ಟ್ರ್ಯಾಕ್ಟರ್, ಕೃಷಿ ಯಂತ್ರೋಪಕರಣಗಳಿಗೆ ಎಂಆರ್ ಪಿ ದರ ನಿಗದಿ ಪಡಿಸಲು ಕೇಂದ್ರ ಸಚಿವರಿಗೆ ಸಂಸದ ಸಿದ್ದೇಶ್ವರ್ ಮನವಿ

ದಾವಣಗೆರೆ: ರೈತರಿಗೆ ಕೃಷಿ ಚಟುವಟಿಕೆ ಅತ್ಯವಶ್ಯಕವಾಗಿ ಬೇಕಾಗಿರುವ ಟ್ರಾಕ್ಟರ್ ಹಾಗೂ ಕೃಷಿ ಯಂತ್ರೋಪಕರಣಗಳಿಗೆ ಎಂಆರ್‌ಪಿ ದರ ನಿಗದಿಪಡಿಸುವಂತೆ ಕೃಷಿ ಸಚಿವರಾದ ನರೇಂದ್ರಸಿಂಗ್ ತೋಮರ್ ಹಾಗೂ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರಿಗೆ ಸಂಸದ ಜಿ.ಎಂ. ಸಿದ್ದೇಶ್ವರ್ ಮನವಿ ಮಾಡಿದರು.
ದೆಹಲಿಯ ಕೃಷಿ ಭವನದಲ್ಲಿ ನರೇಂದ್ರಸಿಂಗ್ ತೋಮರ್ ಹಾಗೂ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಸಿದ್ದೇಶ್ವರ್ ಅವರು ಟ್ರ್ಯಾಕ್ಟರ್ ಹಾಗೂ ಕೃಷಿ ಯಂತ್ರೋಪಕರಣಗಳಿಗೆ ಎಂ.ಆರ್.ಪಿ ದರ ನಿಗದಿಪಡಿಸುವಂತೆ ಕಳೆದೊಂದು ವ?ದಿಂದ ಪ್ರಧಾನ ಮಂತ್ರಿಗಳು ಸೇರಿದಂತೆ ಕೃಷಿ ಸಚಿವರಿಗೆ ಹಲವಾರು ಬಾರಿ ಪತ್ರ ಬರೆದು, ಮೂಲಕ, ಸಂಸತ್ತಿನಲ್ಲಿ ಪ್ರಶ್ನೆ ಕೇಳುವ ಮೂಲಕ, ಶೂನ್ಯ ವೇಳೆಯಲ್ಲಿಯೂ ಪ್ರಸ್ತಾಪಿಸುವ ಮೂಲಕ ಸಾಕ? ಪ್ರಯತ್ನ ನಡೆಸಿದ್ದರು.
ಪ್ರಯತ್ನದ ಫಲವಾಗಿ ಕೇಂದ್ರ ಕೃಷಿ ಸಚಿವಾಲಯ ಕಳೆದ ಮೇ ತಿಂಗಳಲ್ಲಿ ದೇಶದಲ್ಲಿರುವ ಎಲ್ಲಾ ಟ್ರಾಕ್ಟರ್ ಹಾಗೂ ಕೃಷಿ ಯಂತ್ರೋಪಕರಣ ಉತ್ಪಾದಕ ಕಂಪನಿಗಳಿಗೆ ಪತ್ರ ಬರೆದು ಎಂ.ಆರ್.ಪಿ ದರದ ಬಗ್ಗೆ ಸೂಕ್ತ ನಿರ್ದೇಶನ ನೀಡಿದ್ದು, ಶೀಘ್ರವಾಗಿ ಈ ಕುರಿತು ಸರ್ಕಾರಿ ಆದೇಶ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ಯನ್ನು ಸಚಿವರು ನೀಡಿದರು.
ಕೇಂದ್ರ ಕೃಷಿ ಸಚಿವರ ಭೇಟಿ ಸಂದರ್ಭದಲ್ಲಿ ಈ ಹಿಂದೆ ಸರ್ಕಾರ ನೀಡಿರುವ ನಿರ್ದೇಶನ ಕೃಷಿ ಸಚಿವಾಲಯದಿಂದ ಸರ್ಕಾರಿ ಆದೇಶವಾಗುವುದು ಬಾಕಿ ಇರುವ ವಿಷಯವನ್ನು ಸಚಿವರ ಗಮನಕ್ಕೆ ತಂದರು. ಈ ವಿಷಯವಾಗಿ ಸಚಿವಾಲಯದ ಮಾರ್ಕೆಟಿಂಗ್ ವಿಭಾಗದ ಜಂಟಿ ನಿರ್ದೇಶಕರನ್ನು ಕರೆಸಿಕೊಂಡು ಕೂಲಂಕುಷವಾಗಿ ಚರ್ಚೆ ನಡೆಸಲಾಯಿತು.
ಆದೇಶವಾದ ತಕ್ಷಣ ಸರ್ಕಾರದ ಕೃಷಿ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಟ್ರಾಕ್ಟರ್ ಹಾಗೂ ಕೃಷಿ ಯಂತ್ರೋಪಕರಣಗಳ ಗರಿ? ಎಂ.ಆರ್.ಪಿ ದರ ಪ್ರಕಟಣೆಯಾಗಲಿದೆ. ಇದರಿಂದಾಗಿ ಟ್ರಾಕ್ಟರ್ ಉತ್ಪಾದಕ ಕಂಪನಿಗಳಿಂದ ರೈತರಿಗಾಗುವ ಶೋಷಣೆ, ಅನ್ಯಾಯ ಕೊನೆಯಾಗಲಿದೆ. ದೇಶದಲ್ಲಿರುವ ಕೋಟ್ಯಾಂತರ ರೈತರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸಿದ್ದೇಶ್ವರ್ ಇದೇ ವೇಳೆ ಹೇಳಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಲೋಕಸಭಾ ಸದಸ್ಯ ದೇವೇಂದ್ರಪ್ಪ ಇದ್ದರು.