Annabhagya: ಪಡಿತರ ಅಂಗಡಿಗಳಿಗೆ ಸಾಗಾಣಿಕೆ ಮಾಡುವ ಗುತ್ತಿಗೆದಾರನಿಂದಲೇ ಅಕ್ರಮವಾಗಿ ಅನ್ನಭಾಗ್ಯ ಕಾಳಸಂತೆಯಲ್ಲಿ ಮಾರಾಟ.!

ದಾವಣಗೆರೆ (Annabhagya): ಪಡಿತರ ಅಂಗಡಿಗಳಿಗೆ ಸಾಗಾಣಿಕೆ ಮಾಡುತ್ತಿದ್ದ ಗುತ್ತಿಗೆದಾರನಿಂದಲೇ ಅಕ್ರಮವಾಗಿ ಅಕ್ಕಿ ಸಾಗಟ ನಡೆಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹರಿಹರ ತಾಲೂಕಿನಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ ಚಿಲ್ಲರೆ ಪಡಿತರ ಸಾಗಾಣಿಕೆ ಗುತ್ತಿಗೆದಾರನಾದ ಹೆಚ್ ಎಂ ಶಶಿಧರ್ ಎಂಬುವವರಿಂದ ಅಕ್ರಮವಾಗಿ ಅಧಿಕೃತ ಹೆಸರಿನಲ್ಲಿ ಅನಧಿಕೃತವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದೆ.ಬಡವರಿಗೆ ತಲುಪುತ್ತಿದ್ದ ಅಕ್ಕಿಯಲ್ಲಿ ಭಾರಿ ಅಕ್ರಮ ಬಯಲಾಗಿದ್ದು, ಹರಿಹರ ತಾಲೂಕು ಪಡಿತರ ಸಾಗಾಣಿಕೆಗೆ ಗುತ್ತಿಗೆಯನ್ನು ಶಶಿಧರ್ 2022-2024 ನೇ ಸಾಲಿಗೆ ಶಶಿಧರ್ ಗುತ್ತಿಗೆ ಪಡೆದಿದ್ದು, ಟೆಂಡರ ತಾಂತ್ರಿಕ ಕಾರಣದಿಂದ ಶಶಿಧರ್ ಎಂಬುವವರನ್ನು ಸಧ್ಯದ ಮಟ್ಟಿಗೆ ಮುಂದುವರಿಸಲಾಗಿದೆಯಂತೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಪೊಲೀಸರಿಂದ ಭಾರಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. KA 17 AB 1423 ಸಾರ್ವಜನಿಕ ಪಡಿತರ ಆಹಾರ ಸಾಗಣೆ ವಾಹನದಿಂದಲೇ ಅಕ್ರಮಕ್ಕೆ ಬಳಸುತ್ತಿದ್ದ ಲಾರಿಯಲ್ಲಿ 50 ಕೆ ಜಿ ಮೂಟೆಯ 361 ಮೂಟೆಗಳು ಲಾರಿಯಲ್ಲಿ ಪತ್ತೆಯಾಗಿದ್ದು, ಹರಿಹರದ ವಾಸನ ಗ್ರಾಮದ ನ್ಯಾಯಬೆಲೆ ಅಂಗಡಿಗೆ ರಾತ್ರಿ 8 ಗಂಟೆಯ ವೇಳೆಗೆ ಅಕ್ಕಿ ಸಾಗಾಟ ಮಾಡಲಾಗುತ್ತಿತ್ತು ಎಂದು ಗುತ್ತಿಗೆದಾರ ಹೇಳಿದ್ದು, ನಂಬಲಾಗದ ಸತ್ಯವಾಗಿದೆ ಎಂದು ಸ್ಥಳೀಯರು ಮಾತನಾಡುತ್ತಿರುವುದು ಕಂಡುಬಂದಿದೆ.
ಹರಿಹರ ತಾಲೂಕಿನ ಆಹಾರ ನಿರೀಕ್ಷಕನಿಂದ ದೂರ ನೀಡುವಂತೆ ಪೊಲೀಸರ ಸೂಚನೆ ನಿಡಿದ್ದು, ಪರಿಶೀಲನೆ ನಡೆಸಿಬಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮುಂದಿನವಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಕೇಸ್ ಆಗದಂತೆ ನೋಡಿಕೊಳ್ಳಲು ಗುತ್ತಿಗೆದಾರ ಪ್ರಭಾವಿಗಳಿಂದ ಒತ್ತಡಕ್ಕೆ ಮುಂದಾಗಿರುವುದು ತಿಳಿದುಬಂದಿದೆ, ಆದರೆ ಈ ಘಟನೆಯಲ್ಲಿ ಪಡಿತರ ಸಾಗಾಟದ ಎಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು ಮೇಲ್ನೋಟಕ್ಕೆ ಕಂಡುಬಂದಿದ್ದು ಆಹಾರ ಇಲಾಖೆ ಅಧಿಕಾರಿಗಳು ಗುತ್ತಿಗೆದಾರ ಹಾಗೂ ಲಾರಿಯ ವಿರುದ್ದ ಕೇಸ್ ಮಾಡಲು ಮೀನಾಮೇಷ ಮಾಡುತ್ತಿರುವುದು ಕಂಡುಬರುತ್ತಿದೆ.
KA 17 AB 1423 ಸಾರ್ವಜನಿಕ ಪಡಿತರ ಆಹಾರ ಸಾಗಣೆ ವಾಹನದಿಂದಲೇ ಅಕ್ರಮಕ್ಕೆ ಬಳಸುತ್ತಿದ್ದ ಲಾರ