Lokayukta: ದಾವಣಗೆರೆ ಜಿಲ್ಲಾ ಸಾರಿಗೆ ಅಧಿಕಾರಿಗಳ ವಿರುದ್ದ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ ಮಣಿ ಸರ್ಕಾರ್

ದಾವಣಗೆರೆ:(Lokayukta) ದಾವಣಗೆರೆ ಜಿಲ್ಲೆಯ ಸಾರಿಗೆ ಇಲಾಖೆಯ ಪ್ರಾದೇಶಿಕಾ ಸಾರಿಗೆ ಅಧಿಕಾರಿ ಸಿ.ಎಸ್, ಪ್ರಮುಂತೇಶ್, ಹಿರಿಯ ಮೋಟಾರು ವಾಹನ ನೊರೀಕ್ಷಕರಾದ ಮೊಹಮ್ಮದ್ ಖಾಕೀದ್ ಹಾಗೂ ಟಿ ಎಸ್ ಸತೀಶ್ ಇವರುಗಳ ವಿರುದ್ದ ಶ್ರೀರಾಮ ಸೇನೆ ಜಿಲ್ಲಾದ್ಯಕ್ಷರಾದ ಮಣಿ ಸರ್ಕಾರ್ ಕರ್ನಾಟಕ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇವರುಗಳು ಈ ಹಿಂದೆ ದಾವಣಗೆರೆ ಕಛೇರಿಯಲ್ಲಿ 5 -6 ವರ್ಷ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಸಾರಿಗೆ ಅಧಿಕಾರಿಗಳಾಗಿ ಇದೇ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಅಲ್ಲದೆ ಮೊಹಮ್ಮದ್ ಖಾಲೀದ್ ಹಿರಿಯ ಮೋಟರ್ ವಾಹನ ನೀರಿಕ್ಷಕರು.ಇವರು ಸುಮಾರು 13 ವರ್ಷಗಳಿಂದ ದಾವಣಗೆರೆ ಸಾರಿಗೆ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗೂ ಟಿ ಎಸ್ ಸತೀಶ್ ಹಿರಿಯ ಮೋಟರ್ ವಾಹನ ನೀರಿಕ್ಷಕರ ಇವರು ಕೂಡ ಸುಮಾರು 6 ವರ್ಷಗಳಿಂದ ದಾವಣಗೆರೆ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಈ ಮೂವರು ಅಧಿಕಾರಿಗಳು ಯಾರಿಗೂ ಭಯಪಡದೆ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ಎಂದು ಮಣಿ ಸರ್ಕಾರ್ ಆರೋಪಿಸಿದ್ದಾರೆ.
ಸಾರಿಗೆ ಅಧಿಕಾರಿ,ಸಿ,ಎಸ್.ಪ್ರಮುಂತೇಶ್, ತುಮಕೂರು ನಗರದಲ್ಲಿ ನಿವೇಶನ ಹಾಗೂ ಮನೆ ಜಮೀನುಗಳನ್ನು ಮತ್ತು ಬೆಂಗಳೂರು ನಗರದಲ್ಲಿ ನಿವೇಶನಗಳನ್ನು ಹೊಂದಿರುತ್ತಾರೆ, ಮೋಹಮದ್ ಖಾಲೀದ್ ಇವರು ದಾವಣಗೆರೆ ನಗರದಲ್ಲಿ ಹಾಗೂ ಚಿತ್ರದುರ್ಗ ನಗರದಲ್ಲಿ ಸಂಬಂಧಿಗಳ ಹೆಸರಿನಲ್ಲಿ ನಿವೇಶನ ಮತ್ತು ಮನೆಗಳನ್ನು ಅಕ್ರಮವಾಗಿ ಮಾಡಿರುತ್ತಾರೆ, ಟಿ.ಎಸ್ ಸತೀಶ್ ಮೈಸೂರು ನಗರದಲ್ಲಿ ನಿವೇಶನ ಮತ್ತು ಮನೆಗಳನ್ನು ಮಾಡಿರುತ್ತಾರೆ. ಈ ಮೂರು ಭ್ರಷ್ಟ ಅಧಿಕಾರಿಗಳ ಮೇಲೆ ಬೆಂಗಳೂರು ಲೋಕಾಯುಕ್ತ ಕೊರ್ಟ್‌ನಲ್ಲಿ ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಶ್ರೀರಾಮ ಸೇನೆ, ಜಿಲ್ಲಾಧ್ಯಕ್ಷರಾದ ಮಣಿಸರ್ಕಾರವರು ಪ್ರಕರಣ ದಾಖಾಲು ಮಾಡಿದ್ದಾರೆ.
