Santhebennuru: ಅಪ್ರಾಪ್ತ ಬಾಲಕನಿಂದ ಸರಣಿ ಮನೆ ಕಳ್ಳತನ, ಆರೋಪಿತರ ಬಂಧನ, ಅಂದಾಜು 5.5 ಲಕ್ಷ ಮೌಲ್ಯದ ಸ್ವತ್ತು ವಶ

IMG-20250221-WA0014

ದಾವಣಗೆರೆ: (Santhebennur) ಸಂತೇಬೆನ್ನೂರು ವೃತ್ತ ವ್ಯಾಪ್ತಿಯ ಬಸವಾಪಟ್ಟಣ ಠಾಣಾ ಸರಹದ್ದಿನ ದೊಡ್ಡಘಟ್ಟ ಗ್ರಾಮದಲ್ಲಿ ಮತ್ತು ಬಸವಾಪಟ್ಟಣ ಗ್ರಾಮದಲ್ಲಿ ಸರಣಿ ಮನೆಕಳ್ಳತನಗಳು ಜರುಗಿದ್ದು ಆರೋಪಿತರನ್ನು ಬಂಧಿಸಿ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಮನೆ ಕಳ್ಳತನ ಬಗ್ಗೆ ದಿನಾಂಕ:-08-02-2025 ರಂದು ಹಾಗೂ 10-02-2025 ರಂದು ಪಿರ್ಯಾದಿದಾರರು ನೀಡಿದ ದೂರಿನ ಮೇರೆಗೆ 1) ಗುನ್ನೆ ನಂ-14/2025 02) ಗುನ್ನೆ ನಂ-16/2025, 03) ಗುನ್ನೆ ನಂ-17/2025 ರೀತ್ಯಾ ಒಟ್ಟು 03 ಪ್ರಕರಣಗಳು ದಾಖಲಾಗಿದ್ದವು.
ಸದರಿ ಸರಣಿ ಮನೆ ಕಳ್ಳತನ ಪ್ರಕರಣಗಳಿಂದ ಬಸವಾಪಟ್ಟಣ, ಸಂತೇಬೆನ್ನೂರು ಕಡೆಗಳಲ್ಲಿ ವಾಸಿಸುವ ಜನರು ಭಯಬೀತರಾಗಿದ್ದು, ಸದರಿ ಪ್ರಕರಣಗಳ ಆರೋಪಿತರ ಪತ್ತೆಕಾರ್ಯ ಪೊಲೀಸರಿಗೆ ಸವಾಲಾಗಿತ್ತು.

ಸದರಿ ಸರಣಿ ಮನೆ ಕಳ್ಳತನ ಪ್ರಕರಣಗಳು ನಡೆದ ಕೃತ್ಯದ ಸ್ಥಳಗಳಿಗೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಹಾಗೂ ಸ್ಯಾಮ್ ವರ್ಗಿಸ್ ಐಪಿಎಸ್ ರವರು ಮತ್ತು ಪೊಲೀಸ್ ಅಧಿಕಾರಿಗಳ ತಂಡದೊಂದಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖಾಧಿಕಾರಿಗಳಿಗೆ ಸರಣಿ ಮನೆ ಕಳ್ಳತನದ ಆರೋಪಿತರ ಪತ್ತೆಗೆ ಸೂಕ್ತ ಸೂಚನೆಗಳನ್ನು ನೀಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀವಿಜಯಕುಮಾರ ಎಂ ಸಂತೋಷ ಹಾಗೂ ಶ್ರೀಮಂಜುನಾಥ ರವರ ಹಾಗೂ ಸಹಾಯಕ ಪೊಲೀಸ್ ಅಧೀಕ್ಷರು ಚನ್ನಗಿರಿ ರವರಾದ ಶ್ರೀ ಸ್ಯಾಮ್ ವರ್ಗೀಸ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಸಿಪಿಐ ಸಂತೇಬೆನ್ನೂರು ವೃತ್ತ ಶ್ರೀ ಲಿಂಗನಗೌಡ ನೆಗಳೂರು ರವರ ನೇತೃತ್ವದಲ್ಲಿ ಪಿಎಸ್.ಐ ಬಸವಾಪಟ್ಟಣ ಮತ್ತು ಪಿಎಸ್.ಐ ಸಂತೇಬೆನ್ನೂರು ಸಿಬ್ಬಂದಿಗಳನ್ನೋಳಗೊಂಡ 02 ತಂಡಗಳನ್ನು ರಚನೆ ಮಾಡಲಾಗಿರುತ್ತು.

