CC Road: ಉತ್ತಮ ಸ್ಥಿತಿಯಲ್ಲಿರುವ ರಸ್ತೆ ಕಿತ್ತುಹಾಕಿ ಸಿಸಿ ರಸ್ತೆ ಮಾಡಲು ಗುತ್ತಿಗೆ.! ಪಾಲಿಕೆ ಕಾರ್ಯಕ್ಕೆ ಸಾರ್ವಜನಿಕರ ಅಸಮಾಧಾನ

ದಾವಣಗೆರೆ: (CC Road) ದಾವಣಗೆರೆ ನಗರದಲ್ಲಿ ಇತ್ತೀಚೆಗೆ ಉತ್ತಮ ವಾಗಿರುವ ಹಾಗೂ ಕೆಲವೇ ವರ್ಷಗಳ ಹಿಂದೆ ರಸ್ತೆ ಕಾಮಗಾರಿ ನಡೆಸಿರುವ ರಸ್ತೆಗಳನ್ನು ಕಿತ್ತು ಹಾಕಿ ನೂತನ ರಸ್ತೆಗಳನ್ನು ಮಾಡುತ್ತಿದ್ದು, ಪಾಲಿಕೆ ಅಧಿಕಾರಿಗಳು ಯಾರನ್ನೋ.! ಮೆಚ್ಚಿಸಲು ಈ ರೀತಿಯ ಕಾಮಗಾರಿಯನ್ನು ನಡೆಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ದಾವಣಗೆರೆ ನಗರದ ವಾರ್ಡ್ ನಂಬರ್ 38 ರಲ್ಲಿನ ಎಂ ಸಿ ಸಿ ‘ಬಿ’ ಬ್ಲಾಕ್ 11 ನೇ ಮುಖ್ಯ ರಸ್ತೆಯಲ್ಲಿ ಇರುವ ಡಾಂಬರ್ (Bituminous road) ರಸ್ತೆಯನ್ನು ಅಗೆದು ಸಿಸಿ ರಸ್ತೆ (Concrete Cement Road) ಮಾಡಲು ಮಹಾನಗರ ಪಾಲಿಕೆ ಮುಂದಾಗಿದೆ. 40 ಲಕ್ಷ ರೂಪಾಯಿ ಮೌಲ್ಯದ ಸಿಸಿ ರಸ್ತೆ ಕಾಮಗಾರಿ ನಡೆಸಲು ಮುಂದಾಗಿದೆ. ಸಧ್ಯ ಈ ಡಾಂಬರ್ ರಸ್ತೆಯಲ್ಲಿ ಕೇವಲ ಎರಡು ಗುಂಡಿಗಳು ಮಾತ್ರ ಇದ್ದು ಉಳಿದಂತೆ ಬಹುತೇಕ ರಸ್ತೆ ಉತ್ತಮ ಸ್ಥಿತಿಯಲ್ಲಿ ಇದೆ.
ದಾವಣಗೆರೆ ಮಹಾನಗರ ಪಾಲಿಕೆ ಇಂಜಿನಿಯರ್‌ಗಳು ಕಾಮಗಾರಿ ಮುನ್ನ ರಸ್ತೆ ಗುಣಮಟ್ಟ ಪರೀಕ್ಷೆ ವರದಿ ತಯಾರಿಸಿದ ನಂತರ ಹಣದ ಲಭ್ಯತೆ ಹಾಗೂ ಆದ್ಯತೆ ಇರುವ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳಲು ತೀರ್ಮಾನ ತೆಗೆದುಕೊಳ್ಳುವುದು ವಾಡಿಕೆಯ ಸಂಗತಿ. ನಗರದಲ್ಲಿ ಅನೇಕ ಪ್ರಮುಖ ರಸ್ತೆಗಳು ಹಾಳಾಗಿದ್ದು ಅದರಲ್ಲೂ ಕೆಲವು ಸ್ಲಂ ಪ್ರದೇಶದಲ್ಲಿ ಇದುವರೆಗೂ ಮೂಲಭೂತ ಸೌಕರ್ಯಗಳ ಕೊರತೆ ಇದ್ದರೂ ಸಹ ಕೆಲವೆಡೆ ಉತ್ತಮ ಪರಿಸ್ಥಿತಿಯಲ್ಲಿ ಇರುವ ರಸ್ತೆಗಳನ್ನು ಪುನರ್ ನಿರ್ಮಾಣ ಮಾಡುತ್ತಿರುವುದು ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಮಹಾನಗರದ ಪಾಲಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
CC Road: ಉತ್ತಮ ಸ್ಥಿತಿಯಲ್ಲಿರುವ ರಸ್ತೆ ಕಿತ್ತುಹಾಕಿ ಸಿಸಿ ರಸ್ತೆ ಮಾಡಲು ಗುತ್ತಿಗೆ.! ಪಾಲಿಕೆ ಕಾರ್ಯಕ್ಕೆ ಸಾರ್ವಜನಿಕರ ಅಸಮಾಧಾನ