ಬಿ ಬಿ ಎಂ ಪಿ ಮುಖ್ಯ ಅಭಿಯಂತರರುಗಳು PMC ಹೆಸರಿನಲ್ಲಿ ಹಣ ಲೂಟಿ ಆರೋಪ.! ಸಿ ಐ ಡಿ ತನಿಖೆಗೆ ಆಗ್ರಹ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳುವ ಪ್ರತಿಯೊಂದು ಕಾಮಗಾರಿಗಳಿಗೆ ಸಂಬಂಧಿಸಿದಂತೆ PMC (Project Management Consultancy) ಕಾರ್ಯವನ್ನು ಸಂಬಂಧಪಟ್ಟ ಆಯಾ ಮುಖ್ಯ ಅಭಿಯಂತರರುಗಳೇ ಕಾನೂನು ಬಾಹಿರವಾಗಿ ನಿರ್ವಹಿಸುತ್ತಿರುವ ಸಂಗತಿ ಗುಟ್ಟಾಗಿ ಉಳಿದಿಲ್ಲ.

ಪ್ರತಿಯೊಂದು ಕಾಮಗಾರಿಯ ಒಟ್ಟು ಮೊತ್ತದ ಶೇ. 02% ರಷ್ಟು ಮೊತ್ತವನ್ನು PMC ಹೆಸರಿನಲ್ಲಿ ಕಡಿತಗೊಳಿಸುವ ಮುಖ್ಯ ಅಭಿಯಂತರರುಗಳು ಅಂತಹ ಎಲ್ಲಾ PMC ಕಾರ್ಯಗಳನ್ನು ತಮ್ಮ ಸಂಬಂಧಿಕರು / ಬೆಂಬಲಿಗರು / ಹಿಂಬಾಲಕರ ಮೂಲಕವೇ ನಡೆಸುತ್ತಾ, ಪ್ರತಿಯೊಂದು ಕಾಮಗಾರಿಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ಕೊಳ್ಳೆ ಹೊಡೆಯುತ್ತಿರುವ ಸಂಗತಿ ಇದುವರೆವಿಗೆ ಬಿಬಿಎಂಪಿಯ ಮಾನ್ಯ ಮುಖ್ಯ ಆಯುಕ್ತರು ಹಾಗೂ ಮಾನ್ಯ ಆಡಳಿತಾಧಿಕಾರಿಗಳ ಗಮನಕ್ಕೆ ಬಾರದೇ ಇರುವುದು ನಿಜಕ್ಕೂ ದುರಾದೃಷ್ಟಕರವಾಗಿರುತ್ತದೆ.

ಪ್ರತಿಯೊಂದು ಕಾಮಗಾರಿಯ PMC Agency ಗಳನ್ನು ನಿಗದಿ ಮಾಡುವ ಸಂಬಂಧ ನಿಯಮಾನುಸಾರ Tender / Quotation ಗಳ ಮೂಲಕ ಅರ್ಹ ಸಂಸ್ಥೆಗಳಷ್ಟೇ ಈ PMC ಕಾರ್ಯಗಳ ಕಾರ್ಯಾದೇಶ ಪತ್ರಗಳನ್ನು ನೀಡಬೇಕಿರುತ್ತದೆ.

PMC ಮೊತ್ತ 05 ಲಕ್ಷಕ್ಕಿಂತಲೂ ಕಡಿಮೆ ಇದ್ದರೆ Quotation ಮೂಲಕ ಮತ್ತು 05 ಲಕ್ಷಕ್ಕಿಂತಲೂ ಹೆಚ್ಚಿದ್ದರೆ Tender ಆಹ್ವಾನಿಸಿದ ನಂತರ ಅರ್ಹರಿಗೆ PMC ಕಾರ್ಯದ ಕಾರ್ಯಾದೇಶ ಪತ್ರ ನೀಡಬೇಕಿರುತ್ತದೆ.

