JDS:ಎರಡು ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ

ದಾವಣಗೆರೆ, ಹರಿಹರ: (JDS) ಜನರೊಂದಿಗೆ ಜನತಾದಳ ರಾಜ್ಯ ಪ್ರವಾಸವು 50 ವಿಧಾನಸಭಾ ಕ್ಷೇತ್ರದಲ್ಲಿ ಯಶಸ್ವಿಯಾಗಿ ಸಾಗಿದೆ. ಇದು ಕೇವಲ ಒಂದು ದಿನದ ಕಾರ್ಯಕ್ರಮ ಆಗಬಾರದು. ವೇದಿಕೆ ಮೇಲೆ ನಿಂತು ಭಾಷಣ ಮಾಡಿ ಹೋದ್ರೆ ಪಕ್ಷ ಸಂಘಟನೆ ಆಗಲ್ಲ ನಾವು ಹೋದ ಬಳಿಕ ನೀವು ಎಷ್ಟು ಸಂಕಲ್ಪ ತೊಟ್ಟಿದ್ದೀರಾ ಅನ್ನೋದು ಮುಖ್ಯ.
ಜನರೊಂದಿಗೆ ಜನತಾದಳ ಎಂಬ ಹೆಸರಿನಲ್ಲಿ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ಅವರು ಇಂದು 50 ವಿಧಾನಸಭಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಮುಗಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರದ ಭಾಗೀರಥಿ ಕನ್ವೆನ್ಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ-ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಕ್ಷ ಸಂಘಟನೆ ದೃಷ್ಟಿಯಿಂದ ಮೊದಲ ಬಾರಿಗೆ ದಾವಣಗೆರೆ ಜಿಲ್ಲೆ ಹರಿಹರ ಕ್ಷೇತ್ರಕ್ಕೆ ಬಂದಿದ್ದೆನೆ. ಹೆಚ್.ಎಸ್.ಶಿವಶಂಕರ ಅವರಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಅನ್ನೋ ಚಿಂತನೆ ಇದೆ. ಜೆಡಿಎಸ್‌ನಲ್ಲಿ ಸ್ವಾರ್ಥದಿಂದ ಪಕ್ಷ ತ್ಯಜಿಸಿ ಬೇರೆ ಬೇರೆ ಪಕ್ಷಕ್ಕೆ ಹೋದ ಸಂಖ್ಯೆ ಬಹಳ ದೊಡ್ಡದಿದೆ ಎಂದು ಹೇಳಿದರು. ಹೆಚ್.ಎಸ್.ಶಿವಶಂಕರ್ ಅವರು ದೇವೇಗೌಡರು, ಕುಮಾರಣ್ಣ ಜೊತೆ ಕುಟುಂಬ ಸದಸ್ಯರ ರೀತಿ ಇದ್ದಾರೆ. ನಿರಂತರವಾಗಿ ಪಕ್ಷದ ಸೇವೆ ಮಾಡುತ್ತಿದ್ದಾರೆ. ಪಕ್ಷ ಏನೇ ಜವಾಬ್ದಾರಿ ನೀಡಿದರೂ ನಿಭಾಯಿಸುವೆ ಎನ್ನುವ ಅವರ ಮನಸ್ಥಿತಿ ಅದಕ್ಕೆ ಯಾರಿಂದಲೂ ಬೆಲೆ ಕಟ್ಟಕ್ಕಾಗಲ್ಲ ಎಂದು ತಿಳಿಸಿದರು.
ಹೆಚ್.ಎಸ್.ಶಿವಶಂಕರ್ ಅವರ ತಂದೆ ಮಂತ್ರಿಯಾಗಿ ಸೇವೆ ಸಲ್ಲಿಸಿದ ಇತಿಹಾಸ ಇದೆ. ಅವರ ರಾಜಕಾರಣದ ಬೆಳವಣಿಗೆಯ ಬಗ್ಗೆ ದಿಟ್ಟವಾದ ನಂಬಿಕೆ ಇಟ್ಟುಕೊಂಡಿದ್ದೇನೆ. ರಾಜ್ಯಮಟ್ಟದ ನಾಯಕರು ಕೆಳಮಟ್ಟದಿಂದ ಪಕ್ಷ ಕಟ್ಟುವ ಸವಾಲು ಹಾಕಿದ್ದಾರೆ. ಎಂತ ಕಷ್ಟ ಕಾಲದಲ್ಲೂ ಧೃತಿಗೆಡದೆ ಪಕ್ಷ ಕಟ್ಟಿ ಬೆಳೆಸಿದ್ದಾರೆ ಎಂದು ತರನು ನಿಖಿಲ್ ಕುಮಾರಸ್ವಾಮಿ ಅವರ ಹುರಿದುಂಬಿಸಿದರು.