ಇಂದು ದಾವಣಗೆರೆ ನಗರದ ಸಾರಿಗೆ ಕಛೆರಿ ಮುಂಬಾಗ ಪ್ರತಿಭಟನೆ ನಡೆಸಿದ ಮಣಿ ಸರ್ಕಾರ್, ಈ ಅಧಿಕಾರಿಗಳನ್ನು ಶೀಘ್ರವಾಗಿ ವರ್ಗವಣೆ ಮಾಡಬೇಕೆಂದು ಆಗ್ರಹಿಸಿದರು. ಈ ಮೂರು ಅಧಿಕಾರಿಗಳಿಗೆ ಸಾರಿಗೆ ಸಚಿವರು, ಸಾರಿಗೆ ಆಯುಕ್ತರು, ಮತ್ತು ಜಂಟಿ ಆಯುಕ್ತ ಶಿವಮೊಗ್ಗ, ಇವರ ಬೆಂಬಲವಿದೆ ಎಂದು ತಿಳಿದು ಬಂದಿರುತ್ತದೆ, ಇವರ ಮೇಲೆ ಸಾರಿಗೆ ಇಲಾಖೆ ತನಿಖೆ ಮಾಡಬೇಕೆಂದು ಆಗ್ರಹಿಸಿದರು.
ಸುಮಾರು ವರ್ಷಗಳಿಂದ ಒಂದೇ ಕಛೇರಿಯಲ್ಲಿ ಕಾರ್ಯನಿರ್ವಹಿಸಲು ಇವರಿಗೆ ಅನುಮತಿ ನೀಡಿದ ಅಧಿಕಾರಿಗಳು ಯಾರೆಂದು ತಿಳಿಸಬೇಕು. ರಾಷ್ಟ್ರೀಯ ಹೆದ್ದಾರಿ ಎನ್.ಎಚ್.4 ಹಾಗೂ ಎನ್.ಎಚ್. 13 ರಲ್ಲಿ ಪ್ರತಿದಿನ ವಾಹನ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ, ಹಾಗೂ ದಾವಣಗೆರೆ ನಗರದಲ್ಲಿ ವಾಹನ ಚಾಲನೆ ಪರವಾನಿಗೆ ತೆಗೆದು ಕೊಳ್ಳಬೇಕಾದರೆ ನೇರವಾಗಿ ಹೋದರೆ ದಾಖಾಲಾತಿ ಸರಿಯಲ್ಲಿ ಎಂದು ಹೇಳಿ ಈ ಅಧಿಕಾರಿಗಳು ಮದ್ಯವರ್ತಿಗಳ ಮೂಖಾಂತರ ಹೆಚ್ಚಿನ ಹಣ ಕೊಟ್ಟು, ಎಲ್ಲಾ ಕೆಲಸ ಮಾಡಿಸಿ ಕೊಳ್ಳಬೇಕು. ಇದರ ಬಗ್ಗೆ ಕೇಳಿದರೆ ಈ ಹಣದಲ್ಲಿ ಸಾರಿಗೆ ಸಚಿವರು ಸಾರಿಗೆ ಆಯುಕ್ತರು ಮತ್ತು ಜಂಟಿ ಆಯುಕ್ತರಿಗೆ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು, ಈ ಅಧಿಕಾರಿಗಳು ವಿರುದ್ದ ಸೂಕ್ತವಾಗಿ ಸರ್ಕಾರವು ಕಾನೂನು ಕ್ರಮ ತೆಗೆದು ಕೊಳ್ಳಬೇಕೆಂದು ಇಲ್ಲವಾದರೆ ರಾಜ್ಯದ ಎಲ್ಲಾ ಜಿಲ್ಲೆಯ ಸಾರಿಗೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.