ಆನ್ಲೈನ್ ಷೇರ್ ಟ್ರೇಡಿಂಗ್ ಮೋಸ: ಉಪನ್ಯಾಸಕರಿಗೆ 53 ಲಕ್ಷದ 59 ಸಾವಿರ ಹಣ ವಂಚನೆ
ದಾವಣಗೆರೆ: ದಾವಣಗೆರೆ ವಾಸಿಯಾದ ಓರ್ವ ಉಪನ್ಯಾಸಕರು ದಿನಾಂಕ:19-08-2024 ರಂದು ಸಿ ಇ ಎನ್ ಠಾಣೆಗೆ ಹಾಜರಾಗಿ ಆನ್ಲೈನ್ ಷೇರ್ ಟ್ರೇಡಿಂಗ್ ಹೆಸರಲ್ಲಿ 53 ಲಕ್ಷಕ್ಕೂ ಅಧಿಕ ಹಣ ವಂಚನೆ ಮಾಡಿರುವ ಬಗ್ಗೆ ಲಿಖಿತ ದೂರು ದಾಖಲಿಸಿದ್ದಾರೆ.
ದಿನಾಂಕ:-04-06-2024 ರಂದು ಮಧ್ಯಾಹ್ನ 04-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರು ಮನೆಯಲ್ಲಿರುವಾಗ ತಮ್ಮ ಮೊಬೈಲ್ ನಂಬರ್ ಗೆ ಯಾರೋ ಅಪರಿಚಿತರ ವ್ಯಕ್ತಿ ಪಿರ್ಯಾದಿ ಮೊಬೈಲ್ ನಂಬರನ್ನು ವಾಟ್ಸಾಪ್ ಗ್ರೂಪ ಆದ N1 WEALTH ENHANCEMENT STRATEGY GROUP ಗೆ ಸೇರಿಸಿಕೊಂಡಿದ್ದು ಸದರಿ ಗ್ರೂಪ್ ನಲ್ಲಿ ಆನ್ಲೈನ್ ಟ್ರೀಡಿಂಗ್ ನಲ್ಲಿ investment ಮಾಡಲು ಟಿಪ್ಸ ಗಳನ್ನು ನೀಡುತ್ತಿದ್ದು ನಂತರ ಮೆಸೆಜ್ ಮಾಡಿ ಗ್ರೂಪ್ ಗೆ Join ಆಗಲು ಸೂಚಿಸುತ್ತಿದ್ದರಂತೆ.
ಟ್ರೇಡಿಂಗ್ ಮಾಡುವುದಾದರೆ ಖಾತೆಯನ್ನು ತೆರೆಯಬೇಕೆಂದು ತಿಳಿಸಿ ಪಿರ್ಯಾದಿಯ ಆಧಾರ ಕಾರ್ಡ್ ಮತ್ತು ಪಾನ್ ಕಾರ್ಡ್ ಮಾಹಿತಿಯನ್ನು ತೆಗೆದುಕೊಂಡು lostei.com ಎಂಬ ವೈಬ್ ಸೈಟ್ ನಲ್ಲಿ ಖಾತೆ ತೆರೆಯಿಸಿ ಅವರು ಸೂಚಿಸಿದ ಷೇರುಗಳಿಗೆ ಈ ಖಾತೆಯ ಮೂಲಕ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ನಂಬಿಸಿ ಹಂತ ಹಂತವಾಗಿ 53,59,343/-ಹಣ ಹೂಡಿಕೆ ಮಾಡಿಸಿಕೊಂಡಿರುತ್ತಾರೆ.
ನಂತರ ಪಿರ್ಯಾದಿದಾರರು ಯಾರೋ ಸೈಬರ್ ವಂಚಕರು ಆನ್ ಲೈನ್ ಮೂಲಕ ತನಗೆ ಮೋಸ ಮಾಡಿರುತ್ತಾರೆಂದು ದೂರು ನೀಡಿದ ಮೇರೆಗೆ ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.
ಆದ್ದರಿಂದ ಸಾರ್ವಜನಿಕರು ಆನ್ ಲೈನ್ ಮೂಲಕ ಷೇರ್ ಮಾರ್ಕೆಟ್ ಗೆ ಹೂಡಿಕೆ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಬರುವ ಸಂದೇಶಗಳನ್ನು ನಂಬದೇ ಇರುವ ಬಗ್ಗೆ ಈ ಮೂಲಕ ದಾವಣಗೆರೆ ಪೊಲೀಸ್ ಪ್ರಕಟಣೆಯಲ್ಕಿ ಕೋರಲಾಗಿದೆ.Online trading investment ಹೆಸರಿನಲ್ಲಿ ಆಗುವ ವಂಚನೆಗಳ ಜಾಗರೂಕರಾಗಿರಿ ಎಂದು ದಾವಣಗೆರೆ ಎಸ್ ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.