ಮಹಿಳೆ ಜೊತೆ ಪೊಲೀಸ್ ಕಾನ್ಸ್ಟೇಬಲ್ ನೇಣಿಗೆ ಶರಣು

ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಮಹಿಳೆಯೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಧಾರವಾಡ ಸಂಚಾರಿ ಠಾಣೆಯ ಕಾನ್ಸ್ಟೇಬಲ್ ಮಹೇಶ್ ಹೆಸರೂರ್ (31) ಮತ್ತು ವಿಜಯಲಕ್ಷ್ಮೀ ವಾಲಿ (30) ಆತ್ಮಹತ್ಯೆ ಮಾಡಿಕೊಂಡವರು.
ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ನಿವಾಸಿ ಕಾನ್ಸ್ಟೇಬಲ್ ಮಹೇಶ್, ಮದುವೆ ಆಗಿದ್ದರೂ ವಿವಾಹಿತ ಮಹಿಳೆಯೊಂದಿಗೆ ಇದ್ದ ಅನೈತಿಕ ಸಂಬಂಧವೇ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.
ಮಹೇಶ ಹೆಸರೂರು ಹಾಗೂ ವಿಜಯಲಕ್ಷ್ಮೀ ಇಬ್ಬರೂ ಎರಡು ದಿನಗಳ ಹಿಂದೆನೇ ನೇಣಿಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ. ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಆಗಮಿಸಿ ಬಾಗಿಲು ಒಡೆದು ನೋಡಿದಾಗ ಇಬ್ಬರೂ ನೇಣಿಗೆ ಶರಣಾಗಿರುವುದು ಕಂಡುಬಂದಿದೆ.