Congress: ಚೋರ್ ಗುರು ಸಿದ್ದೇಶ್ವರ್, ಚಾಂಡಾಳ್ ಶಿಷ್ಯ ಯಶವಂತರಾವ್ : ದಿನೇಶ್ ಕೆ.ಶೆಟ್ಟಿ ಆರೋಪ

ದಾವಣಗೆರೆ: (Congress) ದಾವಣಗೆರೆ ಜಿಲ್ಲೆಯಲ್ಲಿ ಚೋರ್ ಗುರು-ಚಾಂಡಾಳ್ ಶಿಷ್ಯರಿಂದ ಸಾಕಷ್ಟು ನಷ್ಟ ಉಂಟಾಗಿದ್ದು, ಬಿಜೆಪಿ ಪಕ್ಷಕ್ಕೆ ಸಾರ್ವಜನಿಕರ ಬಗ್ಗೆ ಕಳಕಳಿ ಇದ್ದಲ್ಲಿ ಚೋರ್ ಗುರು
ಜಿ.ಎಂ.ಸಿದ್ದೇಶ್ವರ್, ಚಾಂಡಾಳ್ ಶಿಷ್ಯ ಯಶವಂತರಾವ್ ಅವರನ್ನು ಮೊದಲು ಪಕ್ಷದಿಂದ ಉಚ್ಚಾಟಿಸಲಿ ಎಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ
ಆಗ್ರಹಿಸಿದ್ದಾರೆ.
ಯಾವುದಾದರೂ ಒಂದು ಪಕ್ಷದಿಂದ ಹಲವು ಚುನಾವಣೆಗಳನ್ನು ಎದುರಿಸಿ ಸೋತ ಖ್ಯಾತಿ ಹೊಂದಿರುವ ಯಶವಂತರಾವ್ ಅವರು ತಾವು ಈ ಹಿಂದೆ ಏನು ಕೆಲಸ ಮಾಡುತ್ತಿದ್ದರು.ಅವರಿಗೆ ಚುನಾವಣೆಯಲ್ಲಿ ಸೋತರು ಹೇಗೆ ಆಸ್ತಿ ಮಾಡಿದ್ದಾರೆ ಎಂಬುದನ್ನು
ತಮ್ಮ ಪಕ್ಷ ಮತ್ತು ಸಾರ್ವಜನಿಕರಿಗೆ ಮೊದಲು ತಿಳಿಸಿ ನಂತರ ಇನ್ನೊಬ್ಬರ ಬಗ್ಗೆ ಮಾತನಾಡಲಿ ಎಂದಿದ್ದಾರೆ.
ದಾವಣಗೆರೆ ನಗರಸಭೆ ಮತ್ತು ದುಡಾ ಅಧ್ಯಕ್ಷರಾಗಿದ್ದ ಯಶವಂತರಾವ್ ಅವರು ಅಕ್ರಮವಾಗಿ ಡೋರ್ ನಂಬರ್ ನೀಡುವ ಮೂಲಕ ಸರ್ಕಾರಕ್ಕೆ ಮತ್ತು ಸಾರ್ವಜನಿಕರನ್ನು ವಂಚಿಸಿದ ಕೀರ್ತಿ ಪಾತ್ರರಾಗಿದ್ದಾರೆ ಎಂದು ವ್ಯಂಗ್ಯವಾಡಿರುವ ಅವರು ದಾವಣಗೆರೆಯ ಹಲವು ಮೂಲೆ ನಿವೇಶನಗಳನ್ನು ತಮ್ಮ ಮತ್ತು ತಮ್ಮ ಕುಟುಂಬದವರ ಹೆಸರಿಗೆ ಬರೆದುಕೊಂಡಿದ್ದಾರೆ ಎಂದು ದೂರಿದ್ದಾರೆ.
ಚಾಂಡಾಳ್ ಶಿಷ್ಯ ಯಶವಂತರಾವ್ ಅವರ ಕತೆ ಒಂದೆಡೆಯಾದರೆ ಅವರ ಚೋರ್ ಗುರು ಜಿ.ಎಂ.ಸಿದ್ದೇಶ್ವರ್ 20 ವರ್ಷ ಸಂಸದರಾಗಿ ಮಾಡಿದ ಕೆಲಸವೆನೆಂದರೆ ದಾವಣಗೆರೆಯ ಡಿಸಿಎಂ ಬಳಿಯ ಬ್ರಿಡ್ಜ್, ಅಶೋಕ ಟಾಕೀಸ್ ಬಳಿಯ ಬ್ರಿಡ್ಜ್ ಮತ್ತು ಶಿರಮಗೊಂಡನಹಳ್ಳಿ
ಬಳಿಯ ಬ್ರಿಡ್ಜ್‌ಗಳನ್ನು ಜಿಲೇಬಿ ರೀತಿ ಮಾಡಿರುವುದು.