ಮೋದಿಯವರ ಆಡಳಿತ ನೋಡಿ ದೇವೇಗೌಡರು ಮೈತ್ರಿ ಬಗ್ಗೆ ನಿರ್ಧಾರ ಮಾಡಿದ್ರು. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾವು ಹಾಗೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ನಮ್ಮ ಮೈತ್ರಿ ಗಟ್ಟಿಯಾಗಿದೆ ಸ್ಥಳೀಯ ಚುನಾವಣೆಗಳಲ್ಲೂ ಅದು ಮುಂದುವರಿಯುತ್ತೆ
ಎಂದು ಹೇಳಿದರು. ಕೆಳಮಟ್ಟದಿಂದ ಪಕ್ಷ ಗಟ್ಟಿ ಮಾಡಬೇಕಿದೆ. ಜಿ.ಪಂ., ತಾ.ಪಂ. ಚುನಾವಣೆ ವೇಳೆ ನೀವು ಕೆಲಸ ಮಾಡಬೇಕು.
ಡಿಸೆಂಬರ್ ಜನವರಿಯಲ್ಲಿ ಗ್ರಾ.ಪಂ. ತಾ.ಪಂ. ಜಿ.ಪಂ. ಚುನಾವಣೆ ಆಗಮಿಸಲಿದೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಎರಡು ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಸರ್ಕಾರದ ಸಾಧನೆ ಸಂಪೂರ್ಣ ಶೂನ್ಯ. ಅಭಿವೃದ್ಧಿ ಅನ್ನೋದು ಸಂಪೂರ್ಣ ಕುಸಿದು ಹೋಗಿದೆ. ಅವರ ಪಕ್ಷದ ಶಾಸಕರೇ ಅಸಹಾಯಕತೆ ಹೊರ ಹಾಕಿದ್ದಾರೆ. ಹಿರಿಯ ಶಾಸಕರುಗಳೇ ಯಾವ ರೀತಿ ಮಾತನಾಡಿದ್ದಾರೆ ನಾವು ನೀವು ನೋಡಿದ್ದೇವೆ ಎಂದು ಕಿಡಿಕಾರಿದರು.
ಜನರೊಂದಿಗೆ ಜನತಾದಳ ಒಂದೂವರೆ ತಿಂಗಳಿಂದ ಹಲವು ಜಿಲ್ಲೆ ತಾಲೂಕುಗಳಿಗೆ ಭೇಟಿ ನೀಡುತಿದ್ದೇನೆ. ಒಂಬತ್ತು ದಿನಗಳ ಕಾಲ ಅಧಿವೇಶನ ಇರುವ ಹಿನ್ನೆಲೆಯಲ್ಲಿ ಆ.22 ರಿಂದ ಮತ್ತೆ ಅಭಿಯಾನ ಕೈಗೊಳ್ಳುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
ತಾ.ಪಂ., ಜಿ.ಪಂ. ಚುನಾವಣೆ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ, ಪಕ್ಷ ಕಾರ್ಯಕರ್ತರ ಜೊತೆ ಇದೆ. ಕಾರ್ಯಕರ್ತರಲ್ಲಿ ಹೊಸ ಹುರುಪು ಸೃಷ್ಟಿಸಲು ಸದಸ್ಯತ್ವ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ.50 ಲಕ್ಷ ಸದಸ್ಯತ್ವ ಟಾರ್ಗೆಟ್ ಇಟ್ಟು ಕೊಂಡಿದ್ದೇವೆ ಎಂದು ಹೇಳಿದರು.
ಪಂಚಾಯತಿ ಮಟ್ಟದಲ್ಲಿ ಬೂತ್ ಮಟ್ಟದಲ್ಲಿ ಅಭ್ಯರ್ಥಿಗಳ ನೇತೃತ್ವದಲ್ಲಿ ಗ್ರೌಂಡ್‌ಗೆ ಇಳಿದು ಕೆಲಸ ಮಾಡಬೇಕು. ದೇವೇಗೌಡರ ಸೂಚನೆ ಹಾಗೂ ಕುಮಾರಸ್ವಾಮಿಯವರ ಮಾರ್ಗದರ್ಶನ ಇದೆ. ಮುಂಬರುವ ದಿನಗಳಲ್ಲಿ ಜನತಾದಳ ಪಕ್ಷವನ್ನು ಕೇಡರ್‌ಬೇಸ್ ಪಾರ್ಟಿಯಾಗಿ ಕಟ್ಟಲು ಕಾರ್ಯಕರ್ತರ ಸಹಕಾರದಿಂದ ಮಾಡ್ತೀವಿ ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು.
