Bapuji: ಬಾಪೂಜಿ ಮಹಿಳಾ ಸಿಬ್ಬಂದಿಗಳಿಗಾಗಿ ವಿಶೇಷ ಸ್ಪರ್ಧೆ ‘ಮಿಸ್ ಪಾರ್ವತಿ’

ದಾವಣಗೆರೆ: (Bapuji) ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಇಲ್ಲಿನ ಎಂಬಿಎ ಕಾಲೇಜು ಸಭಾಂಗಣದಲ್ಲಿ ನಡೆದ ‘ಮಿಸ್ ಪಾರ್ವತಿ’, ಬಾಪೂಜಿ ಶಿಕ್ಷಣ ಸಂಸ್ಥೆಗಳ ಎಲ್ಲಾ ಮಹಿಳಾ ಸಿಬ್ಬಂದಿ ವರ್ಗದವರಿಗಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಮೊದಲ ಸುತ್ತಿನಲ್ಲಿ ಆಯ್ಕೆಗೊಂಡ 40 ಮಹಿಳಾ ಸ್ಪರ್ಧಿಗಳು ಫ್ರೀ ಫಿನಾಲೆ ರೌಂಡ್‌ನ ವೇದಿಕೆಯಲ್ಲಿ ಆತ್ಮವಿಶ್ವಾಸದ ನಡಿಗೆಯೊಂದಿಗೆ ಆಕರ್ಷಕವಾದ ರಾಂಪ್ ವಾಕ್ ನಡೆಸಿಕೊಟ್ಟರು.

ಸಂಸದರು ಹಾಗೂ ಬಾಪೂಜಿ ಶಿಕ್ಷಣ ಸಂಸ್ಥೆಯ ಗೌರ್ನಿಂಗ್ ಕೌನ್ಸಿಲ್ ಮೆಂಬರ್ ಹಾಗೂ ಆಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆಯ ಮಹಿಳೆಯರಿಗೆ ವಿವಿಧ ರೀತಿಯ ಹೊಸ ಅವಕಾಶಗಳನ್ನು ನೀಡುವ ನಿಟ್ಟಿನಲ್ಲಿ ಏರ್ಪಡಿಸಲಾಗಿದ್ದ ‘ಮಿಸ್ ಪಾರ್ವತಿ’ ಸ್ಪರ್ಧೆಯಲ್ಲಿ ಬೆಂಗಳೂರಿನ ಉದ್ಯಮಿ ಹಾಗೂ ಮಿಸ್ಸೆಸ್ ಪರ್ಸೋನಾ ಯುನಿವರ್ಸ್ 2022 ಆಗಿ ಆಯ್ಕೆಯಾಗಿರುವ ಹೇಮಾ ನಿರಂಜನ್ ಹಾಗೂ ಚಿತ್ರದುರ್ಗದ ಖ್ಯಾತ ಭರತನಾಟ್ಯ ಗುರು ಡಾ. ನಂದಿನಿ ಶಿವಪ್ರಕಾಶ್ ಅತಿಥಿಗಳಾಗಿ ಹಾಗೂ ನಿರ್ಣಾಯಕರಾಗಿ ಆಗಮಿಸಿದ್ದರು.
ವೇದಿಕೆಯಲ್ಲಿ ಡಾ. ಶಶಿಕಲಾ ಕೃಷ್ಣಮೂರ್ತಿ, ಡಾ. ರೂಪಶ್ರೀ, ಕಮಲಾ ಸೊಪ್ಪಿನ್, ಡಾ.ವಿನುತಾ ಉಪಸ್ಥಿತರಿದ್ದರು.