ಸದರಿ ತಂಡವು ವಿವಿಧ ಕಡೆ ಆರೋಪಿತರ ಪತ್ತೆ ಕಾರ್ಯ ಕೈಗೊಂಡಿದ್ದು. ದಿನಾಂಕ: 21-02-2025 ರಂದು ಮೇಲ್ಕಂಡ ಸರಣಿ ಮನೆ ಕಳ್ಳತನ ಪ್ರರಕರಣಗಳ ಆರೋಪಿತರಾದ 01) ಮನೋಜ, 22 ವರ್ಷ, ವಾಸ ಕಾಡಜ್ಜಿ ಗ್ರಾಮ, ದಾವಣಗೆರೆ ಜಿಲ್ಲೆ ಮತ್ತು ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಆರೋಪಿತರುಗಳು ಬಸವಾಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಣಿ ಮನೆ ಕಳ್ಳತನ ಪ್ರಕರಣಗಳಲ್ಲಿ ಬಾಗಿಯಾಗಿರುವುದು ತಿಳಿದು ಬಂದಿರುತ್ತದೆ.

ಈ ಆರೋಪಿತರ ಕಡೆಯಿಂದ ಮೇಲ್ಕಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 500 ಗ್ರಾಂ ಬೆಳ್ಳಿಯ ಆಭರಣಗಳು, ಸುಮಾರು 45 ಗ್ರಾಂ ಬಂಗಾರದ ಆಭರಣ ಮತ್ತು ಕೃತ್ಯಕ್ಕೆ ಬಳಸಿದ 02 ಮೋಟಾರು ಬೈಕ್ ಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ. ಅವುಗಳ ಪೈಕಿ 01 ಮೋಟಾರು ಬೈಕ್ ಕಳ್ಳತನ ಪ್ರಕರಣ ಬಸವಾಪಟ್ಟಣ ಪೊಲೀಸ್ ಠಾಣೆ ಗುನ್ನೆನಂ-18/2025 ಕಲಂ-303(2) ಪ್ರಕರಣಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಇನ್ನೊಂದು ಬೈಕ್ ಅನ್ನು ಕಡೂರು ನಗರದಲ್ಲಿ ಕಳ್ಳತನ ಮಾಡಿದ್ದಾಗಿ ತಿಳಿಸಿರುತ್ತಾರೆ. ಮೇಲ್ಕಂಡ ಪ್ರಕರಣಗಳಲ್ಲಿ ಭಾಗಿಯಾದ ಇನ್ನಿಬ್ಬರು ಆರೋಪಿತರು ತಲೆಮರೆಸಿಕೊಂಡಿದ್ದು ಅವರ ಪತ್ತೆಕಾರ್ಯ ಮುಂದುವರೆದಿರುತ್ತದೆ.

ಆರೋಪಿತರ ಹಿನ್ನೇಲೆ: ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನು ಈ ಹಿಂದೆ ಜನವರಿ ತಿಂಗಳಲ್ಲಿ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ 05 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುತ್ತದೆ. ಆರೋಪಿತ ಮನೋಜ್ ಬಿಳಿಚೋಡು ಪೊಲೀಸ್ ಠಾಣೆಯ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುತ್ತದೆ.

ಒಟ್ಟು 05 ಕಳ್ಳತನ ಪ್ರಕರಣಗಳಲ್ಲಿನ ಸ್ವತ್ತು ಮತ್ತು ಆರೋಪಿತರನ್ನು ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿಗಳಾದ ಸಿಪಿಐ ಸಂತೇಬೆನ್ನೂರು ವೃತ್ತ ಶ್ರೀ ಲಿಂಗನಗೌಡ ನೆಗಳೂರು ನೇತೃತ್ವದ ಪಿಎಸ್.ಐ ಬಸವಾಪಟ್ಟಣ ರವರಾದ ಶ್ರೀಮತಿ ಭಾರತಿ, ಹಾಗೂ ವೀಣಾ, ಪಿಎಸ್.ಐ ಸಂತೇಬೆನ್ನೂರು ರವರಾದ ಶ್ರೀ ಜಗದೀಶ್ ರವರು ಸಿಬ್ಬಂದಿಯವರಾದ- ದೊಡ್ಡಬಸಪ್ಪ ಎ.ಎಸ್.ಐ, ಶ್ರೀಸತೀಶ, ರುದ್ರೇಶ ಎಂ. ಶ್ರೀವೀರಭದ್ರಪ್ಪ, ಹನುಮಂತಪ್ಪ ರಾಘವೇಂದ್ರ, ಪರಶುರಾಮ, ಅರುಣ, ಮೋಹನ, ತಿಮ್ಮರಾಜು, ಇಬ್ರಾಹಿಂ, ಅಣ್ಣೇಶ, ವೆಂಕಟೇಶ, ರವಿ ಕುಮಾರ, ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿಗಳಾದ ಶಿವಕುಮಾರ ಬಿ ಕೆ & ರಮೇಶ್ ಎಂ ಪಿ ರವರುಗಳನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಶ್ಲಾಘಿಸಿರುತ್ತಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!