ಅಧಿಕೃತವಾಗಿ ಮೆಂಬರ್ಶಿಪ್ ಡ್ರೈವ್ ಬಿಡುಗಡೆ ಮಾಡ್ತೀವಿ ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ದೊಡ್ಡ ಸಮಾವೇಶ ಮಾಡ್ತೀವಿ. ಯಾವ ರೀತಿ ಪಕ್ಷ ಕಟ್ಟಬೇಕು, ಪಕ್ಷ ಸಂಘಟನೆ ಬಗ್ಗೆ ಸಮಾವೇಶ ಮಾಡ್ತೀವಿ ಎಂದರು. 9 ದಿನಗಳ ಅಧಿವೇಶನದಲ್ಲಿ ಜೆಡಿಎಸ್ ಶಾಸಕರು ವಿಧಾನ ಮಂಡಲದಲ್ಲಿ ಚರ್ಚೆ ಮಾಡುವ ವಿಚಾರಗಳ ಬಗ್ಗೆ ಹೆಚ್‌ಡಿಕೆ ಜೊತೆ ಚರ್ಚೆ ನಡೆಸಿದ್ದಾರೆ.ರಸಗೊಬ್ಬರವನ್ನ ರೈತರಿಗೆ ಮುಟ್ಟಿಸಲು ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಕೃಷಿ ಮಂತ್ರಿಗಳು ಕೇಂದ್ರದ ಕೃಷಿ ಮಂತ್ರಿ ಮೇಲೆ ಆಪಾದನೆ ಮಾಡಿದ್ರು. ಕೇಂದ್ರ ಸರ್ಕಾರ ಸಮರ್ಪಕ ರಸಗೊಬ್ಬರ ಪೂರೈಕೆ ಮಾಡಿಲ್ಲ ಅಂತ. ಅದರ ಸಂಪೂರ್ಣ ವಿವರ ಪಡೆದಿದ್ದೇನೆ, ಇನ್ನೆರಡು ದಿನಗಳಲ್ಲಿ ಸುದ್ದಿಗೋಷ್ಟಿ ಮಾಡುವೆ ಎಂದು ತಿಳಿಸಿದರು.
ರೈತರು ರಸಗೊಬ್ಬರ ವಿಚಾರದಲ್ಲಿ ಸಂಕಷ್ಟದಲ್ಲಿ ಇದ್ದಾರೆ. ಈ ವಿಚಾರ ಸದನದಲ್ಲಿ ಪ್ರಸ್ತಾಪಿಸಲು ಶಾಸಕರಿಗೆ ಕುಮಾರಣ್ಣ ಹೇಳಿದ್ದಾರೆ. ಪ್ರಾಮಾಣಿಕವಾಗಿ ರೈತರ ಪರ ಕೆಲಸ ಮಾಡಿದ ಪಕ್ಷ ಜನತಾದಳ ಪಕ್ಷ ಎಂದು ಹೇಳಿದರು. ಇನ್ನು ಕಾರ್ಯಕ್ರಮದಲ್ಲಿ ರಾಮು ಎಂಬುಬರು 9 ವರ್ಷಗಳ ಕಾಲ ನಿರ್ಮಾಣ ಮಾಡಿದ ಕಲಾಕೃತಿಯನ್ನು ನಿಖಿಲ್ ಕುಮಾರಸ್ವಾಮಿ ಅವರಿಗೆ ಉಡುಗೊರೆ ನೀಡಿದರು.
ನನ್ನ ಅಭಿಮನ್ಯು ಪಾತ್ರ ಮೆಚ್ಚಿ ರಾಮು ಅವರು ಪ್ರೀತಿ ಪೂರ್ವ ಉಡುಗೊರೆ ನೀಡಿದ್ದಕ್ಕೆ ನಿಖಿಲ್ ಅವರಿಗೆ ಅಭಿನಂದನೆಗಳು ತಿಳಿಸಿದರು.
ಕಾರ್ಯಕ್ರಮಕ್ಕೂ ಮೊದಲು ದಕ್ಷಿಣ ಭಾರತದ ಕಾಶಿ ಎಂದೇ ಹೆಸರಾಗಿರುವ ಹರಿಹರದ ಶ್ರೀ ಹರಿಹರೇಶ್ವರ ದೇವಾಲಯಕ್ಕೆ ತೆರಳಿ ಶ್ರೀ ಹರಿಹರೇಶ್ವರ ಸ್ವಾಮಿಯ ದರ್ಶನ ಪಡೆಡೊಕೊಂಡರು.
ಇನ್ನು ಕ್ಷೇತ್ರಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿಗೆ ಬೃಹತ್ ಗಾತ್ರದ ಹೂವಿನ ಹಾರ ಹಾಕುವ ಮೂಲಕ ಭರ್ಜರಿ ಸ್ವಾಗತ ಕೋರಿದರು. ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರ ಜೊತೆಗೋಡಿ ಬೈಕ್ ಜಾಥ ನಡೆಸಿದರು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪಕ್ಷದ ಬಾವುಟ ಹಿಡಿದು ದೇವೇಗೌಡರಿಗೆ, ಕುಮಾರಣ್ಣನಿಗೆ ಜೆಡಿಎಸ್ ಪಕ್ಷಕ್ಕೆ ಜೈಕಾರ ಕೂಗಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ,ಮಾಜಿ ಶಾಸಕರಾದ ತಿಮ್ಮರಾಯಪ್ಪ, ರಾಜಾ ವೆಂಕಟಪ್ಪ ನಾಯಕ್, ಮಾಜಿ ವಿಧಾನಪರಿಷತ್ ಸದಸ್ಯರಾದ ಆರ್. ಚೌಡರೆಡ್ಡಿ, ಜಿಲ್ಲಾಧ್ಯಕ್ಷರಾದ ಬಿ. ಚಿದಾನಂದ, ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ರಶ್ಮಿ ರಾಮೇಗೌಡ ಅವರು ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.