Exclusive MDM Part 1: ಅಕ್ಷರ ದಾಸೋಹ ಆಹಾರ ಸಾಗಾಣಿಕೆಯಲ್ಲಿ ನಿಯಮಾವಳಿ ಉಲ್ಲಂಘನೆ.!

mid day meal scheme conditions violations garudavoice investigation news report

ದಾವಣಗೆರೆ: MDM: ದಾವಣಗೆರೆ ಜಿಲ್ಲೆಯಲ್ಲಿ ತನಿಖಾ ವರದಿ, ಎಕ್ಸಕ್ಲೂಸಿವ್, ಇಂಪ್ಯಾಕ್ಟ್, ಸುದ್ದಿಗಳನ್ನು ನೀಡುತ್ತಿರುವ ಗರುಡಚರಿತೆ ಪತ್ರಿಕೆ ಹಾಗೂ ಗರುಡವಾಯ್ಸ್.ಕಾಂ ಸ್ಫಷ್ಟ ದಾಖಲೆಗಳ ಮೂಲಕ  ತನಿಖಾ ವರದಿಗಳನ್ನು ಬಿತ್ತರಿಸುತ್ತಾ ಬಂದಿದೆ. ಇದೀಗ ಪತ್ರಿಕೆಗೆ ಲಭ್ಯವಾಗಿರುವ ದಾಖಲೆಗಳು ಹಾಗೂ ಮಾಹಿತಿಯ ಪ್ರಕಾರ ಆಹಾರ ಇಲಾಖೆಯ ಚಿಲ್ಲರೆ ಹಾಗೂ ಸಗಟು ಪಡಿತರ ಸಾಗಾಣಿಕೆಗಾಗಿ ಗುತ್ತಿಗೆ ಪಡೆದು ಸಕ್ರಮದ ಹೆಸರಿನಲ್ಲಿ ಅಕ್ರಮವಾಗಿ ನಿಯಮ/ಷರತ್ತುಗಳನ್ನು ಉಲ್ಲಂಘಿಸಿ ಸರ್ಕಾರದ ಪ್ರಮುಖ ಯೋಜನೆಯಾದ “ಅನ್ನಭಾಗ್ಯ” ಯೋಜನೆಯ ಆದೇಶಗಳ ವಿರುದ್ದವಾಗಿ ಸಾಗಾಣಿಕೆ ಮಾಡುತ್ತಿರುತ್ತಾರೆ. ಸುದ್ದಿಯ ಪ್ರಥಮ ಭಾಗವಾಗಿ “ಮಿಡ್ ಡೇ ಮೀಲ್ಸ್”  ವಿಷಯದ ಕುರಿತು ತನಿಖಾ ವರದಿಯನ್ನು ಬಿತ್ತರಿಸುತ್ತಿದೆ. ಓದುಗರು ತಮ್ಮ ಅಭಿಪ್ರಾಯ, ಸಲಹೆ, ಮಾಹಿತಿ ಗಳನ್ನು ಪತ್ರಿಕೆ ಯಾವಾಗಲೂ ಸ್ವಾಗತಿಸುತ್ತದೆ.

ಮಧ್ಯಾಹ್ನದ ಊಟದ ಯೋಜನೆ PM-POSHAN ಉದ್ದೇಶವು ಶಾಲೆಗೆ ಹೋಗುವ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಮಧ್ಯಾಹ್ನದ ಊಟವನ್ನು ನೀಡುವುದಾಗಿತ್ತು. ಪ್ರಾಥಮಿಕ ಶಿಕ್ಷಣಕ್ಕೆ ಪೌಷ್ಟಿಕಾಂಶದ ಬೆಂಬಲದ ರಾಷ್ಟ್ರೀಯ ಕಾರ್ಯಕ್ರಮ (NP- NSPE) 2006 ಮಾರ್ಗಸೂಚಿಗಳು ಕ್ರಿಯಾ ಯೋಜನೆಯನ್ನು ನೀಡಿತು, ಸರ್ಕಾರವು ಸಮುದಾಯದ ಬೆಂಬಲವನ್ನು ಸಜ್ಜುಗೊಳಿಸಬಹುದು ಮತ್ತು ಉಪಕ್ರಮವನ್ನು ಕಾರ್ಯಗತಗೊಳಿಸಲು ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ನೀಡಲು ಪ್ರಾರಂಭಿಸಿತು.

