Love Murder: ಪ್ರೀತಿ ಹೆಸರಲ್ಲಿ ಮೋಸ ಮಾಡಿದ್ದ ಆರೋಪಿ ಹತ್ಯೆಗೆ ಮೊದಲೇ ಸ್ಕೆಚ್ ಹಾಕಿದ್ದ. ಹತ್ಯೆ ರಹಸ್ಯ ಬೇದಿಸಿದ ಪೋಲೀಸ್

rapist of college girl from chitradurga attested

ದಾವಣಗೆರೆ: (Love Murder) ಚಿತ್ರದುರ್ಗದಲ್ಲಿ ವಿಧ್ಯಾರ್ಥಿನಿ ವರ್ಷಿತಾ ಹತ್ಯೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.ಪ್ರೀತಿ ಹೆಸರಲ್ಲಿ ಮೋಸ ಮಾಡಿದ್ದ ಆರೋಪಿ ಹತ್ಯೆಗೆ ಮೊದಲೇ ಸ್ಕೆಚ್ ಹಾಕಿದ್ದ. ಹತ್ಯೆ ರಹಸ್ಯ ಬೇದಿಸಿದ ಪಿನ್ ಟು ಪಿನ್ ಡೀಟೇಲ್ ಲಭ್ಯವಾಗಿದ್ದು. ಹರ್ಷಿತಾ ಸಾವಿಗೂ ಮುನ್ನ ಚೇತನ್ ಜತೆ ಇದ್ದ ಕಡೇ ಕ್ಷಣದ ದೃಷ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತ ವರದಿ ಇಲ್ಲಿದೆ.

ಕೋಟೆನಾಡು ಚಿತ್ರದುರ್ಗದಲ್ಲಿ ವಿಧ್ಯಾರ್ಥಿನಿ ವರ್ಷಿತಾ ಹತ್ಯೆ ಕೇಸ್ ಜನರ ಮನಸ್ಸನ್ನ ಧಗ ಧಗಿಸಿದೆ. ಪ್ರೀತಿ ಹೆಸರಲ್ಲಿ ಮೋಸ ಮಾಡಿದವನಿಗೆ ಮದುವೆ ಆಗು ಅಂದಿದ್ದಕ್ಕೆ ಹತ್ಯೆ ಮಾಡಿದ್ದಾನೆ. ಇವನನ್ನ ಬಂಧಿಸ್ಬೇಕು ನ್ಯಾಯ ಕೊಡಿ ಅಂತ ಪೊಷಕರು, ದಲಿತಪರ, ಹಿಂಧೂಪರ, ಕನ್ನಡಪರ ಸಂಘಟನೆಗಳು ಬೀದಿಗಳಿದು ಹೋರಾಟ ಮಾಡಿವೆ. ಪೋಲೀಸರು ಆರೋಪಿ ಚೇತನ್ ಬಂಧಿಸಿ ತನಿಖೆ ಶುರುಮಾಡಿದ್ದಾರೆ. ಆಗ್ಲೇ ನೋಡಿ ಅಮಾಯಕ ವರ್ಷಿತಾಳನ್ನ ಕೊಲ್ಲೋಕೆ ಹೇಗೆಲ್ಲ ಪ್ಲಾನ್ ಮಾಡಿದ್ದ, ಯಾಕೆ ಅಂತ ಸತ್ಯ ಬಾಯ್ಬಿಟ್ಟಿದ್ದಾನೆ.

