ದಾವಣಗೆರೆ ಜಿಲ್ಲೆಯ ಐದು ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ – ಜಿಎಂ ಸಿದ್ದೇಶ್ವರ

ದಾವಣಗೆರೆ: ರಾಜ್ಯ ಸಚಿವ ಸಂಪುಟದಲ್ಲಿ ಇನ್ನುಳಿದ 4ಸ್ಥಾನಗಳಲ್ಲಿ ಜಿಲ್ಲೆಯ ಶಾಸಕರ ಪೈಕಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂದು ವರಿಷ್ಠರನ್ನು ಒತ್ತಾಯಿಸುತ್ತೇನೆ ಎಂದು ಸಂಸದ ಡಾ.ಜಿ.ಎಂ ಸಿದ್ದೇಶ್ವರ ಭರವಸೆ ನೀಡಿದರು,
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಿಎಂ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟದ ಖಾತೆಯನ್ನು ಪಕ್ಷದ ವರಿಷ್ಠರು ಹಂಚಿಕೆ ಮಾಡಿದ್ದಾರೆ.ಕಾಂಗ್ರೆಸ್, ಜೆಡಿ ಎಸ್ ನಿಂದ ಪಕ್ಷಕ್ಕೆ ಬಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಕರಿಸಿದ 17 ಜನರು ಜನರಿಗೂ ಪ್ರತಿನಿಧಿ ಕೊಡಬೇಕಾಗಿತ್ತು. ಈ ನಿಟ್ಟಿನಲ್ಲಿ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ, ನನ್ನಕೈಲಿ ಜಿಲ್ಲೆಯ ಸಚಿವ ಸ್ಥಾನ ಕೊಡಿಸಲಾಗಿಲ್ಲ,
ನನ್ನ ಮನವಿ ಮೇರೆಗೆ ಕೇಂದ್ರ ಸರ್ಕಾರ ಟ್ಯಾಕ್ಟರ್ ಗಳಿಗೆ ಎಂ ಆರ್ ಪಿ ನಿಗದಿ ಮಾಡಿದೆ. ಇನ್ನು ಮುಂದೆ ಎಂ ಆರ್ ಪಿ ಇಲ್ಲದ ಟ್ರ್ಯಾಕ್ಟರ್ ಮಾರಾಟ ಮಾಡುವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು. ರೈತರು ಎಂ ಆರ್ ಪಿ ಗಿಂತ ಹೆಚ್ಚು ದರ ನೀಡಬಾರದು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಒಲಂಪಿಕ್ ನಲ್ಲಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾ ಹಾಗೂ ಇತರ 7 ಪದಕಗಳನ್ನು ತಂದುಕೊಟ್ಟ ಸಾಧಕರನ್ನು ಅಭಿ ಅಭಿನಂದಿಸುವುದಾಗಿ ತಿಳಿಸಿದರು