ಪ್ರಧಾನ ಮಂತ್ರಿ ಫೋಷಣ್-ಅಕ್ಷರ ದಾಸೋಹ ಕಾರ್ಯಕ್ರಮದಡಿ ( ಮಿಡ್ ಡೇ ಮೀಲ್ಸ್) ಪೂರಕ ಆಹಾರ ಸಾಮಾಗ್ರಿಗಳನ್ನು ದಾವಣಗೆರೆ ಜಿಲ್ಲೆಯ ಆಯಾ ತಾಲ್ಲೂಕು ಕೆ. ಎಫ್. ಸಿ.ಎಸ್ ಸಿ ಗೋದಾಮಿನಿಂದ ಶಾಲಾ ಅಡುಗೆ ಕೇಂದ್ರಗಳಿಗೆ ಸಾಗಾಣಿಕೆ ಮಾಡಲು ನೇಮಕವಾಗಿರುವ ಗುತ್ತಿಗೆದಾರು, ಸಾಗಾಣಿಕಾ ಕರಾರು ಒಪ್ಪಂದ ಹಾಗೂ ಇಲಾಖಾ ನಿಯಮವಾಳಿಗಳನ್ನು ಗಾಳಿಗೆ ತೂರಿ ಸಕ್ರಮದ ಹೆಸರಿನಲ್ಲಿ ಅಕ್ರಮ ನಡೆಸುತ್ತಿರುವುದು ಬಯಲಿಗೆ ಬಂದಿದೆ.

ದಾವಣಗೆರೆ ಜಿಲ್ಲೆಯ ಪಿ.ಎಂ.ಪೋಷಣ್-ಅಕ್ಷರ ದಾಸೋಹ ಕಾರ್ಯಕ್ರಮದಡಿ ಪೂರಕ ಆಹಾರ ಸಾಮಾಗ್ರಿಗಳನ್ನು ಆಯಾ ತಾಲ್ಲೂಕು ಕೆ.ಎಫ್.& ಸಿ.ಎಸ್.ಸಿ. ಸಗಟು ದಾಸ್ತಾನು ಮಳಿಗೆಗಳಿಂದ ಶಾಲಾ ಅಡುಗೆ ಕೇಂದ್ರಗಳಿಗೆ 2023-2024    ನೇ ಸಾಲಿಗೆ ಪೂರಕ ಆಹಾರ ಧಾನ್ಯಗಳ ಸಾಗಾಣಿಕೆ ಮಾಡಲು ಗುತ್ತಿಗೆದಾರರು ಸಲ್ಲಿಸಿರುವ ದಾಖಲೆಗಳು ನಕಲಿ/ಊರ್ಜಿತವಲ್ಲದ ಪತ್ರಗಳನ್ನು ನೀಡಿರುವುದು ಆರ್ ಟಿ ಐ ನಡಿ ಪಡೆದಿರುವ ದಾಖಲೆಗಳ ಪ್ರಕಾರ ಮೇಲ್ನೋಟಕ್ಕೆ ನಕಲಿ ದಾಖಲೆ ಸಲ್ಲಿಸಿರುತ್ತಾರೆ. ಟೆಂಡರ್ ಕರಾರು ಪ್ರಕಾರ ಸೂಚಿಸಿರುವ ಷರತ್ತುಗಳು ಹಾಗೂ ನಿಯಮಾವಳಿಗಳನ್ನ ಉಲ್ಲಂಘಿಸಿ  ಟೆಂಢರ್ ಪಡೆದಿರುತ್ತಾರೆ.  ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಮೇರೆಗೆ  ಎಲ್ಲಾ ದಾಖಲೆಗಳನ್ನ  ಪುನಃ ಪರಿಶೀಲಿಸಿ ಅಸಿಂದುವಾಗಿರುವ/ನಕಲಿ ದಾಖಲೆಗಳು ನೀಡಿರುವ ಗುತ್ತಿಗೆದಾರರ ವಿರುದ್ದ ನಿಯಮಾನುಸಾರ ಕಾನೂನು ಕ್ರಮ ಜರುಗಿಸುವಂತೆ ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕರಾದ ಶ್ರೀ ಸುರೇಶ್ ಬಿ ಇತ್ನಾಳ್ ಅವರಿಗೆ ದೂರು ನೀಡಲಾಗಿದೆ.