ಕೊಲೆಗೂ ಮುನ್ನ ಅವರಿಬ್ಬರೂ ಜತೆಗೆ ನಡೆದುಕೊಂಡ ಹೋಗಿದ್ದು, ಇವನು ಪೆಟ್ರೋಲ್ ಖರೀದಿ ಮಾಡಿ ತೆರಳಿದ್ದು ಎಲ್ಲಾ ದೃಷ್ಯ ಸಿಸಿ ಕ್ಯಾಮರಾಗಳಲ್ಲಿ ಸೆರೆ ಆಗಿವೆ. ಅದೇನಂದ್ರೆ ಆಗಸ್ಟ್ 14 ಕ್ಕೆ ಹಾಸ್ಟೆಲ್ನಿಂದ ತೆರಳಿದ್ದ ವರ್ಷಿತಾ 18 ತಾರೀಕು ಮದ್ಯಾಹ್ನ ಹೊತ್ತಿಗೆ ಕೊಲೆಯಾಗಿ ಹೋಗಿದ್ದ ಸತ್ಯ ಬಯಲಾಗಿದೆ. ನಿನ್ನ ಬೇಟಿ ಆಗ್ಬೇಕು ಅಂದವಳನ್ನ ಬೇಟಿಗೂ ಮುನ್ನ ಅವಳ ಕಥೆ ಮುಗಿಸೋಕೆ ಸ್ಕೆಚ್ ಹಾಕಿದ್ನಂತೆ. ಅದಕ್ಕಾಗಿ ನಗರದ ಜೆಸಿಆರ್ ರಸ್ತೆಯ ಪೆಟ್ರೋಲ್ ಬಂಕಲ್ಲಿ ಒಂದು ಲೀಟರ್ ಪೆಟ್ರೋಲ್ ತುಂಬಿಸ್ಕಂಡು ಜತೆಗೆ ತೆರಳಿದ್ದ. ಗೋನೂರು ರಸ್ತೆಯ RTO ಬ್ರಿಡ್ಜ್ ಬಳಿಯಿಂದ ಕೊಲೆ ಮಾಡಿದ್ದ ಸ್ಪಾಟ್ ಗೆ ನಡೆಸಿಕೊಂಡೇ ಕರೆದೊಯ್ದಿದ್ದ.

ಅಲ್ಲಿಗೆ ಹೋಗ್ತಿದ್ದಂತೆ ವರ್ಷಿತಾ ಜತೆ ಮದುವೆ ವಿಚಾರಕ್ಕೆ ಜಗಳ ತೆಗೆದು ಹಲ್ಲೆ ಮಾಡಿದ್ದ. ಹಲ್ಲೆ ಮಾಡ್ತಿದ್ದಂತೆ ಕುಸಿದು ಬಿದ್ದ ವರ್ಷಿತಾಳ ಕುತ್ತಿಗೆ ಹಿಸುಕಿ ಕೊಂದು. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಆದ್ರೆ ಅಂದು ಮಳೆ ಬರ್ತಿದ್ದ ಕಾರಣ ಸರಿಯಾಗಿ ಸುಟ್ಟಿರ್ಲಿಲ್ಲ. ಮುಂದುವರೆದು ಅದೇ ದಿನ ಸಂಜೆ ಕತ್ತಲಾಗ್ತಿದ್ದಂತೆ ಮಾವನ ಬೈಕ್ ಏರಿ ಮತ್ತೆ ಗೋನೂರು ಬ್ರಿಡ್ಜ್ ಬಳಿಯ ಪೆಟ್ರೋಲ್ ಬಂಕಲ್ಲಿ ಒಂದು ಲೀಟರ್ ಪೆಟ್ರೋಲ್ ಕೊಂಡೊಯ್ದು ಮೃತದೇಹ ಸುಟ್ಟಿದ್ದಾನೆ. ಈ ಎಲ್ಲಾ ಚಲನವಲನ ಸಿಸಿಟಿವಿಯಲ್ಲಿ ಸೆರೆ ಆಗಿವೆ. ಸಾಕ್ಷಿ ನಾಶ ಮಾಡೋಕೆ ಪ್ಲಾನ್ ಮಾಡಿದ್ದ ಆರೋಪಿ ಚೇತನ್ ಪೊಲೀಸರು ಬಂಧಿಸಿ ಸ್ಪಾಟದ ಮಹಜರ್ ಮಾಡಿ ಸಾಕ್ಷಿ ಕಲೆ ಹಾಕಿರುವ ಬಗ್ಗೆ ಚಿತ್ರದುರ್ಗ ಎಸ್ ಪಿ ರಂಜಿತ್ ಕುಮಾರ್ ಬಂಡಾರು ಮಾಹಿತಿಯನ್ನು ತಿಳಿಸಿದ್ದಾರೆ

