ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಟ ಯಾರಿಂದಲೂ ತಡೆಯೋಕೆ ಸಾಧ್ಯವಿಲ್ಲ ಅಂತಾರೇ ದುರುಳರು.!

IMG-20210808-WA0082

ದಾವಣಗೆರೆ: ಪೊಲೀಸರು ಅದೆಷ್ಟೇ ಅಲರ್ಟ್ ಇದ್ದರೂ ಅಕ್ರಮ ಮರಳು‌ ಗಣಿಗಾರಿಕೆಗೆ ಕಡಿವಾಣ ಹಾಕಲು‌ ಸಾಧ್ಯವಾಗುತ್ತಿಲ್ಲ ಅನ್ನಿಸುತ್ತದೆ. ಅಕ್ರಮ ಮರಳು ಗಣಿಗಾರಿಕೆ ಮಾಡಿದ ಸಾಕಷ್ಟು ಪ್ರಕರಣ ವಾರದಲ್ಲಿ ಒಂದು ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿರುವುದು ಇದಕ್ಕೆ ಸಾಕ್ಷಿ ಎಂಬಂತಾಗಿದೆ.

ಈಗ ಇಂತಹದ್ದೇ ಪ್ರಕರಣ ಹೊನ್ನಾಳಿ ತಾಲ್ಲೂಕಿನ ಮರಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನ ಜಪ್ತುಪಡಿಸಿಕೊಂಡು, ಆರೋಪಿಗಳನ್ನು ಹೊನ್ನಾಳಿ ವೃತ್ತ ನಿರೀಕ್ಷಕ ಟಿ.ವಿ. ದೇವರಾಜ ಮತ್ತವರ ತಂಡ ಬಂಧಿಸಿದೆ.

ಸಿಪಿಐ ಟಿ.ವಿ ದೇವರಾಜ ಅವರು ರಾತ್ರಿ ವಿಶೇಷ ಗಸ್ತು ಮಾಡುತ್ತಿರುವ ಸಂದರ್ಭದಲ್ಲಿ ಮಧ್ಯರಾತ್ರಿ 1-30 ಗಂಟೆ ಸಮಯದಲ್ಲಿ ಮರಿಗೊಂಡನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಚೀಲೂರು ಮಾರ್ಗವಾಗಿ ಹೋಗುತ್ತಿರುವ ವಾಹನಗಳ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ದಾಳಿ ನಡೆಸಿದ ಪೊಲೀಸರ ತಂಡ ವಾಹನ ಹಾಗೂ ವಾಹನ ಚಾಲಕರನ್ನು ವಶಕ್ಕೆ ಪಡೆದುಕೊಂಡಿದೆ.

ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣದ ಕಾರ್ಯಚರಣೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಿಬ್ಬಂದಿಯವರಾದ ಉಮೇಶ್, ಕರಿಬಸಪ್ಪ, ತಿಮ್ಮರಾಜು, ಜೀಫ್ ಚಾಲಕರಾದ ರಮೇಶ ಅವರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!