ಸಾಗಾಣಿಕೆ ಷರತ್ತು:

  1. ಪೂರಕ ಆಹಾರ ಸಾಮಾಗ್ರಿಗಳನ್ನು ಕಡ್ಡಾಯವಾಗಿ ಶಾಲಾ ಅವಧಿಯಲ್ಲಿಯೇ ಮುಖ್ಯಶಿಕ್ಷಕರ ಸಮ್ಮುಖದಲ್ಲಿ ಅಳತೆ ಮಾಪನಗಳನ್ನು (ಎಲೆಕ್ಟಾçನಿಕ್ ವೇಯಿಂಗ್ ಮಿಷಿನ್) ಇಟ್ಟುಕೊಂಡು ಅಳತೆ ಮಾಡಿ ಆಹಾರ ಸಾಮಾಗ್ರಿಗಳನ್ನು ನೀಡಿ ಸ್ವೀಕೃತಿ ಪಡೆದು ಸಕ್ಷಮ ಪ್ರಾಧಿಕಾರದಿಂದ ಸಲ್ಲಿಸುವುದು.
  2. ನೇಮಕಗೊಂಡ ಸಾಗಾಣಿಕೆ ಗುತ್ತಿಗೆದಾರರು ಬೇರೆ ಅನಧಿಕೃತ ಲಾರಿ ಮಾಲೀಕರಿಗೆ ಉಪಗುತ್ತಿಗೆ ನೀಡುವಂತಿಲ್ಲ ಸಾಗಾಣಿಕೆಗೆ ನೇಮಕಗೊಂಡ ಲಾರಿಗಳನ್ನೇ ಉಪಯೋಗಿಸತಕ್ಕದ್ದು, ಈ ಕುರಿತು ಯಾವುದೇ ವ್ಯತಿರಿಕ್ತ ಪ್ರಕರಣಗಳು ಕಂಡು ಬಂದಲ್ಲಿ ಕಾನೂನು ರೀತ್ಯ ಕ್ರಮ ಜರುಗಿಸಿ ಅವರ ಗುತ್ತಿಗೆಯನ್ನು ರದ್ದು ಪಡಿಸಲಾಗುವುದು ಎಂದು ಷರತ್ತುಗಳನ್ನು ವಿಧಿಸಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿರುತ್ತದೆ. ಆದರೆ ಗುತ್ತಿಗೆದಾರು ಇಲಾಖೆ ನೀಡಿರುವ ಯಾವುದೇ ಷರತ್ತುಗಳನ್ನು ಪಾಲಿಸದೇ ನಿಯಮಾವಳಿಗಳನ್ನು ಉಲ್ಲಂಘಿಸುತ್ತಾ ಸಾಗಾಣಿಕೆ ಮಾಡುತ್ತಿರುತ್ತಾರೆ.

