Library: ಗ್ರಂಥಾಲಯದ ಉಚಿತ ಪಾಶ್ಚಿಮಾತ್ಯ ಶೌಚಾಲಯವನ್ನು ಸಾರ್ವಜನಿಕರು ದುರ್ಬಳಕೆ ಮಾಡಿಕೊಳ್ಳಬಾರದು. ಡಾ ಎಚ್ ಕೆ ಎಸ್ ಸ್ವಾಮಿ 

IMG_20250707_141730

filter: 0; fileterIntensity: 0.0; filterMask: 0; module: j; hw-remosaic: 0; touch: (-1.0, -1.0); modeInfo: ; sceneMode: Hdr; cct_value: 0; AI_Scene: (-1, -1); aec_lux: 143.92018; hist255: 0.0; hist252~255: 0.0; hist0~15: 0.0;

ಚಿತ್ರದುರ್ಗ: (Library) ಚಿತ್ರದುರ್ಗ ನಗರದ ಕೇಂದ್ರ ಭಾಗದಲ್ಲಿರುವ ಕೃಷ್ಣರಾಜೇಂದ್ರ ನಗರ ಕೇಂದ್ರ ಗ್ರಂಥಾಲಯದಲ್ಲಿ ವಿಕಲಚೇತನರಿಗೆ ನಿರ್ಮಿಸಿರುವ ಎರಡು ಶೌಚಾಲಯಗಳನ್ನ ಗ್ರಂಥಾಲಯ ದೊಡ್ಡ ಮನಸ್ಸಿನಿಂದ, ಧಾರಾಳವಾಗಿ, ಎಲ್ಲಾ  ಓದುಗರಿಗೆ  ಬಳಕೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಬೀಗ ಹಾಕಿ ನಿಯಂತ್ರಣ ಮಾಡುವ ಬದಲು, ದಾರಳವಾಗಿ ಓದುಗರಿಗೆ ಬಳಕೆಯಾಗಲಿ ಎಂದು ತೆರೆದಿಡಲಾಗಿದೆ,  ಆದರೆ ಈ ಶೌಚಾಲಯಗಳನ್ನ ಸಾರ್ವಜನಿಕರು, ದಾರಿಹೋಕರು, ಪ್ರಯಾಣಿಕರು, ಪ್ರವಾಸಿಗರು ಸಹ ಸಂಜೆ ಹೊತ್ತು, ಅನಧಿಕೃತವಾಗಿ ಗ್ರಂಥಾಲಯದ ಒಳಗೆ ಬಂದು, ಅವುಗಳನ್ನ ಉಪಯೋಗಿಸುವುದರ ಜೊತೆಗೆ, ಗಲೀಜು ಮಾಡಿ,  ಫ್ಲೆಸ್ ಮಾಡುವ ತಂತ್ರಜ್ಞಾನವನ್ನ ಕೆಡಿಸಿ ಹೋಗುತ್ತಿದ್ದಾರೆ, ಉಚಿತವಾಗಿ ನೀಡಿದ ವಸ್ತುಗಳನ್ನ ಸರಿಯಾಗಿ  ಉಪಯೋಗಿಸಿಕೊಂಡು, ಅವುಗಳನ್ನು ಶಿಸ್ತುಬದ್ಧವಾಗಿ, ಸುಸ್ಥಿತಿಯಲ್ಲಿ, ಸ್ವಚ್ಛವಾಗಿ ಇಟ್ಟುಕೊಳ್ಳಲು ಬಳಕೆದಾರರು ಕಲಿಯಬೇಕು. ಉಚಿತವಾಗಿ ನೀಡಿರುವ ಶೌಚಾಲಯಗಳನ್ನ  ದುರ್ಬಳಕೆ  ಮಾಡಿಕೊಳ್ಳಬಾರದು. ಜನರು ಪಾಶ್ಚಿಮಾತ್ಯ  ಶೌಚಾಲಯಗಳನ್ನು ಸರಿಯಾಗಿ ಬಳಕೆ ಮಾಡದೆ,  ಅವುಗಳಿಗೆ ಮುಚ್ಚುವ ಮುಚ್ಚಳಿಕೆ ಮತ್ತು ಫ್ಲೆಶ್ ಮಾಡಲು ಅಳವಡಿಸಿರುವ ತಂತ್ರಜ್ಞಾನವನ್ನ ಮುರಿದು ಹಾಕುವುದು, ಅದರ ಬಟನ್ಗಳನ್ನ ಅತಿ ಹೆಚ್ಚು ಒತ್ತಡ ಹಾಕಿ, ಮುರಿದು ಹಾಕುವುದು ಮಾಡುತ್ತಿರುವುದರಿಂದ, ಅವುಗಳನ್ನ ರಿಪೇರಿ ಮಾಡಿಸುವುದರಲ್ಲೆ ಗ್ರಂಥಾಲಯದ ಹಣ ಮತ್ತು ಸಮಯವೆಲ್ಲ ವ್ಯರ್ಥವಾಗುತ್ತಿದೆ. ಪಾಶ್ಚಿಮಾತ್ಯ ಶೌಚಾಲಯಗಳನ್ನು  ಸರಿಯಾಗಿ ಬಳಕೆ ಮಾಡುವುದನ್ನ ಅರ್ಥ ಮಾಡಿಕೊಂಡರೆ ಮಾತ್ರ ಶೌಚಾಲಯಗಳು ಬಹಳ ದಿನ ಬಾಳಿಕೆ ಬರುತ್ತದೆ ಇಲ್ಲದಿದ್ದರೆ ಕೆಟ್ಟು ಮೂಲೆಗುಂಪಾಗುತ್ತವೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ ಎಚ್ ಕೆ ಎಸ್ ಸ್ವಾಮಿ ಅವರು ಸಾರ್ವಜನಿಕರನ್ನು ವಿನಂತಿಸಿಕೊಂಡಿದ್ದಾರೆ.
ಯಾವುದೇ ಕಚೇರಿಯಲ್ಲಿರುವ ಶೌಚಾಲಯಗಳನ್ನ ಸಾರ್ವಜನಿಕರು, ದಾರಿಹೋಕರು, ಪ್ರವಾಸಿಗರು, ಪ್ರಯಾಣಿಕರು ಬಳಕೆ ಮಾಡುವಂತಿಲ್ಲ, ಮಾಡಿದರು ಸಹ ವಿನಯದಿಂದ, ವಿನಂತಿಯಿಂದ, ಅನುಮತಿ ಪಡೆದು ಬಳಕೆ ಮಾಡಿಕೊಳ್ಳಬಹುದು. ಅವುಗಳನ್ನ ಬಳಕೆ ಮಾಡುವಾಗ ಅವುಗಳ ಸ್ವಚ್ಛತೆ ಬಗ್ಗೆ, ಅವುಗಳ ತಾಂತ್ರಿಕ ಜೋಡಣೆ ಬಗ್ಗೆ ಅರಿವಿಟ್ಟುಕೊಂಡು ಬಳಕೆ ಮಾಡಿಕೊಳ್ಳಬೇಕು. ಪಾಶ್ಚಿಮಾತ್ಯ ಶೌಚಾಲಯಗಳನ್ನು ಭಾರತೀಯ ಜನರಿಗೆ ಇನ್ನೂ ಸರಿಯಾಗಿ ಬಳಕೆ ಮಾಡಲು ಬರುತ್ತಿಲ್ಲ, ಅವುಗಳನ್ನು ಯಾವ ರೀತಿ, ಎಷ್ಟರಮಟ್ಟಿಗೆ ನೀರನ್ನ ಬಿಟ್ಟುಕೊಳ್ಳಬೇಕು, ಬಳಕೆ ಆದಮೇಲೆ ಎಷ್ಟರಮಟ್ಟಿಗೆ ಅವುಗಳಲ್ಲಿರುವ ಪ್ಲಶ್ ಮಾಡುವ ಬಟನ್ಗಳನ್ನ  ಅದುಮಬೇಕು, ಎಷ್ಟರಮಟ್ಟಿಗೆ ಒತ್ತಡ ಹಾಕಬೇಕು, ಅದರ ಮುಚ್ಚುವ ಮುಚ್ಚಳವನ್ನು ಸೂಕ್ಷ್ಮವಾಗಿ ತೆರೆಯುವುದು, ಮುಚ್ಚುವುದು ಎಂಬುದರ ಬಗ್ಗೆ ಅರಿವಿಲ್ಲದೆ, ಅವುಗಳನ್ನು ಮುರಿದು ಕೈಗೆ ಬರುವಂತೆ ಮಾಡಿದರೆ, ಅವುಗಳ ರಿಪೇರಿ  ಖರ್ಚೆ 500 ರಿಂದ ಸಾವಿರ ರೂಪಾಯಿವರೆಗೂ ಬಂದು ತಲುಪುತ್ತದೆ, ಇದರ ಬಗ್ಗೆ ನಾವು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸದಿದ್ದರೆ, ಎಲ್ಲಾ ಕಟ್ಟಡದಲ್ಲಿರುವ ಶೌಚಾಲಯಗಳನ್ನು ದುರಸ್ತಿ ಬರುವಂತೆ ಮಾಡಿ ಹೋಗುವುದು ಸಾಮಾನ್ಯವಾಗುತ್ತದೆ ಎಂದರು.
