ಕೋವಿಡ್ ನಿಯಮಾವಳಿ ಲೆಕ್ಕಿಸದೇ ಹೋಮ ಹವನ ಮಾಡಿದ ಸಚಿವರು ಹಾಗೂ ಶಾಸಕರು.!

kovid

ದಾವಣಗೆರೆ: ಕೋವಿಡ್ ನಿಯಂತ್ರಣ ಸಲುವಾಗಿ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ವಿದ್ದರೂ ಸಹ ಜನಪ್ರತಿನಿಧಿಗಳು ನಿಷೇದನ ನಡುವೆಯೂ ಜನಪ್ರತಿನಿಧಿಗಳಿಂದ ಪೂಜೆ ಹೋಮ ನಡೆಸಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ನೂತನ ಸಚಿವ ಕೆ ಎಸ್ ಈಶ್ವರಪ್ಪ ಹಾಗೂ ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರಗೆರೆ ಮಠದಲ್ಲಿ ನಾಗರ ಅಮಾವಾಸ್ಯೆ ಪ್ರಯುಕ್ತ ಹೋಮ ನಡೆಸಿದ್ದು, ವಿಶೇಷ ಪೂಜೆಯನ್ನ ಸಲ್ಲಿಸಿದ್ದಾರೆ. ಇಂದುಸಚಿವರಾದ ಬಳಿಕ ಚನ್ನಗಿರಿ ತಾಲೂಕಿನ ತಾವರಗೆರೆ ಮಠಕ್ಕೆ ಭೇಟಿ ನೀಡಿದ್ದ ಸಚಿವ ಕೆ ಎಸ್ ಈಶ್ವರಪ್ಪ ಹಾಗೂ ಶಾಸಕ ಮಾಡಾಳು ವಿರುಪಾಕ್ಷಪ್ಪ ಮಠದಲ್ಲಿ ಹೋಮ ನಡೆಸಿದ್ದಾರೆ.
ಆದರೆ, ಕೋರೊನಾ ಮೂರನೇ ಅಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದಾವಣಗೆರೆ ಜಿಲ್ಲೆಯ ಮಠ ಮಾನ್ಯಗಳು ಹಾಗೂ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶ ಹಾಗೂ ಪೂಜೆ, ಹೋಮಗಳಿಗೆj ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಆದರೆ, ಸಚಿವರು ಜಿಲ್ಲಾಡಳಿತದ ನಿಷೇಧಾಜ್ಞೆಯ ನಡುವೆ ತಾವರಗೆರೆ ಮಠದಲ್ಲಿ ಹೋಮ ಹಾಗೂ ಪೂಜೆಯನ್ನ ಮಾಡಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!