Helmet: ದಾವಣಗೆರೆಯಲ್ಲಿ ಸಂಚಾರಿ ನಿಯಮಗಳ ಅಭಿಯಾನ, 1200 ಪ್ಲಾಸ್ಟಿಕ್ ಹಾಗೂ ಅರ್ಧ ಹೆಲ್ಮೆಟ್ ವಶ

ದಾವಣಗೆರೆ: (Helmet) ದಾವಣಗೆರೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರ ಸೂಚನೆಯಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ ಎಂ ಸಂತೋಷ್ ರವರು & ಶ್ರೀ ಜಿ ಮಂಜುನಾಥ ರವರ ಹಾಗೂ ನಗರ ಡಿವೈಎಸ್ಪಿ ಶ್ರೀ ಶರಣ ಬಸವೇಶ್ವರ ರವರ ಮಾರ್ಗದರ್ಶನದಲ್ಲಿ ದಾವಣಗೆರೆ ನಗರ ಸಂಚಾರ ಪೊಲೀಸ್ ಸಿಪಿಐ ನಲವಾಗಲು ಮಂಜುನಾಥ್ ರವರ ನೇತೃತ್ವದಲ್ಲಿ ದಕ್ಷಿಣ ಸಂಚಾರ & ಉತ್ತರ ಸಂಚಾರ ಪಿಎಸ್ಐ ರವರುಗಳಾದ ಶ್ರೀಮತಿ ಜಯಶೀಲ, ಶ್ರೀಮತಿ ನಿರ್ಮಲ, ಶ್ರೀಮತಿ ಶೈಲಜಾ ಹಾಗೂ ಶ್ರೀ ಮಂಜಪ್ಪ ರವರು ಹಾಗೂ ಸಿಬ್ಬಂದಿಗಳ ತಂಡ half ಹೆಲ್ಮೆಟ್, ಕಳಪೆ ಗುಣಮಟ್ಟದ ಹೆಲ್ಮೆಟ್ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ ಹಾಕಿಕೊಂಡು ಸಂಚಾರಿಸುವ ಮೋಟಾರ್ ಸೈಕಲ್ ಚಾಲಕರಿಗೆ ಸುರಕ್ಷಿತಾ ದೃಷ್ಟಿಯಿಂದ ಅವುಗಳನ್ನು ಧರಿಸದಂತೆ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ / half ಹೆಲ್ಮೆಟ್ ಬದಲಾಗಿ ISI ಗುಣಮಟ್ಟದ ಸುರಕ್ಷಿತಾ ಹೆಲ್ಮೆಟ್ ಗಳನ್ನು ಧರಿಸಿ ಮೋಟಾರ್ ಸೈಕಲ್ ಚಲಾಯಿಸಿ ಅಪಘಾತದಂತ ಸಂದರ್ಭದಲ್ಲಿ ತಮ್ಮ ಜೀವನ ಹಾನಿಯನ್ನು ತಡೆಯಬೇಕು ಅಂತಾ ಅರಿವನ್ನು ಮೂಡಿಸಿಸುವ ಹಾಗೂ *ಪ್ಲಾಸ್ಟಿಕ್ / half ಹೆಲ್ಮೆಟ್ ಗಳನ್ನು ನಾಶಪಡಿಸುವ ಸಲುವಾಗಿ ವಶಕ್ಕೆ ಪಡೆಯುವ ಕಾರ್ಯಚರಣೆ ಇಂದು ಮುಂದುವರೆದಿದ್ದು, ದಾವಣಗೆರೆ ನಗರದ- ಬಾಡಾ ಕ್ರಾಸ್, ಡೆಂಟಲ್ ಕಾಲೇಜ್ ರೋಡ್, ಅಂಬೇಡ್ಕರ್ ಸರ್ಕಲ್ ಮತ್ತು ಐ ಟಿ ಐ ಗೇಟ್ ಸರ್ಕಲ್ ನಲ್ಲಿ ವಿಶೇಷ ಕಾರ್ಯಚರಣೆ ನಡೆಸಿ ಮತ್ತೇ ಈ ದಿನ ಒಟ್ಟು 1200 ಪ್ಲಾಸ್ಟಿಕ್ / half ಹೆಲ್ಮೆಟ್ ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಹಾಗೂ ಕೇವಲ ಈ ಬಾರಿ ISI ಮಾರ್ಕ್ ಇರುವ ಗುಣಮಟ್ಟದ ಹೆಲ್ಮೆಟ್ ತಂದು ಹಾಕಿಕೊಂಡವರಿಗೆ ಹಾಗೂ ಪ್ಲಾಸ್ಟಿಕ್ ಹೆಲ್ಮೆಟ್ / half ಹೆಲ್ಮೆಟ್ ಅನ್ನು ಅರಿತುಕೊಂಡು ವಶಕ್ಕೆ ನೀಡಿದವರಿಗೆ ಮಾತ್ರ ದಂಡ ವಿಧಿಸದೆ ತಿಳುವಳಿಕೆ ನೀಡಿ ಹಾಗೆ ಕಳುಹಿಸಲಾಗಿರುತ್ತದೆ.*
*ದಿನಾಂಕ 24/2/25 ರ ಸೋಮವಾರ ದಿಂದ ISI ಮಾರ್ಕ್ ಇಲ್ಲದ ಕಳಪೆ, ಹಾಫ್ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ ಹಾಕಿಕೊಂಡು ಮೋಟಾರ್ ಸೈಕಲ್ ಓಡಿಸುವ ಚಾಲಕರಿಗೆ ಕಡ್ಡಾಯವಾಗಿ ದಂಡ ವಿಧಿಸಲಾಗುವುದು ಎಂದು ಪೊಲೀಸ್ ಅಧಿಕ್ಷರರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಎಚ್ಚರಿಸಿದ್ದಾರೆ*