ಪಾಶ್ಚಿಮಾತ್ಯ ಶೌಚಾಲಯಗಳಿಗೆ ಭಾರತೀಯರು ಇನ್ನೂ ಹೊಂದಿಕೊಂಡಿಲ್ಲ, ಮತ್ತು ಅದರ ತಾಂತ್ರಿಕ ಜ್ಞಾನವನ್ನು  ಸರಿಯಾಗಿ ಅರಿತುಕೊಳ್ಳಲಾಗಿಲ್ಲ, ಅದರಲ್ಲಿ ಅಳವಡಿಸಿರುವ ಅತಿಹೆಚ್ಚಿನ ತಂತ್ರಜ್ಞಾನ, ವಿಜ್ಞಾನವನ್ನ ಜನರು, ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳದೆ, ಯಾವುದಾದರೂ ಒಂದು ಭಾಗವನ್ನ ಅನವಶ್ಯಕವಾಗಿ ಒತ್ತಿ ಹಿಡಿದು, ಅವುಗಳನ್ನ ಮುರಿದು, ಕಿತ್ತು ಬರುವಂತೆ ಮಾಡುವುದು, ಮುಚ್ಚುವ ಮುಚ್ಚಳವನ್ನು ಒರಟಾಗಿ ಮುಚ್ಚುವುದು, ಸಾರ್ವಜನಿಕ ಶೌಚಾಲಯಗಳಲ್ಲಿ ಕಂಡುಬರುತ್ತದೆ. ಅಲ್ಲಿ ಯಾರಾದರೂ ಒಬ್ಬರು ಕಾವಲುಗಾರರು ಇದ್ದರೆ ಮಾತ್ರ ನಿಯಂತ್ರಣದಲ್ಲಿರುತ್ತದೆ, ಆಗ ಮಾತ್ರ ಬಳಕೆದಾರರು ಶಿಸ್ತುಬದ್ಧವಾಗಿ, ನಿಯಮ ಬದ್ಧವಾಗಿ ಅವುಗಳನ್ನು ಉಪಯೋಗಿಸುತ್ತಾರೆ, ಇಲ್ಲದಿದ್ದರೆ ದುರ್ನಡತೆಯಿಂದ, ದುರಾಲೋಚನೆಯಿಂದ, ದ್ವೇಷದಿಂದ ಕೆಲವು ವಸ್ತುಗಳನ್ನ ಮುರಿದು, ಹಾಳು ಮಾಡಿ, ಆ ಶೌಚಾಲಯಗಳನ್ನು ಯಾರು ಬಳಕೆ ಮಾಡದಂತೆ ಮಾಡಿ ಹೋಗುವ ಸಂಭವಗಳು ಹೆಚ್ಚಾಗುತ್ತವೆ ಎಂದರು.
