ಸತೀಶ್ ಪೂಜಾರಿ ಜೈಲಿನಿಂದ ಬಿಡುಗಡೆ; ಸೆಪ್ಟಂಬರ್ 12 ರಿಂದ ದಾವಣಗೆರೆ ಜೈಲಿನಲ್ಲಿದ್ದ ಹಿಂದೂ ಮುಖಂಡ
ದಾವಣಗೆರೆ: ಪ್ರಚೋದನಕಾರಿ ಭಾಷಣ ಹಿನ್ನೆಲೆ, ದಾವಣಗೆರೆಯ ಹಿಂದೂ ಜಾಗರಣಾ ವೇದಿಕೆಯ ಸತೀಶ್ ಪೂಜಾರಿ ಸೇರಿದಂತೆ ಹಲವರನ್ನು ದಾವಣಗೆರೆಯ ಬಸವನಗರ ಪೊಲೀಸರು ಸೆಪ್ಟೆಂಬರ್12 ರಂದು ವಶಕ್ಕೆ ಪಡೆದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು, ಇಂದು ದಾವಣಗೆರೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ದಾವಣಗೆರೆ ಬಸವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸತೀಶ್ ಪೂಜಾರ್ ಭಾಷಣ ಮಾಡಿದ್ದರು,ಇದೇ ವಿಚಾರಕ್ಕೆ ಗಣಪತಿ ಮೆರವಣಿಗೆ ವೇಳೆ ಎರಡು ಕೋಮಿನ ನಡುವೆ ಕಲ್ಲು ತೂರಾಟ ನಡೆದಿತ್ತು.ಘಟನೆಗೆ ಸತೀಶ್ ಪೂಜಾರ್ ಭಾಷಣವೇ ಕಾರಣ ಎಂದು ಕೆಲವರು ಆರೋಪಿಸಿ ದೂರು ನೀಡಿದ್ದರು,ಘಟನೆ ಸಂಬಂಧ ಸತೀಶ್ ಪೂಜಾರ್ ಸೇರಿ ಹಲವರನ್ನು ವಶಕ್ಕೆ ಪಡೆಯಲಾಗಿತ್ತು
ಶಿವಮೊಗ್ಗದ ಸಾಗರ ದಲ್ಲದ್ದ ಸತೀಶ್ ಪೂಜಾರ್ ಅವರನ್ನು ದಾವಣಗೆರೆಯ ಬಸವನಗರ ಪೊಲೀಸರು ಬಂಧಿಸಿ ನ್ಯಾಯಧೀಶರ ಮುಂದೆ ಹಾಜರುಪಡಿಸಲಾಗಿತ್ತು, ಸತೀಶ್ ಪೂಜಾರ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಜೈಲಿನಿಂದ ಬಿಡುಗಡೆಯಾದ ನಂತರ ಮಾಜಿ ಮೇಯರ್ ವೀರೇಶ್ ಹಿಂದೂ ಕಾರ್ಯಕರ್ತರು, ಸತೀಶ್ ಪೂಜಾರಿ ಅಭಿಮಾನಿಗಳು, ಸ್ನೇಹಿತರು ಬೈಕ್ ರ್ಯಾಲಿ ಮೂಲಕ ನಗರದ ಪ್ರಮುಖ ರಸ್ತೆಯಲ್ಲಿ ಜೈಕಾರ ಕೂಗಿಕೊಂಡು ಮೆರವಣಿಗೆ ಮಾಡಿದರು.