ಬೀದಿ ಕಾಮಣ್ಣರ ಕಾಟ ಕಂಡರೆ ತುರ್ತಾಗಿ ಕರೆ ಮಾಡಿ; ಮಹಿಳೆಯರ /ಯುವತಿಯರ & ಮಕ್ಕಳ ರಕ್ಷಣೆಗೆ ದುರ್ಗಾ ಪಡೆ ಸದಾ ಸಿದ್ದ – ಎಸ್ ಪಿ ಉಮಾ ಪ್ರಶಾಂತ್

ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸ್ ದುರ್ಗಾ ಪಡೆಯು ಶಾಲಾ ಕಾಲೇಜುಗಳಿಗೆ ಬೇಟಿ ನೀಡಿ ಸೈಬರ್ ಕ್ರೈಂ ಹಾಗು ಅದರಿಂದ ಸುರಕ್ಷತೆಗಳು, ಡ್ರಗ್ಸ್ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಕಾನೂನು ಕ್ರಮಗಳು, ತುರ್ತು ಸಹಾಯವಾಣಿ 112 ಬಳಕೆ ಬಗ್ಗೆ ಜಾಗೃತಿ, ಪಾರ್ಕ್ ಗಳಲ್ಲಿ ಹಿರಿಯ ನಾಗರೀಕರನ್ನು ಬೇಟಿಯಾಗಿ ಹಿರಿಯ ನಾಗರೀಕರ ಸಹಾಯವಾಣಿ & ಸುರಕ್ಷತೆ ಬಗ್ಗೆ ಜಾಗೃತಿ, ಮಹಿಳಾ ನಿಲಯಗಳಿಗೆ ಹಾಗು ಯುವತಿಯರ ಹಾಸ್ಟೆಲ್ ಗಳಿಗೆ ಹಾಗು ಪಾರ್ಕ್ ಗಳಲ್ಲಿ ಮಹಿಳೆಯರನ್ನು, ಯುವತಿಯರನ್ನು ಬೇಟಿ ಮಾಡಿ ಮಹಿಳಾ ದೌರ್ಜನ್ಯ ಕಾಯ್ದೆಗಳ ಬಗ್ಗೆ ಅರಿವು ಹಾಗೂ ಈ ಬಗ್ಗೆ ಠಾಣೆಗೆ ದೂರು ನೀಡುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಕಾಲೇಜ್, ರಸ್ತೆ , ಪಾರ್ಕ್ ಗಳಲ್ಲಿ ವಿದ್ಯಾರ್ಥಿನಿಯರಿಗೆ, ಯುವತಿರಿಗೆ, ಮಹಿಳೆಯರಿಗೆ ಚುಡಾಯಿಸುವ ಪ್ರವೃತ್ತಿಯುಳ್ಳ ಯುವಕರಿಗೆ, ರೋಡ್ ರೋಮಿಯೋಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಕೋಡುವ ಪುಡಾರಿಗಳಿಗೆ ಸೂಕ್ತ ಕಾನೂನು ಕ್ರಮ ಕೈಗೋಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿರುತ್ತಾರೆ.
ಕಾಲೇಜ್ ನಲ್ಲಿ ಕ್ಲಾಸ್ ಗಳಿಗೆ ಬಂಕ್ ಮಾಡಿ ಪಾರ್ಕ್ ಗಳಲ್ಲಿ ರಸ್ತೆ ಬದಿಗಳಲ್ಲಿ ಹರಟೆ ಹೊಡೆಯುತ್ತಾ ಸಮಯ ವ್ಯರ್ಥ ಮಾಡುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸೂಕ್ತ ಬುದ್ದಿಮಾತು ಹೇಳಿ ವಿದ್ಯಾರ್ಥಿ ಜೀವನದಲ್ಲಿ ಚನ್ನಾಗಿ ವಿದ್ಯಾಬ್ಯಾಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೋಳ್ಳುವಂತೆ ಹಾಗೂ ಸಮಾಜದಲ್ಲಿ ಮಾದರಿ ವಿದ್ಯಾರ್ಥಿಗಳಾಗುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ಜಿಲ್ಲಾ ಪೊಲೀಸ್ ನ ಈ ಕ್ರಮದಿಂದ ವಿದ್ಯಾರ್ಥಿಗಳ ಪೋಷಕರುಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಮೊದಲ ಆಧ್ಯತೆಯಾಗಿ ದುರ್ಗಾ ಪಡೆ ನಗರದಲ್ಲಿ ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರ ಮಾರ್ಗ ದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ನಗರದಲ್ಲಿ ಯುವತಿಯರನ್ನು ಚುಡಾಯಿಸುವುದು, ಕಿರುಕುಳವನ್ನು ನೀಡುವುದು, ಬೀದಿ ಕಾಮಣ್ಣರ ಕಾಟ ಕಂಡುಬಂದರೆ ಕೂಡಲೇ ತುರ್ತು ಸಹಾಯವಾಣಿ 112 ಅಥವಾ ದಾವಣಗೆರೆ ಜಿಲ್ಲಾ ಪೊಲೀಸ್ ಕಂಟ್ರೂಲ್ ರೂಂ ನಂ : 9480803200 ಗೆ ಕರೆ ಮಾಡಿ ತಿಳಿಸಲು ಕೋರಿದೆ.