ಪಾಶ್ಚಿಮಾತ್ಯ ಶೌಚಾಲಯವನ್ನು ರಿಪೇರಿ ಮಾಡುವುದು ಅಷ್ಟು ಸುಲಭವಾದ ಮಾತಲ್ಲ, ಅವುಗಳಿಗೆ ತಾಂತ್ರಿಕ ಜ್ಞಾನವಿರಬೇಕು, ಅವುಗಳನ್ನು ರಿಪೇರಿ ಮಾಡುವನು ತಂತ್ರಜ್ಞಾನ ಹೊಂದಿರಬೇಕು, ಅದಕ್ಕೆ ಬೇಕಾದಂತ ಸಾಮಗ್ರಿಗಳು, ಬಿಡಿ ಭಾಗಗಳು ದೊರಕುವಂತಿರಬೇಕು, ಹತ್ತಾರು ಬಿಡಿ ಭಾಗಗಳನ್ನ ಹಾಕಿ, ಮೇಲಿನಿಂದ ನೀರು ಬೀಳುವಂತೆ ವ್ಯವಸ್ಥೆ ಮಾಡಿರುವ ತಂತ್ರಜ್ಞಾನವನ್ನು, ಹಾಳು ಮಾಡುವುದು ತುಂಬಾ ಸುಲಭ. ಯಾವುದಾದರೂ ಒಂದು ಬಟನ್ ಅನ್ನ ಒತ್ತಿ ಹಿಡಿದು, ಮುರಿದು ಹಾಕಿ, ಹಾಳು ಮಾಡಿದರೆ, ಪಾಶ್ಚಿಮಾತ್ಯ ಶೌಚಾಲಯಗಳನ್ನ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ, ಹಾಗಾಗಿ ನಮ್ಮಲ್ಲಿ ಇನ್ನು ವೈಜ್ಞಾನಿಕ ಜ್ಞಾನ ಕಡಿಮೆ ಇರುವ ದೇಶದಲ್ಲಿ, ಇನ್ನೂ ಅವಿದ್ಯಾವಂತರು ಮತ್ತು ದುರಾಲೋಚನೆಯಿಂದ ಕೆಲಸ ಮಾಡುವ ಜನರಿರೂವರೆಗೂ, ಪಾಶ್ಚಿಮಾತ್ಯ ಶೌಚಾಲಯಗಳನ್ನ ಸ್ವಚ್ಛವಾಗಿ, ಭದ್ರವಾಗಿ ಕಾಪಾಡಿಕೊಳ್ಳುವುದು ಕಷ್ಟಕರವಾಗಿದೆ ಎಂದರು.
ಕೇಂದ್ರ ಗ್ರಂಥಾಲಯದಲ್ಲಿರುವ ಶೌಚಾಲಯ ಗೇಟಿನ ಪಕ್ಕದಲ್ಲಿ ಇರುವುದರಿಂದ, ಶೌಚಾಲಯವನ್ನು ಯಾರು ಬೇಕಾದರೂ ಬಳಕೆ ಮಾಡಬಹುದು, ಈಗಿನ ಕಾಲದಲ್ಲಿ ಉಚಿತವಾಗಿ ಶೌಚಾಲಯ ನೀಡಿದರೆ ಖಂಡಿತ ಜನರು ಅವುಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಾರೆ, ಅವುಗಳಲ್ಲಿರುವ ಯಂತ್ರಗಳನ್ನ, ತಂತ್ರಜ್ಞಾನವನ್ನ ಹಾಳುಗೆಡವಿ, ಯಾರಿಗೂ ಬಳಕೆಗೆ, ಬಾರದಂತೆ ಮಾಡಿ ಹೋಗುತ್ತಾರೆ ಹಾಗೂ ಗ್ರಂಥಾಲಯದ ಸುತ್ತಮುತ್ತ ಪ್ರವಾಸಿಗರು, ಪ್ರಯಾಣಿಕರು, ರಸ್ತೆಯಲ್ಲಿ ನಡೆದಾಡಿಕೊಂಡು ಹೋಗುವವರು ಸಹ ಈ ಶೌಚಾಲಯವನ್ನು ಬಳಕೆ ಮಾಡುವಂತ ಅವಕಾಶ ದೊರಕುತ್ತದೆ,  ಅದನ್ನು  ಜನರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ,   ನಿಯಮದ ಪ್ರಕಾರ ಗ್ರಂಥಾಲಯದೊಳಗಿರುವ ಶೌಚಾಲಯವನ್ನು ಗ್ರಂಥಾಲಯಕ್ಕೆ ಬಂದಂತವರು, ಓದುಗರು, ವಿದ್ಯಾರ್ಥಿಗಳು ಮಾತ್ರ ಬಳಕೆ ಮಾಡಿಕೊಳ್ಳಬೇಕೆ ಹೊರತು, ದಾರಿಹೋಕರು, ಪ್ರಯಾಣಿಕರು, ಪ್ರವಾಸಿಗರು, ಸಾರ್ವಜನಿಕರು ಬಳಕೆ ಮಾಡಿಕೊಳ್ಳಬಾರದು ಎಂದು ವಿನಂತಿಸಿಕೊಂಡಿದ್ದಾರೆ.
