುತ್ತಿದೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳಿಂದ ಬಡವರಿಗೆ ಮಧ್ಯಮ ವರ್ಗದವರಿಗೆ ಸಹಕಾರಿಯಾಗಿದೆ. ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಸಹಕಾರದಂತೆ ಈ ಬಾರಿಯು ವಕೀಲರ ಸಹಕಾರ ಅಗತ್ಯ ಎಂದರು. ಆರೋಗ್ಯ ಕಾಳಜಿ ಉಳ್ಳ ಡಾ. ಪ್ರಭಾ ಮಲ್ಲಿಕಾರ್ಜುನ ಈ ಬಾರಿ ಕಣದಲ್ಲಿದ್ದು ಅವರಿಗೆ ಮತವನ್ಮು ನೀಡಿ ಅವರನ್ನು ಲೋಕಸಭೆಗೆ ಕಳುಹಿಸಿಕೊಡಬೇಕು ಎಂದರು.
ಬಾಕ್ಸ್: ಬೆಂಗಳೂರಿನ ಹೈಕೋರ್ಟ್, ಹಾಸನ, ಬಳ್ಳಾರಿಯ ಜಿಲ್ಲಾ ಕೋರ್ಟ್ ಮಾದರಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿಯು ಕೋರ್ಟ್ ನಿರ್ಮಿಸುವ ಕನಸನ್ನು ಬಿಜೆಪಿಯವರು ಹಾಳು ಮಾಡಿದರು. ಮುಂದೆ ಕೆಹೆಚ್‍ಬಿ ಕಾಲೋನಿಯಲ್ಲಿನ ಕೋರ್ಟನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು.ನಿಮ್ಮಗಳ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಈ ವೇಳೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‍ಕುಮಾರ್, ಅನೀಸ್ ಪಾμÁ, ಆವರಗೆರೆ ಪರಮೇಶ, ರಾಮಚಂದ್ರ ಕಲಾಲ್, ಬಿ.ಎಂ.ಹನುಮಂತಪ್ಪ, ಲೋಕಿಕೆರೆ ಪ್ರದೀಪ್, ರಂಗಸ್ವಾಮಿ, ಭಾಗ್ಯಲಕ್ಷ್ಮಿ, ಲಕ್ಕಪ್ಪ, ರಜ್ವಿಖಾನ್, ಜಗದೀಶ್, ಶಿವಾನಂದಪ್ಪ, ಬಸವರಾಜ್, ವಿ.ಗೋಪಾಲ್, ನಜೀರ್, ಶಾಮ್, ಅಬ್ದುಲ್ ಖಾದರ್, ಎ.ಎಂ.ಹೆಗಡೆ, ಗುರುಬಸವರಾಜ್, ಇತರರು ಉಪಸ್ಥಿತರಿದ್ದರು.