ಪಿ ಎಂ ಪೋಷಣ್ ಶಕ್ತಿ ನಿರ್ಮಾಣ್- ಅಕ್ಷರ ದಾಸೋಹ ಕಾರ್ಯಕ್ರಮದ ಪೂರಕ ಆಹಾರ ಸಾಗಾಣಿಕೆಗಾಗಿ ಟೆಂಡರ್ ನಲ್ಲಿ ಸಲ್ಲಿಸಿರುವ ಲಾರಿಗಳಲ್ಲಿ ಕಾರ್ಯ ನಿರ್ವಹಿಸದೆ ಆಹಾರ ಇಲಾಖೆಯಲ್ಲಿ ಪಡಿತರ ಸಾಗಾಣಿಕಾ ಟೆಂಡರ್ ನಲ್ಲಿ ಕರಾರು ಮಾಡಿಕೊಂಡಿಕೊಂಡಿರುವ ಲಾರಿಗಳಲ್ಲಿ ಆಹಾರ ಧಾನ್ಯಗಳನ್ನು ಎತ್ತುವಳಿ ಮಾಡಿ ಸರಬರಾಜು ಮಾಡುತ್ತಿರುತ್ತಾರೆ ಹಾಗೂ ಕೆ ಎಫ್ ಸಿ ಎಸ್ ಸಿ ಸಗಟು ಮಳಿಗೆಗಳಲ್ಲಿ ತೂಕವನ್ನು ಸರಿಯಾಗಿ ಮಾಡಿಸದೇ ತೂಕದ ಸೇತುವೆಯಲ್ಲಿ ( ವೇ ಬ್ರಿಡ್ಜ್ ) ನಲ್ಲಿ ಎಲ್ಲಾಆಹಾರ ಪದಾರ್ಥಗಳನ್ನು ಸೇರಿಸಿ ತೂಕ ಮಾಡಿಸಿ ಹಾಗೂ ಶಾಲೆಗಳಲ್ಲಿ ವಿತರಿಸುವಾಗ ಕೂಡ ಪರಿಮಾಣದ ತೂಕವನ್ನು ಮಾಡುವುದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಟೆಂಡರ್ ಪಡೆಯಲು ಊರ್ಜಿತವಲ್ಲದ ಅನುಭವ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಕೆಟಿಪಿಪಿ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿರುವುದು ಬೇಳಕಿಗೆ ಬಂದಿದೆ.

ಸಕ್ರಮದ ಹೆಸರಿನಲ್ಲಿ ಅವ್ಯವಹಾರ, ಅಕ್ರಮ ನಡೆಸಲು ಸಹಕರಿಸಿದವರೆಲ್ಲರ ವಿರುದ್ದ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ನಿಯಮಾನುಸಾರ ಕಾನೂನು ಕ್ರಮ ಜರುಗಿಸುವಂತೆ, ಹಾಗೂ ಕೆಟಿಪಿಪಿ ಕಾಯ್ದೆ ಅನ್ವಯ ಗುತ್ತಿಗೆದಾರರು ನೀಡಿರುವ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡು ಕಪ್ಪು ಪಟ್ಟಿಗೆ ಸೇರಿಸುವಂತೆ, ಹಾಗೂ ಈ ರೀತಿಯ ನಿಯಮವಾಳಿಗಳನ್ನು ಗಾಳಿಗೆ ತೂರಿದ್ದರೂ ಸಂಬಂಧಿಸಿದ ಅಧಿಕಾರಿಗಳು  ಯಾವುದೇ ಕ್ರಮ ಕೈಗೋಳ್ಳದೆ ಅಂಧರಿಕಿ ಮಂಚಿವಾಳು ಎಂಬರ್ಥದಲ್ಲಿ ಮೌನವಹಿಸಿರುವುದು ಅಕ್ರಮಕ್ಕೆ ಸಾಥ್ ನೀಡಿರುವ ಬಗ್ಗೆ ಹಲವು ಅನುಮಾನಕ್ಕೆ ಆಸ್ಫದವಾಗಿದೆ ಎನ್ನಲಾಗಿದೆ.  To Be Continued Part – 2

 

Leave a Reply

Your email address will not be published. Required fields are marked *

error: Content is protected !!