MDMA DRUG: ಡ್ರಗ್ಸ್ ಮಾರಾಟ.! ಇಬ್ಬರು ನೈಜಿರಿಯಾ ಪ್ರಜೆಗಳು ಸೇರಿ ಐವರ ಬಂಧನ

ದಾವಣಗೆರೆ: (MDMA DRUGS) ದಾವಣಗೆರೆ ಸಿಇಎನ್ ಹಾಗೂ ಡಿ ಸಿ ಆರ್ ಬಿ ಪೊಲೀಸರ ಜಂಟಿ ಕಾರ್ಯಚರಣೆಯಲ್ಲಿ ನೈಜೀರಿಯಾ ದೇಶದ ಇಬ್ಬರು ಪ್ರಜೆಗಳು ಸೇರಿದಂತೆ 05 ಜನ ಆರೋಪಿತರನ್ನು ಡ್ರಗ್ಸ್ ಮಾರಾಟ ಮಾಡುತ್ತಿದ್ದ ವೇಳೆ ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿ ಬಳಿ ಬಂಧಿಸಲಾಗಿದೆ.
ಆರೋಪಿತರಿಂದ 13 ಗ್ರಾಂ MDMA ಡ್ರಗ್ಸ್ ಹಾಗೂ 6 ಮೊಬೈಲ್ ಮತ್ತು ಒಂದು ಕಾರ್ ನ್ನು ವಶಕ್ಕೆ ಪಡೆದುಕೊಂಡಿದ್ದು ಈ ಬಗ್ಗೆ ಸಿ.ಇ.ಎನ್ ಅಪರಾಧ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣ ತನಿಖೆಯಲ್ಲಿರುತ್ತದೆ,
ದಾವಣಗೆರೆ ಜಿಲ್ಲೆಯ ಸಿ ಇ ಎನ್ ಪೋಲೀಸ್ ತಂಡ ಹಾಗೂ ನೂತನವಾಗಿ ಡಿ ಸಿ ಆರ್ ಬಿ ಪೋಲೀಸ್ ತಂಡಕ್ಕೆ ನೇಮಕವಾಗಿರುವ ಪೋಲೀಸ್ ತಂಡದ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಪ್ರಕರಣ ಬೇಧಿಸಲಾಗಿದೆ.