KUWJ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದಾವಣಗೆರೆ ಜಿಲ್ಲಾ ಘಟಕಕ್ಕೆ ನಿವೇಶನ ಹಂಚಿಕೆಗೆ ಸಚಿವ ಸಂಪುಟ ನಿರ್ಧಾರ

Screenshot_20250102-224727_Chrome

ದಾವಣಗೆರೆ: (KUWJ) ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದಾವಣಗೆರೆ ಜಿಲ್ಲಾ ಘಟಕ ದಾವಣಗೆರೆ ತಾಲ್ಲೂಕು ಅವರಗೆರೆ ಗ್ರಾಮದ ಸ.ನಂ. 186/1234, ಅನುಮೋದಿತ ಖಾಸಗಿ ವಸತಿ ಬಡಾವಣೆಯಲ್ಲಿನ ನಾಗರೀಕ ಸೌಲಭ್ಯದ ಉದ್ದೇಶಕ್ಕಾಗಿ ಕಾಯ್ದಿರಿಸಿದ ನಿವೇಶನದ ವಿಸ್ತೀರ್ಣ, 2132/27.75 ಮೀಟರ್ ಒಟ್ಟು 591,43 ಚ.ಮೀ ವಿಸ್ತೀರ್ಣದ ನಿವೇಶನವನ್ನು ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.

ಈ ಹಿಂದೆ ಅರ್ಜಿಯೊಂದಿಗೆ ಲಗತ್ತಿಸಿರುವ ಪ್ರಮಾಣ ಪತ್ರದಲ್ಲಿನ ನಿಬಂಧನೆಗಳಿಗೆ ಒಳಪಡಿಸಿ ನಿಯಮದ ರೀತ್ಯ 30 ವರ್ಷಗಳ ಅವಧಿಗೆ ಗುತ್ತಿಗೆ (ಲೀಸ್) ಮೇರೆಗೆ ಸದರಿ ನಾಗರಿಕ ಸೌಲಭ್ಯ ನಿವೇಶನಕ್ಕೆ ರೂ.39.31.697/- ಗಳನ್ನು ನಿಗದಿಪಡಿಸಿ ಹಂಚಿಕೆ ಮಾಡಲಾಗಿದೆ. ಸದರಿ ಸಂಸ್ಥೆಯವರು ಮಂಜೂರಾತಿ ಕೋರಿ ಸಲ್ಲಿಸಿದ ಅರ್ಜಿಯೊಂದಿಗೆ ರೂ.3.56,858/- ಗಳನ್ನು ಪಾವತಿಸಿರುತ್ತಾರೆ. ಬಾಕಿ ಮೊತ್ತ ರೂ.35,74,839/- ಗಳನ್ನು ಪಾವತಿಸ ಬೇಕಾಗಿರುತ್ತದೆ. ಸದರಿ ನಾಗರಿಕ ಸೌಲಭ್ಯದ ನಿವೇಶನ ಮೊತ್ತಕ್ಕೆ ರಿಯಾಯಿತಿ ದರವನ್ನು ಕಡಿಮೆ ಮಾಡಲು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆ) ನಿಯಮಗಳು 1991 ರನ್ವಯ ಅವಕಾಶವಿರುವುದಿಲ್ಲ ದಿರುವುದರಿಂದ ಪ್ರಸ್ತಾವನೆಯನ್ನು ತಿರಸ್ಕರಿಸಲು ಸಚಿವ ಸಂಪುಟ ಅನುಮೋದಿಸಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದಾವಣಗೆರೆ ಜಿಲ್ಲಾ ಘಟಕಕ್ಕೆ ದಾವಣಗೆರೆ ತಾಲ್ಲೂಕು, ಅವರಗೆರೆ ಗ್ರಾಮದ ಸ.ನಂ. 186/1234, ಅನುಮೋದಿತ ಖಾಸಗಿ ವಸತಿ ಬಡಾವಣೆಯಲ್ಲಿನ ನಾಗರೀಕ ಸೌಲಭ್ಯದ ಉದ್ದೇಶಕ್ಕಾಗಿ ಕಾಯ್ದಿರಿಸಿದ ನಿವೇಶನದ ವಿಸ್ತೀರ್ಣ 2132+27.75 ಮೀಟರ್ ಒಟ್ಟು 591.43 ಚ.ಮೀ ವಿಸ್ತೀರ್ಣದ ನಿವೇಶನವನ್ನು ಅರ್ಜಿಯೊಂದಿಗೆ ಲಗತ್ತಿಸಿರುವ ಪ್ರಮಾಣ ಪತ್ರದಲ್ಲಿನ ನಿಬಂಧನೆಗಳಿಗೆ ಒಳಪಡಿಸಿ ನಿಯಮದ ರೀತ್ಯ 30 ವರ್ಷಗಳ ಅವಧಿಗೆ ಗುತ್ತಿಗೆ (ಲೀಸ್) ಮೇರೆ ಸದರಿ ನಾಗರಿಕ ಸೌಲಭ್ಯ ನಿವೇಶನಕ್ಕೆ ರೂ.39,31,697/- ಗಳನ್ನು ನಿಗದಿಪಡಿಸಿ ಹಂಚಿಕೆ ಮಾಡಲಾಗಿದೆ. ಸದರಿ ಸಂಸ್ಥೆಯವರು ಮಂಜೂರಾತಿ ಕೋರಿ ಸಲ್ಲಿಸಿದ ಅರ್ಜಿಯೊಂದಿಗೆ ರೂ.3,56,858/- ಗಳನ್ನು ಪಾವತಿಸಿರುತ್ತಾರೆ. ಬಾಕಿ ಮೊತ್ತ ರೂ.35,74,839/- ಗಳನ್ನು ಪಾವತಿಸಬೇಕಾಗಿರುತ್ತದೆ. ಸದರಿ ನಾಗರಿಕ ಸೌಲಭ್ಯದ ನಿವೇಶನ ಮೊತ್ತಕ್ಕೆ ರಿಯಾಯಿತಿ ದರ ಚದರ ಅಡಿಗೆ ರೂ.1/- ನ್ನು ನಿಗಧಿಪಡಿಸಿ ಹಂಚಿಕೆ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಇವರಿಗೆ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ದಾವಣಗೆರೆ ತಾಲ್ಲೂಕು, ಅವರಗೆರೆ ಗ್ರಾಮದ ಸ.ನಂ. 186/1234, ಅನುಮೋದಿತ ಖಾಸಗಿ ವಸತಿ ಬಡಾವಣೆಯಲ್ಲಿ ಹಂಚಿಕೆಯಾಗಿರುವ 591.43 ಚ.ಮೀ ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶನಕ್ಕೆ ರಿಯಾಯಿತಿ ದರ ನಿಗದಿಪಡಿಸಿ ಹಂಚಿಕೆ ಮಾಡಲು ಪ್ರಸ್ತಾಪಿಸಲಾಗಿತ್ತು. ಅದರಂತೆ ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನವನ್ನು ತೆಗೆದುಕೊಂಡಿತು.

ಸಚಿವ ಸಂಪುಟದ ತೀರ್ಮಾನಕ್ಕೆ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಸೇರಿದಂತೆ ಎಲ್ಲಾ ಪಧಾದಿಕಾರಿಗಳು, ಸದಸ್ಯರು, ಜಿಲ್ಲೆಯ ಎಲ್ಲಾ ಪತ್ರಕರ್ತರು ಸಿಎಂ ಸಿದ್ದರಾಮಯ್ಯ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಕ್ಷರಾದ  ಶಿವಾನಂದ ತಗಡೂರು ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!