ಸಾರ್ವಜನಿಕರು ಬಳಕೆ ಮಾಡುವಂತಹ ಶೌಚಾಲಯಗಳನ್ನು ನಗರಸಭೆಯವರು ಹೊರಗಡೆ ರಸ್ತೆಯಲ್ಲಿ ನಿರ್ಮಾಣ ಮಾಡಿ, ಅವುಗಳನ್ನ ನಿರ್ವಹಣೆ ಮಾಡಲು ಒಬ್ಬ ಕಾವಲುಗಾರನಿಟ್ಟು, ಕಡಿಮೆ ವೆಚ್ಚದಲ್ಲಿ ಹಣ ಸಂಗ್ರಹ ಮಾಡಿ, ಜನರಿಗೆ ಶುದ್ಧವಾದ ಶೌಚಾಲಯಗಳನ್ನ ಒದಗಿಸಿ ಕೊಡಬೇಕಾಗಿದೆ. ಇಲ್ಲದಿದ್ದರೆ ಸಾರ್ವಜನಿಕರು, ಪ್ರಯಾಣಿಕರು, ಪ್ರವಾಸಿಗರು, ಗ್ರಂಥಾಲಯದಲ್ಲಿರುವ ಶೌಚಾಲಯವನ್ನು ಬಳಕೆ ಮಾಡಿ, ಅದನ್ನು ಕೆಡಿಸಿ, ಗಲೀಜು ಮಾಡಿ, ಹಾಳು ಮಾಡಿ ಹೋಗುತ್ತಿರುವುದರಿಂದ, ಗ್ರಂಥಾಲಯದ ಸಿಬ್ಬಂದಿಗಳಿಗೆ ಈ ಶೌಚಾಲಯವನ್ನು ರಿಪೇರಿ ಮಾಡಿಸುವುದು, ಸ್ವಚ್ಛವಾಗಿ ಇಟ್ಟುಕೊಳ್ಳುವುದೇ ಒಂದು ದೊಡ್ಡ ತಲೆ ನೋವಾಗಿ ಪರಿಣಮಿಸುತ್ತದೆ ಎಂದರು.
ಭಾರತೀಯರಿಗೆ ಭಾರತೀಯ ಶೌಚಾಲಯಗಳನ್ನೇ ಬಳಕೆ ಮಾಡುವುದು ಸುಲಭ, ಯಾಕೆಂದರೆ ಅದನ್ನ ಬಳಕೆ ಮಾಡಿ ಸ್ವಲ್ಪಮಟ್ಟಿಗೆ ರೂಢಿಯಾಗಿದೆ,, ಕೆಲವರಿಗೆ ಅದು ಸಹ ಇನ್ನು ಬಳಕೆ ಮಾಡಲು ಬರುತ್ತಿಲ್ಲ, ಅಂತವರ ಕೈಗೆ ನಾವು ಪಾಶ್ಚಿಮಾತ್ಯ ಶೌಚಾಲಯಗಳನ್ನು ಕೊಡುತ್ತಿದ್ದೇವೆ,  ಪಾಶ್ಚಿಮಾತ್ಯ ಶೌಚಾಲಯಗಳನ್ನು ಇನ್ನೂ ಸರಿಯಾದ ಪ್ರಮಾಣದಲ್ಲಿ ಬಳಕೆ ಮಾಡುವುದನ್ನು ಜನರು ಕಲಿತಿಲ್ಲ, ಹಾಗಾಗಿ ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಬೇಕಾದರೆ, ನಾವು ಭಾರತೀಯ ಶೌಚಾಲಯಗಳನ್ನು ಹೆಚ್ಚು ನಿರ್ಮಿಸಿ ಕೊಟ್ಟಷ್ಟು, ಸ್ವಚ್ಛತೆ ಮತ್ತು ನಿರ್ವಹಣೆ ಸುಲಭವಾಗುತ್ತದೆ ಎಂದರು.
