IT PARK: ಸಂಸದರಿಂದ ಸರ್ಕಾರದ ಐಟಿ ಅಧಿಕಾರಿಗಳ ಜೊತೆ ಸಭೆ, ತಾತ್ಕಾಲಿಕವಾಗಿ ಸ್ಮಾರ್ಟ್ ಸಿಟಿ ಕಛೇರಿ ಬಳಸಲು ಸಚಿವರ ಸೂಚನೆ

IT PARK_ MPs meet with government IT officials, minister instructs to temporarily use smart city office

ದಾವಣಗೆರೆ (IT PARK); ಬೆಂಗಳೂರಿನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ನ ಸಿಇಓ ಸಂಜೀವ್ ಗುಪ್ತ ಮತ್ತು ಅಧ್ಯಕ್ಷರಾದ ಬಿ ವಿ ನಾಯ್ಡು ಹಾಗೂ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (ಎಸ್ ಟಿಪಿಐ) ದ ನಿರ್ದೇಶಕರಾದ ಡಾ. ಸಂಜಯ್ ತ್ಯಾಗಿ ರವರನ್ನು ಪ್ರತ್ಯೇಕವಾಗಿ ಅವರ ಕಚೇರಿಗಳಲ್ಲಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಭೇಟಿ ಮಾಡಿದರು.

ದಾವಣಗೆರೆಯಲ್ಲಿ ಐಟಿ ವಲಯಕ್ಕೆ ಉತ್ತೇಜನ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಮನ್ವಯ ಕುರಿತು ದಾವಣಗೆರೆ ಸಂಸದರಾದ ಡಾ ಪ್ರಭಾ ಮಲ್ಲಿಕಾರ್ಜುನ ರವರು ದಾವಣಗೆರೆ ಜಿಲ್ಲಾಧಿಕಾರಿಗಳಾದ ಜಿ.ಎಂ ಗಂಗಾಧರಸ್ವಾಮಿ ಮತ್ತು ದಾವಣಗೆರೆ ಐಟಿ ವಿಷನ್ ಗ್ರೂಪ್ ಸದಸ್ಯರೊಂದಿಗೆ ಸೇರಿ ಮಹತ್ವದ ಸಮನ್ವಯ ಸಭೆ ನೆಡೆಸಿದರು.


ಕ್ಯೂ-ಸ್ಪೈಡೆರ್ಸ್ ಹಾಗೂ ಟೆಸ್ಟ್ ಯಂತ್ರ ಸಾಫ್ಟ್‌ವೇರ್ ಸಲ್ಯೂಷನ್ಸ್ ನ ಸಿಇಓ ಗೀರೀಶ್ ರಾಮಣ್ಣ ನವರು ಮಧ್ಯ ಕರ್ನಾಟಕ ದಾವಣಗೆರೆ ಯಲ್ಲಿ ತಮ್ಮದೇ ಸಾಫ್ಟ್‌ವೇರ್ ಕಂಪನಿ ಯ ಕಾರ್ಯಾಚಟುವಟಿಕೆ ಗಳನ್ನು ಪ್ರಾರಂಭಿಸಲು ಇಂಗಿತ ವ್ಯಕ್ತಪಡಿಸಿ, ಸರ್ಕಾರದಿಂದ ಐಟಿ ಕ್ಷೇತ್ರದಲ್ಲಿ ಸೂಕ್ತ ಮೂಲಭೂತ ಸೌಲಭ್ಯ ಹಾಗೂ ಪೂರಕ ವಾತಾವರಣ ಒದಗಿಸಿಕೊಡಲು ಕೊಡಲು ಕೋರಿದರು.

ಸಂಸದೆ ಡಾ ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಐಟಿ ಉದ್ಯೋಗಾವಕಾಶ ಬಯಸಿ ವರ್ಷಕ್ಕೆ ಸುಮಾರು 5000-10000 ವಿದ್ಯಾರ್ಥಿಗಳು ದಾವಣಗೆರೆ ಜಿಲ್ಲೆಯಿಂದ ಬೆಂಗಳೂರಿಗೆ ಬರುತ್ತಿರುವುದರ ಬಗ್ಗೆ ವಿವರಿಸಿದರು.

 

ಎಸ್ ಟಿ ಪಿ ಐ – ಐಟಿ ಪಾರ್ಕ್ ಗೆ ಆದ್ಯತೆಮೇರೆಗೆ ಸೂಕ್ತ ಸ್ಥಳವನ್ನು ಶೀಘ್ರ ಒದಗಿಸಿ ಹಾಗೂ ತಾತ್ಕಾಲಿಕ ಸ್ಥಾಪನೆಗೆ ಲಭ್ಯವಿರುವ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ನೀಡಲಾಗುವುದು ಎಂದು ತಿಳಿಸಿದ್ದಾರೆ
– ಎಸ್ ಎಸ್ ಮಲ್ಲಿಕಾರ್ಜುನ್.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು.

ಇತ್ತೀಚಿನ ಸುದ್ದಿಗಳು

error: Content is protected !!