ದಾವಣಗೆರೆ ಜಿಲ್ಲಾಡಳಿತ ಭವನ ನಿರ್ಮಾಣ ಸರ್ಕಾರದ ಮುಂದುವರೆದ ಕೆಲಸವೇ ಹೊರತು ಅದರಲ್ಲಿ ಚೋರ್ ಗುರು-ಚಾಂಡಾಳ್ ಶಿಷ್ಯನ ಪಾತ್ರವೇನು ಎಂಬುದು ತಿಳಿಯುತ್ತಿಲ್ಲ.
ದಾವಣಗೆರೆ ವಿಶ್ವವಿದ್ಯಾಲಯ ಆಗಲು ಜಾಗ ನೀಡಿದ್ದು ಯಾರು ಎಂಬುದು ಯಶವಂತ್‌ರಾವ್ ಅವರಿಗೆ ತಿಳಿದಿಲ್ಲವೇ? ಇನ್ನು ಹಲವು ಯೋಜನೆಗಳ ಬಗ್ಗೆ ಮಾತನಾಡಿರುವ ಯಶವಂತರಾವ್
ತಮ್ಮ ಚೋರ್ ಗುರು ಸಿದ್ದೇಶ್ವರ್ ಅವರು ಎಷ್ಟು ದುಡ್ಡು ಮಾಡಿದ್ದಾರೆ ಎಂಬುದನ್ನು ಸಹ ಪತ್ರಿಕಾಗೋಷ್ಠಿಯಲ್ಲಿ ತಿಳಿಸಬೇಕಿತ್ತಲ್ಲವೇ ಎಂದು ಆಗ್ರಹಿಸಿದ್ದಾರೆ.
ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಹಿಂದಿನ ಅವಧಿಯಲ್ಲಿ ಸಚಿವರಾಗಿದ್ದ ವೇಳೆ ಸ್ಮಾರ್ಟ್‌ಸಿಟಿ ಯೋಜನೆಯ ಡಿಪಿಆರ್ ಮಾಡಿದ್ದನ್ನು ಬದಲಾವಣೆ ಮಾಡಿ ಅವೈಜ್ಞಾನಿಕವಾಗಿ ಹಳೇ ಬಸ್ ನಿಲ್ದಾಣವನ್ನು ನಿರ್ಮಿಸಿದ ಸಿದ್ದೇಶ್ವರ್ ಮತ್ತು ಭೈರತಿ
ಬಸವರಾಜ್ ಅವರು ಕಾಮಗಾರಿಗಳ ಬಗ್ಗೆ ಗಮನಹರಿಸದೇ ಕೇವಲ ಸೂಟ್‌ಕೇಸ್ ಬಗ್ಗೆ ಮಾತ್ರ ಗಮನ ಹರಿಸಿದರು ಎಂದು ಆರೋಪಿಸಿದ್ದಾರೆ.
ದಾವಣಗೆರೆ ಅಭಿವೃದ್ಧಿಗೆ ಡಾ|| ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅವರ ಕೊಡುಗೆ ಅಪಾರ. ಇದು ಗೊತ್ತಿಲ್ಲದಿದ್ದರೆ ಯಶವಂತರಾವ್ ಚೋರ್ ಗುರುವಿನ ಸಹವಾಸದಿಂದ ಹೊರಬಂದು ನೋಡಲಿ ಎಂದು ಮೂದಲಿಸಿರುವ
ದಿನೇಶ್ ಕೆ.ಶೆಟ್ಟಿ ಅವರು ಸಂಸದರಾಗಿ 1 ವರ್ಷದಲ್ಲಿ ಈ ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಭದ್ರಾ ಜಲಾಶಯ ಅಭಿವೃದ್ಧಿ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದಾರೆ. ನಿಮ್ಮ ಚೋರ್ ಗುರು 20 ವರ್ಷದಲ್ಲಿ ಎಷ್ಟು ಸಾರಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ ಎಂದು ಯಶವಂತರಾವ್ ಅವರನ್ನು ಪ್ರಶ್ನಿಸಿದ್ದಾರೆ.