Income Tax: ದಾವಣಗೆರೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು.! ದಾಖಲೆಗಳ ಪರಿಶೀಲನೆ

income tax investigation in Davanagere

ದಾವಣಗೆರೆ: (Income Tax) ದಾವಣಗೆರೆ ನಗರದಲ್ಲಿ 10 ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಸೇವೆ ಒದಗಿಸುವ ಟೆಂಡರ್ ನಲ್ಲಿ ನಿಯಮಬಾಹಿರ ಕಾರ್ಯಗಳು ನಡೆದಿವೆ ಎಂಬ ಆರೋಪ ಕೇಳಿಬಂದಿತ್ತು. ಸ್ಮಾರ್ಟ್ ಮೀಟರ್ ಸೇವೆ ಒದಗಿಸಲು ಗುತ್ತಿಗೆಯನ್ನು ದಾವಣಗೆರೆ ಮೂಲದ ಕಂಪನಿ ಪಡೆದಿತ್ತು.

ದಾವಣಗೆರೆ ಮೂಲದ ಕಂಪನಿಗೆ ಬೆಸ್ಕಾಂ ನಿಂದ ಕರೆದಿದ್ದ ಟೆಂಡರ್ ನಲ್ಲಿ ಭಾಗವಹಿಸಿ ಗುತ್ತಿಗೆ ಪಡೆದಿತ್ತು. ಟೆಂಡರ್ ನಿಯಮಾವಳಿಗಳನ್ನು ಉಲ್ಲಂಘಿಸಿ ಕಂಪನಿಗೆ ಗುತ್ತಿಗೆ ನೀಡಿರುವ ಆರೋಪ ಕೇಳಿ ಬಂದಿತ್ತು.

ದಾವಣಗೆರೆ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಕಂಪನಿಯ ಕಛೇರಿ ಹಾಗೂ ಕಂಪನಿಯ ನಿರ್ದೇಶಕರ ಮನೆಯಲ್ಲಿ ಐಟಿ ಅಧಿಕಾರಿಗಳಿಂದ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ,

ರಾಜ್ಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದ್ದ ಸ್ಮಾರ್ಟ್ ಮೀಟರ್ ಸೇವೆಯ ವಿಷಯದಲ್ಲಿ ಕರ್ನಾಟಕ ಬಿ ಜೆ ಪಿ ಎಂ ಎಲ್ ಎ ಡಾ ಅಶ್ವಥ್ ನಾರಾಯಣ ಹಾಗೂ ಇನ್ನಿತರೆ ಎಂ ಎಲ್ ಎ ಗಳಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು. ನ್ಯಾಯಾಲಯವು ಕರ್ನಾಟಕ ಲೋಕಾಯುಕ್ತ ಇಲಾಖೆಯಲ್ಲಿ ಪಿಸಿಆರ್ ದಾಖಲಿಸಿ ವರದಿ ನೀಡುವಂತೆ ಇತ್ತೀಚೆಗೆ ಆದೇಶ ಮಾಡಿದೆ.

ದಾವಣಗೆರೆಯಲ್ಲಿ ನಡೆದಿರುವ ಐಟಿ ಅಧಿಕಾರಿಗಳ ಪರಿಶೀಲನೆ ಬಗ್ಗೆ ಆದಾಯ ತೆರಿಗೆ ಇಲಾಖೆಯಿಂದ ಅಧಿಕೃತವಾಗಿ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

error: Content is protected !!