Justice: ದಾವಣಗೆರೆ ಮಹಿಳಾ ನಿಲಯಕ್ಕೆ ಉಪಲೋಕಾಯುಕ್ತರ ಭೇಟಿ, ಆಹಾರ ಪದಾರ್ಥ ‘ಪೋನ್ ಪೇ’ ನಲ್ಲಿ ಲಕ್ಷಾಂತರ ವಹಿವಾಟು

ದಾವಣಗೆರೆ: (Justice B Veerappa) ಉಪ ಲೋಕಾಯುಕ್ತರಾದ ಬಿ.ವೀರಪ್ಪನವರು ಶ್ರೀರಾಮನಗರದಲ್ಲಿನ ರಾಜ್ಯ ಮಹಿಳಾ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿಲಯದಲ್ಲಿ 54 ಮಹಿಳೆಯರಿದ್ದಾರೆ. ಇಲ್ಲಿನ ಸೌಲಭ್ಯಗಳ ಜೊತೆಗೆ ಪ್ರೀತಿಯನ್ನು ತೋರಿಸುವುದು ಮುಖ್ಯವಾಗಿರುತ್ತದೆ. ವೈದ್ಯರು ಕೆಲವು ದಿನ ಹಾಜರಿರುವುದಿಲ್ಲ. ನೊಟೀಸ್ ನೀಡಲು ಉಪಲೋಕಾಯುಕ್ತರು ತಿಳಿಸಿದರು, ಗುಣಮಟ್ಟದ ಆಹಾರ ನೀಡಲು ತಾಕೀತು ಮಾಡಿದರು. ಇಲ್ಲಿನ ಕೆಲವು ಮಹಿಳೆಯರು ತಮ್ಮ ಮನೆಗೆ ವಾಪಸ್ ಹೋಗಲು ಮನವಿ ಮಾಡಿದಾಗ ಅವರ ಸಂಬಂಧಿಕರೊಂದಿಗೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಲು ತಿಳಿಸಿದರು. ಇಲ್ಲಿನ ಇಬ್ಬರು ಮಹಿಳೆಯರಿಗೆ ನೂತನ ವರನನ್ನು ನೋಡಿದ್ದು ಆದಷ್ಟು ಬೇಗ ನಿಯಮಾನುಸಾರ ಎಲ್ಲರೂ ನಿಂತು ಮದುವೆ ಮಾಡಿಸಲು ತಿಳಿಸಿದರು.
ಮಹಿಳಾ ನಿಲಯದಲ್ಲಿನ ಆಹಾರ ದಾಸ್ತಾನು ಕೊಠಡಿ ವೀಕ್ಷಣೆ ಮಾಡಿ, ಮಹಿಳಾ ನಿಲಯದಲ್ಲಿ ಮೂಲಭೂತ ಸೌಕರ್ಯ ಕೊರತೆ ಇದ್ದು ಲೋಕಾಯುಕ್ತ ಪ್ರಕರಣ ದಾಖಲಿಸುವುದಾಗಿ ತಿಳಿಸಿ, ಇನ್ನು ಸಾಕಷ್ಟು ಸುಧಾರಣೆ ಆಗಬೇಕಾಗಿದೆ ಎಂದರು.
ಸರ್ಕಾರಿ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ಮಾಡಿದ ಉಪಲೋಕಾಯುಕ್ತರಿಗೆ ಮಕ್ಕಳು ವಿಶೇಷವಾಗಿ ತಯಾರಿಸಿದ ಪುಷ್ಪಗುಚ್ಚ ನೀಡಿ ಸ್ವಾಗತಿಸಿದರು. ಶಾಲೆಗೆ ತೆರಳಲು ಮಹಿಳಾ ನಿಲಯದಿಂದ ಶಾಲೆಗೆ ಹೋಗಲು ವಾಹನ ವ್ಯವಸ್ಥೆ ಮಾಡಲು ಸೂಚನೆ ನೀಡಿದರು.
ಬಾಲಕಿಯರ ಬಾಲ ಮಂದಿರದ ಅಡುಗೆ ಕೋಣೆ ವೀಕ್ಷಿಸುವ ಸಂದರ್ಭದಲ್ಲಿ ಆಹಾರ ಇಲಾಖೆಯಿಂದ ಸರಬರಾಜು ಆದಂತಹ ಗೋಧಿಯಲ್ಲಿ ಹುಳು ಇದೆ, ನಿಲಯ ಪಾಲಕರು ಇದನ್ನು ನೋಡಿಕೊಂಡು. ಸರಬರಾಜು ಮಾಡಿದಾಗ ತಿರಸ್ಕರಿಸಬೇಕೆಂದು ತಾಕೀತು ಮಾಡಿದರು. ಬಾಲಮಂದಿರದ ನಿಲಯದಲ್ಲಿ 53 ಮಕ್ಕಳಿದ್ದು ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿದರು.
ಪೋನ್ ಫೇ ನಲ್ಲಿ ಲಕ್ಷಾಂತರ ವಹಿವಾಟು: ಬಾಲ ಮಂದಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಓರ್ವ ಮಹಿಳಾ ಪಾಲಕಿಯ ಮೊಬೈಲ್ ಪರಿಶೀಲನೆ ನಡೆಸಿದ ಉಪ ಲೋಕಾಯುಕ್ತರು ಕೆಲಕಾಲ ಧಂಗಾದರು, ಅವರ ಮೊಬೈಲ್ ನಲ್ಲಿ 5, 10, 15, ಸಾವಿರ ರೂಪಾಯಿ ಹಣ ಪೋನ್ ಪೇ ಮುಖಾಂತರ ಚಲಾವಣೆ ಆಗಿದ್ದು ಒಟ್ಟು ಲಕ್ಷಾಂತರ ಹಣ ವಹಿವಾಟು ಬಗ್ಗೆ ಉಪ ಲೋಕಾಯುಕ್ತರ ತಂಡದ ಗಮನಕ್ಕೆ ಬಂದಿತ್ತು.
ಹಣದ ಬಗ್ಗೆ ವಿಚಾರಿಸಿದಾಗ, ಹಣದ ವಹಿವಾಟು ನನ್ನ ಪತಿಯದ್ದು, ಅವರದ್ದು ಸಿಇಸಿ ಸೆಂಟರ್ ಇದೆ ಎಂದು ಉಪ ಲೋಕಾಯುಕ್ತರಿಗೆ ಸಮಜಾಯಿಸಿ ನೀಡಿದರು, ಇದಕ್ಕೆ ಆಕ್ಷೆಪಣೆ ವ್ಯಕ್ತಪಡಿಸಿ, ಇಲ್ಲಿಗೆ ಇದು ನಿಲ್ಲಿಸಿ ಇಲ್ಲವೆಂದರೆ ನಿಮ್ಮ ಮೇಲೆ ಕ್ರಮ ಜರುಗಿಸಿ ಮನೆಗೆ ಕಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.