ಎಲ್ಲಾ ಪಶ್ಚಿಮಾತ್ಯೆ ಊಟದ ಶೈಲಿ, ಪಾಶ್ಚಿಮಾತ್ಯ ಶೌಚಾಲಯ, ಪಾಶ್ಚಿಮಾತ್ಯ ಭಾಷೆ, ಪಾಶ್ಚಿಮಾತ್ಯದ ಉಡುಗೆ, ತೊಡಿಗೆ,. ನಮ್ಮ ಗುಲಾಮಗಿರಿ ಇನ್ನೂ ನಮ್ಮಿಂದ ತೊಲಗಿಲ್ಲ, ನಾವೀಗ ಭಾರತೀಯ ಶೌಚಾಲಯವನ್ನೇ ಕಿತ್ತೆಸೆದು, ಎಲ್ಲಾ ಕಡೆ ಪಾಶ್ಚಿಮಾತ್ಯ ಶೈಲಿಯಲ್ಲಿ ಹೆಚ್ಚು ಬದುಕಲು ಆರಂಭಿಸಿದ್ದೇವೆ. ಶೌಚಾಲಯಗಳ ಬಗ್ಗೆ ಇನ್ನು ನಾವು ಶಿಕ್ಷಣವನ್ನ ಪೂರ್ಣಗೊಳಿಸಿಲ್ಲ,  ಇನ್ನು ಪಾಶ್ಚಿಮಾತ್ಯ ಶೌಚಾಲಯದ ಬಗ್ಗೆ ಮತ್ತೆ ನಾವು ಶಿಕ್ಷಣವನ್ನು ಪ್ರಾರಂಭ ಮಾಡಬೇಕಾಗಿದೆ, ಅಲ್ಲಿಯವರೆಗಾದರೂ ಜನರು ಅವುಗಳನ್ನು ಕಲಿತುಕೊಂಡು, ಸಹಕರಿಸುತ್ತಾ, ಅದರಲ್ಲಿರುವ ತಂತ್ರಜ್ಞಾನವನ್ನು ಕೇಳಿ ತಿಳಿದುಕೊಂಡು, ಸ್ವಚ್ಛವಾಗಿ, ನಿಯಮ ಬದ್ಧವಾಗಿ ಶೌಚಾಲಯಗಳನ್ನು ಬಳಕೆ ಮಾಡಿಕೊಳ್ಳಲಿ ಎಂದು ಪತ್ರಿಕಾ ಪ್ರಕಟಣೆ ಮುಖಾಂತರ ವಿನಂತಿಸಿಕೊಂಡಿದ್ದಾರೆ.
ಶೌಚಾಲಗಳ ಬಳಕೆಯ ಬಗ್ಗೆ ಜನರಿಗೆ ಸರಿಯಾಗಿ ತಿಳಿಯದೆ, ಅಧಿಕಾರಿಗಳು ಶೌಚಾಲಯಗಳಿಗೆ ಬೀಗ ಹಾಕಿ ನಿಯಂತ್ರಿಸುವುದನ್ನ ಕಲಿತುಕೊಳ್ಳುತ್ತಿದ್ದಾರೆ, ಹಾಗಾಗಿ ಜನರು ಇದರ ಬಗ್ಗೆ ಸ್ವಲ್ಪಮಟ್ಟಿಗೆ ಗಂಭೀರವಾಗಿ ಚಿಂತನೆ ಮಾಡಬೇಕು,  ಸಾರ್ವಜನಿಕ ಶೌಚಾಲಯಗಳನ್ನು ತಮ್ಮ ಮನೆಯ ಶೌಚಾಲಯಗಳೆಂದು ತಿಳಿದು ಬಳಕೆ ಮಾಡಬೇಕು, ಇಲ್ಲದಿದ್ದರೆ ಅದಕ್ಕೆ ಬೇಗ ಹಾಕಿ, ಅದನ್ನು ನಿಯಂತ್ರಿಸಿಕೊಂಡು, ಬಳಕೆ ಮಾಡಬೇಕಾಗುತ್ತದೆ ಎಂದು ವಿನಂತಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳು

error: Content is protected !!