ಇನ್ನೂ ಈ ವರ್ಷಿತಾ ಗೂ ಆರೋಪಿಗೂ ಪರಿಚಯ ವಾಗಿದ್ದು ಹೇಗೆ ಅನ್ನೋದು ನಿಗೂಢ ವಾಗಿತ್ತು. ಈ ಕುರಿತೂ ಮಹಿತಿ ಲಭ್ಯವಾಗಿದೆ. ಅದೇನಂದ್ರೆ ಇನ್ಸ್ಟಾಗ್ರಾಂ ಮೂಲಕ ವರ್ಷಿತಾಳನ್ನ ಪರಿಚಯ ಮಾಡಿಕೊಂಡಿದ್ದ ಆರೋಪಿ ಚೇತನ್ ಕೆಲ ದಿನಗಳ ಬಳಿಕ ಕೆಲಸ ಕೊಡಿಸೋ ನೆಪದಲ್ಲಿ ರೆಸ್ಯೂಮ್ ಇಸ್ಕೊಂಡಿದ್ದ. ಬಳಿಕ ಫೋನ್ ನಂಬರ್ ಪಡೆದು ಪರಸ್ಪರ ಪರಿಚಯ ಪ್ರೇಮಕ್ಕೆ ತಿರುಗಿತ್ತು ಎನ್ನಲಾಗಿದೆ. ಈ ಕುರಿತು ಸ್ವತಃ ಆರೋಪಿಯೇ ಹೇಳಿಕೊಂಡಿದ್ದಾನೆ.

ಆದ್ರೇ ಇಷ್ಟೆಲ್ಲ ಪ್ರೀತಿ ಪ್ರೇಮದ ನಾಟಕ ಮಾಡಿದ್ದವನು ಮದುವೆ ಆಗು ಅಂದ್ರೆ ನಿರಾಕರಣೆ ಮಾಡಿದ್ನಂತೆ. ಇದರಿಂದಲೇ ಇಬ್ಬರ ನಡುವೆ ಜಗಳ ನಡೆದು ಹತ್ಯೆ ಮೂಲಕ ಇನ್ಸ್ಟಾಗ್ರಾಮ್ ಪ್ರೀತಿ ಅಂತ್ಯವಾಗಿದೆ. ಇದ್ರಿಂದ ಮಗಳನ್ನ ಕಳಕೊಂಡ ಕುಟುಂಬ ಕಣದಣೀರ ಕೋಡಿ ಹರಿಸಿದೆ. ಸದ್ಯ ಮರಣೋತ್ತರ ಪರಿಕ್ಷೆ ನಡೆಸಿದ ಪೊಲೀಸ್ ಇಲಾಖೆ, ವೈದ್ಯರು ಮೃತದೇಹವನ್ನ ಪೊಷಕರಿಗೆ ನೀಡಿದ್ದು, ಅಂತ್ಯ ಸಂಸ್ಕಾರ ಮಾಡಲಾಗಿದೆ. ಈ ವೇಳೆ ವರ್ಷಿತಾ ತಾಯಿ, ಪೋಷಕರೂ, ತನ್ನ ಕಂದನ್ನ ಕೊಂದವನ ಬಿಡಬೇಡಿ, ಅವನಿಗೆ ಕಠಿಣ ಶಿಕ್ಷೆ ಆಗಬೇಕು, ಅಂತೆಲ್ಲ ವರ್ಷಿತಾ ಕುಟುಂಬದವರು ಆಗ್ರಹಿಸಿದ್ದಾರೆ.

ಒಟ್ಟಾರೇ ವರ್ಷಿತಾ ಭೀಕರ ಹತ್ಯೆ ಹಿಂದೆ ಪ್ರೀತಿ ಹೆಸರಲ್ಲಿ ಮೋಸ ಆಗಿದೆ ಅನ್ನೋ ರಹಸ್ಯ ಬಯಲಾಗಿದೆ. ಅರೋಪಿ ಹಾಕಿದ್ದ ಪ್ರೀಪ್ಲಾನ್ ಮರ್ಡ್ ಸಂಚು ಸಿಸಿ ಟಿವಿಯಲ್ಲಿ ಸೆರಯಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದು ಸಂತ್ರಸ್ಥೆಯ ಕುಟುಂಬಕ್ಕೆ ನ್ಯಾಯ ಕೊಡುವ ನಿಟ್ಟಿನಲ್ಲಿ ಸಾಕ್ಷಿ ಕಲೆ ಹಾಕುತ್ತಿದ್ದಾರೆ. ಆದ್ರೇ ಗೊತ್ತು ಗುರಿ ಇಲ್ಲದವನ ಮೋಸಕ್ಕೆ ವಿದ್ಯಾರ್ಥಿನಿ ಬಲಿಯಾಗಿದ್ದು ಕುಟುಂಬಕ್ಕೆ ಸಂಕಟ ತಂದಿದೆ. ಸಮಾಜಕ್ಕೆ ಆತಂಕ ಉಂಟಾಗಿದೆ.

ಇತ್ತೀಚಿನ ಸುದ್ದಿಗಳು

error: Content is protected !!