ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಧರಣಿ

IMG-20210805-WA0012

 

ದಾವಣಗೆರೆ: (ಚನ್ನಗಿರಿ), ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಳ ಮಾಡಬೇಕು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಸಮಿತಿ ಕೆರೆ ಮೇರೆಗೆ ಚನ್ನಗಿರಿ ತಾಲೂಕು ಕಛೇರಿ ಮುಂದೆ ಧರಣಿ ನಡೆಸಿದರು.

ಕರ್ನಾಟಕ ರಾಜ್ಯದಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಅನುದಾನಿತ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಬಿಸಿಯೂಟ ತಯಾರಕರಾಗಿ ಕೆಲಸ ನಿರ್ವಹಿಸುತ್ತಿರುವ ಅಡುಗೆಯವರಿಗೆ ಸರ್ಕಾರ ನೀಡುತ್ತಿರುವ ಗೌರವ ಸಂಭಾವನೆ ತಿಂಗಳಿಗೆ ಮುಖ್ಯ ಅಡುಗೆಯವರಿಗೆ ರೂ . 2.700 / – ರೂ.ಗಳು , ಸಹಾಯಕ ಅಡುಗೆಯವರಿಗೆ ರೂ . 2,500 / – ರೂ.ಗಳು ಮಾತ್ರ ನೀಡುತ್ತಿದ್ದಾರೆ.

ಈ ವೇತನದಿಂದ ಬಿಸಿಯೂಟ ತಯಾರಕರು ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಜೀವನ ನಿರ್ವಹಣೆ ಮಾಡುವುದು ತುಂಬಾ ಕಷ್ಟಕರವಾಗಿದೆ . ಆದ್ದರಿಂದ ಅವರಿಗೆ ವೇತನದಲ್ಲಿ ಹೆಚ್ಚಳ ಮಾಡುವುದು ಹಾಗೂ 2021 ರ ಜೂನ್ – ಜುಲೈ ತಿಂಗಳುಗಳ ವೇತನವನ್ನು ಕೂಡಲೇ ಬಿಡುಗಡೆಗೊಳಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ತಹಶಿಲ್ದಾರರ್ ರವರಿಗೆ ಮನವಿ ಸಲ್ಲಿಸಿದರು.

ಜೆಲ್ಲಾ ಅಧ್ಯಕ್ಷ ಅವರಗೆರೆ ಚಂದ್ರು. ತಾಲ್ಲೂಕು ಅಧ್ಯಕ್ಷೆ ಮಂಗಳಬಾಯಿ. ರಾಜ್ಯ ಖಜಂಚೆ . ರುದ್ರಮ್ಮ. ಬೇಳಲಗೆರೆ ಇತರರು ಉಪಸ್ಥರಿದ್ದರು

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!