ಆದರೆ, ಕಾನೂನು ರೀತ್ಯಾ ನಿರ್ವಹಿಸಬೇಕಾದ ಈ ಕಾರ್ಯದಲ್ಲಿ ತಮ್ಮ ಸಂಬಂಧಿಕರು / ಹಿಂಬಾಲಕರು / ಅನುಯಾಯಿಗಳನ್ನು ಹೊರತುಪಡಿಸಿ ಬೇರೆ ಯಾವ Agency ಗಳೂ ಸಹ ಇಂತಹ Tender / Quotation ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ಆಯಾ ಮುಖ್ಯ ಅಭಿಯಂತರರು ನೋಡಿಕೊಳ್ಳುತ್ತಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ವರ್ಷ ಒಂದಕ್ಕೆ ಕನಿಷ್ಠ 04 ಸಾವಿರದಿಂದ 05 ಸಾವಿರ ಕೋಟಿ ರೂಪಾಯಿಗಳಷ್ಟು ಮೊತ್ತದ ಅಭಿವೃದ್ಧಿ ಕಾರ್ಯಗಳು / ಕಾಮಗಾರಿಗಳು ನಡೆಯುತ್ತಿದ್ದು, 80 ಕೋಟಿಯಿಂದ 100 ಕೋಟಿ ರೂಪಾಯಿಗಳಷ್ಟು ಮೊತ್ತ ಕೇವಲ PMC ಹೆಸರಿನಲ್ಲಿ ಸಂಬಂಧಪಟ್ಟ ಆಯಾ ಮುಖ್ಯ ಅಭಿಯಂತರರುಗಳ ಜೇಬು ಸೇರುತ್ತಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿ ಬಿಲ್ಲುಗಳನ್ನು ಪಾವತಿ ಮಾಡುವಲ್ಲಿ ಹೆಚ್ಚಿನ ಆರ್ಥಿಕ ಶಿಸ್ತು ಹಾಗೂ ಪಾರದರ್ಶಕತೆಯನ್ನು ತರುವ ದೃಷ್ಟಿಯಿಂದ ದಿನಾಂಕ 03/08/2018 ರಂದು ಪಾಲಿಕೆಯ ಅಂದಿನ ಆಯುಕ್ತರು PMC ಪದ್ಧತಿಯನ್ನು ಜಾರಿಗೆ ತರಲು ಆದೇಶಿಸಿರುತ್ತಾರೆ. ಅಂದಿನ ಆಯುಕ್ತರ ಈ ಆದೇಶವು ಕೆಲವು ಭ್ರಷ್ಟ ಮುಖ್ಯ ಅಭಿಯಂತರರುಗಳಿಗೆ ವರದಾನವಾಗಿ ಪರಿಣಮಿಸಿದ್ದು, ಅದನ್ನೇ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಅಪಾರ ಪ್ರಮಾಣದ ಹಣವನ್ನು ಕಾನೂನು ಬಾಹಿರವಾಗಿ ಲೂಟಿ ಮಾಡಿರುತ್ತಾರೆ.

03/08/2018 ರಲ್ಲಿ PMC ಪದ್ಧತಿ ಜಾರಿಗೆ ತರುವ ಆದೇಶವನ್ನು ಆಯುಕ್ತರು ಜಾರಿ ಮಾಡಿದ ನಂತರ ಇದುವರೆವಿಗೆ ಸುಮಾರು 500 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು PMC ಪದ್ಧತಿ ಅಡಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರ ಪೈಕಿ ಶೇ. 90% ರಷ್ಟು ಹಣವನ್ನು ನಾಲ್ಕೈದು ಪ್ರಾಮಾಣಿಕ ಮುಖ್ಯ ಅಭಿಯಂತರರುಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಮುಖ್ಯ ಅಭಿಯಂತರರುಗಳು ತಮ್ಮ ರಕ್ತ ಸಂಬಂಧಿಕರುಗಳಿಗೆ, ಹಿಂಬಾಲಕರಿಗೆ, ಮತ್ತು ಅನುಯಾಯಿಗಳಿಗೆ ನಿಯಮಬಾಹಿರವಾಗಿ PMC ಪದ್ಧತಿಯ ಟೆಂಡರ್ ಗಳನ್ನು ಮಾಡಿಕೊಡುವ ಮೂಲಕ ಲಪಟಾಯಿಸಿರುತ್ತಾರೆ.

ಇಂತಹ ಜನ ವಿರೋಧಿ ಮತ್ತು ಕಾನೂನು ವಿರೋಧಿ ಕಾರ್ಯವನ್ನು ತಡೆಗಟ್ಟಬೇಕಾದ ತಾವು Project Management Consultancy (PMC) ವಿಷಯಕ್ಕೆ ಸಂಬಂಧಿಸಿದಂತೆ ನಿಯಮಾನುಸಾರ ಟೆಂಡರ್ ಆಹ್ವಾನಿಸಿ ಅರ್ಹತೆ ಇರುವ ಸಂಸ್ಥೆಗಳಿಗಷ್ಟೇ PMC ಕಾರ್ಯವನ್ನು ನಿರ್ವಹಿಸುವ ಹೊಣೆ ನೀಡುವ ಸಂಬಂಧ ಕೂಡಲೇ ಕಟ್ಟು ನಿಟ್ಟಿನ ಆದೇಶವನ್ನು ನೀಡಬೇಕೆಂದು ಹಾಗೂ ಕಳೆದ ಹತ್ತು ವರ್ಷಗಳಿಂದ ಇಂತಹ ಕಾನೂನು ಬಾಹಿರ ಕಾರ್ಯದಲ್ಲಿ ತೊಡಗಿಕೊಂಡಿರುವ ಎಲ್ಲಾ ಮುಖ್ಯ ಅಭಿಯಂತರರುಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳುವುದರ ಜೊತೆಗೆ, ಕಳೆದ ಹತ್ತಾರು ವರ್ಷಗಳಿಂದ ನಿತ್ಯ ನಿರಂತರವಾಗಿ ನಡೆಯುತ್ತಿರುವ ಈ ಬೃಹತ್ ಅಕ್ರಮದ ತನಿಖೆಯನ್ನು CID ಗೆ ವಹಿಸಬೇಕೆಂದು ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆಯುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರನ್ನು ಮತ್ತು ಮಾನ್ಯ ಆಡಳಿತಾಧಿಕಾರಿಗಳನ್ನು ಆಗ್ರಹಿಸಲಾಗಿದೆ ಎಂದು ಬಂದ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ರಮೇಶ್ ಎನ್. ಆರ್ ಸೊಐಡಿ ತನಿಖೆಗೆ ಆಗ್ರಹಿಸಿ ದೂರು ನೀಡಿದ್ದಾರೆ

Leave a Reply

Your email address will not be published. Required fields are marked *

error: Content is protected !!