Rudrappa Lamani: ವಿಧಾನ ಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅಪಘಾತದಲ್ಲಿ ಗಾಯ, ಎಸ್ ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ದಾವಣಗೆರೆ: (Rudrappa Lamani) ವಿಧಾನ ಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅಪಘಾತದಲ್ಲಿ ಗಾಯಗೊಂಡ ಘಟನೆ ನಡೆದಿದದ್ದು, ದಾವಣಗೆರೆಯ ಎಸ್ ಎಸ್ ಹೈಟೆಕ್ ಆಸ್ಪತ್ರೆ ಗೆ ಹೆಚ್ಚಿನ ಚಿಕಿತ್ಸೆಗೆ ರುದ್ರಪ್ಪ ಲಮಾಣಿ ಅವರನ್ನು ಕರೆತರಲಾಗಿದೆ.
ಆಸ್ಪತ್ರೆಯ ಎದುರು ಉಪ ಸಭಾಪತಿಯವರ ಬೆಂಬಲಿಗರು ಶಿಗ್ಗಾಂವಿ ಶಾಸಕ ಯಾಸೀರ್ ಖಾನ್ ಪಠಾಣ್, ಹರಿಹರ ಶಾಸಕ ಬಿಪಿ ಹರೀಶ್ ಸೇರಿದಂತೆ ಬಂಜಾರ ಸಮುದಾಯದ ಮುಖಂಡರು, ಅಧಿಕಾರಿಗಳು ಜಮಾವಣೆಗೊಂಡಿದ್ದರು.ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಸೇರಿದಂತೆ ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು
ಉಪ ಸಭಾಪತಿ ರುದ್ರಪ್ಪ ಲಮಾಣಿಯವರು ಹಿರಿಯೂರು ಬಳಿಯ ಜವಗೊಂಡನಹಳ್ಖಿ ಬಳಿ ನಿಂತಿದ್ದಾಗ, ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಗಾಯಗಳಾಗಿತ್ತು, ಅವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಕಿ ಚಿಕಿತ್ಸೆ ಕೊಡಿಸಿ ನಂತರ ದಾವಣಗೆರೆಯ ಎಸ್ ಎಸ್ ಹೈಟೆಕ್ ಆಸ್ಪತ್ರಗೆ ಕರೆತರಲಾಯಿತು, ಆಸ್ಪತ್ರೆ ಸಿಬ್ಬಂದಿಗಳು ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಂಡಿದ್ದರು.
ಎಸ್ ಎಸ್ ಆಸ್ಪತ್ರೆ ಗೆ ಆಗಮಿಸಿದ ರುದ್ರಪ್ಪ ಲಮಾಣಿ ಅವರಿಗೆ ಗದ್ದಕ್ಕೆ ಪೆಟ್ಟಾಗಿ ಸ್ವಲ್ಪ ಪ್ರಮಾಣದಲ್ಲಿ ರಕ್ತಸ್ರಾವ. ಚಿಕಿತ್ಸೆ ಆರಂಭಿಸಿದ ವೈದ್ಯರು. ಬಿಪಿ ನಾರ್ಮಲ್ ಇತ್ತು.
ಉಪಸಭಾಪತಿ ರುದ್ರಪ್ಪ ಲಮಾಣಿ ಆರೋಗ್ಯ ಕುರಿತು ಡಾಕ್ಟರ್ ಪ್ರದೀಪ್ ಮಾಹಿತಿ ನೀಡಿದರು. ಆರೋಗ್ಯ ಸ್ಥಿರವಾಗಿದೆ, ಯಾವುದೇ ರೀತಿಯ ಅಪಾಯ ಇಲ್ಲ, ಸ್ಕ್ಯಾನಿಂಗ್ ಮಾಡಿಧ್ದೆವೆ, ತುಟಿಯ ಕೆಳಭಾಗಕ್ಕೆ ಸ್ವಲ್ಪ ಪೆಟ್ಟಾಗಿದೆ, ಬೆಳಗ್ಗೆ ಮತ್ತೂಮ್ಮೆ ತಪಾಸಣೆ ಮಾಡಲಾಗುವುದು, ನಂತರ ಡಿಸ್ಚಾರ್ಜ್ ಕುರಿತು ಮಾಹಿತಿ ನೀಡಲಾಗುವುದು ಎಂದು ಚಿಕಿತ್ಸೆ ನೀಡಿದ ನರರೋಗ ತಜ್ಞ ಡಾ.ಪ್ರದೀಪ್ ಮಾಹಿತಿ ನೀಡಿದರು
ಶಿಗ್ಗಾಂವಿ ಶಾಸಕರ ಬಳಿ ಸಿಎಂ ಸಿದ್ದರಾಮಯ್ಯ ಹಾಗೂ ಸಭಾಪತಿಗಳು ರುದ್ರಪ್ಪ ಲಮಾಣಿ ಅವರ ಆರೋಗ್ಯದ ಬಗ್ಗೆ ಫೋನಿನಲ್ಲಿ ಮಾಹಿತಿ ಪಡೆದಿದ್ದು, ಕ್ಷೇತ್ರದ ಜನರು ಆತಂಕ ಪಡುವ ಅವಶ್ಯಕತೆ ಇಲ್ಕ ಎಂದರು